Webdunia - Bharat's app for daily news and videos

Install App

ರಹಾನೆಯನ್ನು ಏಕದಿನದಲ್ಲಿ ಆಡಿಸುವುದು ಕಷ್ಟ: ಧೋನಿ ಸುಳಿವು

Webdunia
ಶನಿವಾರ, 10 ಅಕ್ಟೋಬರ್ 2015 (20:12 IST)
ಅಜಿಂಕ್ಯಾ ರಹಾನೆ ಅವರನ್ನು ಆಡಿಸದೇ ಇರುವುದಕ್ಕೆ ಈ ಮುಂಚೆ ಟೀಕೆಗೆ ಗುರಿಯಾಗಿದ್ದ ಭಾರತದ ನಾಯಕ ಧೋನಿ ಭಾನುವಾರ ಪುನಃ ದಕ್ಷಿಣ ಆಫ್ರಿಕಾ ವಿರುದ್ಧ ಏಕ ದಿನ ಪಂದ್ಯಕ್ಕೆ ರಹಾನೆಯನ್ನು ಆಡಿಸದಿರುವ ಬಗ್ಗೆ ಸುಳಿವು ನೀಡಿದ್ದಾರೆ.

 ಸೀಮಿತ ಓವರುಗಳಲ್ಲಿ ಸಾಕಷ್ಟು ರನ್ ಸ್ಕೋರ್ ಮಾಡುವುದಿಲ್ಲವೆಂದು ರಹಾನೆಯನ್ನು ಟೀಕಿಸಿದ್ದ ಧೋನಿ, ಮುಂಬೈ ಆಟಗಾರ ಮೇಲಿನ ಕ್ರಮಾಂಕದಲ್ಲಿ ಮಾತ್ರ ಆಡಬೇಕು. ಆದರೆ ಐದು ಅಥವಾ 6ನೇ ಕ್ರಮಾಂಕದಲ್ಲಿ ಆಡಿಸಲಾಗುವುದಿಲ್ಲ. ರೋಹಿತ್, ಧವನ್ ಮತ್ತು ಕೊಹ್ಲಿ ಅಗ್ರ ಮೂರು ಕ್ರಮಾಂಕಗಳಲ್ಲಿದ್ದು, ರಹಾನೆಯನ್ನು ಆಡಿಸುವುದು ಕಷ್ಟ ಎಂದು ಇಂಗಿತ ವ್ಯಕ್ತಪಡಿಸಿದರು. 
 
  ರಹಾನೆ ನಾಲ್ಕನೇ ಕ್ರಮಾಂಕದಲ್ಲಿ ಆಡಬಹುದು. ಆದರೆ ನಾಯಕ ಧೋನಿ ಸ್ವತಃ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಮೂಲಕ  ಫಿನಿಷರ್ ಪಾತ್ರವನ್ನು ಬೇರೆಯವರಿಗೆ ವಹಿಸಲು ನೋಡುತ್ತಿದ್ದಾರೆ. ರಹಾನೆಯನ್ನು ಈಗ ಆಡಿಸುವುದು ಕಷ್ಟವಾಗಿದೆ. ನಾನು ಐದನೇ ಅಥವಾ ಆರನೇ ಕ್ರಮಾಂಕದ ಆಟಗಾರನತ್ತ ನೋಡುವುದಾದರೆ ರಹಾನೆ ಅದಕ್ಕೆ ಸೂಕ್ತ ಆಟಗಾರರಲ್ಲ. ಅವರ ಬಲವು ಮೇಲಿನ ಕ್ರಮಾಂಕದ ಆಟ. ಅವಕಾಶ ನೀಡಿದರೆ ನಾವು ಅವರನ್ನು ಅಗ್ರ ಮೂರರ ಕ್ರಮಾಂಕದಲ್ಲಿ ಆಡಿಸಲು ಯತ್ನಿಸುತ್ತೇವೆ. ಇಲ್ಲದಿದ್ದರೆ 11 ಮಂದಿಯ ತಂಡದಲ್ಲಿ ಅವರಿಗೆ ಸ್ಥಾನ ನೀಡುವುದು ಕಷ್ಟವಾಗುತ್ತದೆ ಎಂದು ಧೋನಿ ಪ್ರತಿಕ್ರಿಯಿಸಿದ್ದಾರೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments