Select Your Language

Notifications

webdunia
webdunia
webdunia
webdunia

ಐಪಿಎಲ್‌ನಲ್ಲಿ ಆಡಿ ಟೆಸ್ಟ್ ತಂಡಕ್ಕೆ ನೇರವಾಗಿ ಬರುವಂತಿಲ್ಲ: ಆಂಬ್ರೋಸ್

ಐಪಿಎಲ್‌ನಲ್ಲಿ ಆಡಿ ಟೆಸ್ಟ್ ತಂಡಕ್ಕೆ ನೇರವಾಗಿ ಬರುವಂತಿಲ್ಲ: ಆಂಬ್ರೋಸ್
ಲಂಡನ್ , ಶುಕ್ರವಾರ, 22 ಮೇ 2015 (12:06 IST)
ಐಪಿಎಲ್‌ನಲ್ಲಿ ಆಡುತ್ತಿರುವ ಕ್ಯಾರಿಬಿಯನ್ ಆಟಗಾರರು ಟೆಸ್ಟ್ ತಂಡಕ್ಕೆ ನೇರವಾಗಿ ವಾಪಸು ಬಂದು ಸೇರಬಹುದೆಂದು ನಿರೀಕ್ಷಿಸುವಂತಿಲ್ಲ ಎಂದು ವೆಸ್ಟ್ ಇಂಡೀಸ್ ಪ್ರಸಿದ್ಧ ಆಟಗಾರ ಕರ್ಟ್ಲಿ ಆಂಬ್ರೋಸ್  ಕ್ಯಾರಿಬಿಯನ್‌ನ  ಮುಖ್ಯ ಕ್ರಿಕೆಟಿಗರಿಗೆ ಎಚ್ಚರಿಸಿದ್ದಾರೆ. 
 
ಆಂಬ್ರೋಸ್ ಈಗ ವೆಸ್ಟ್ ಇಂಡೀಸ್ ಕೋಚಿಂಗ್ ಸಿಬ್ಬಂದಿಯ ಸದಸ್ಯರಾಗಿದ್ದು,  ಕ್ರಿಸ್ ಗೇಲ್ ಮುಂತಾದ ಐಪಿಎಲ್ ಸ್ಟಾರ್‌ಗಳಿಲ್ಲದ  ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್  ವಿರುದ್ಧ ಸರಣಿಯಲ್ಲಿ 1-1 ಡ್ರಾ ಮಾಡಿಕೊಂಡ ಸಾಧನೆ ಮಾಡಿದ್ದಕ್ಕೆ ಪ್ರತ್ಯಕ್ಷದರ್ಶಿಯಾಗಿದ್ದಾರೆ. 
 
ಟ್ವೆಂಟಿ 20 ಪಂದ್ಯಾವಳಿಯಲ್ಲಿ ಲಾಭದಾಯಕ ಗುತ್ತಿಗೆಯ ಆಫರ್‌ಗಳು ಆಟಗಾರರಿಗೆ ಸಿಗುತ್ತಿರುವ ಬಗ್ಗೆ ಆಂಬ್ರೋಸ್ ಅವರಿಗೆ ಅರಿವಿದ್ದರೂ, ಐಪಿಎಲ್‌ಗೆ ಸಹಿ ಹಾಕಿದ ಎಲ್ಲಾ ಆಟಗಾರರೂ ತಮ್ಮ ಕ್ರಿಯೆಗಳ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
 
ಇಂಗ್ಲೆಂಡ್  ಮತ್ತು ನ್ಯೂಜಿಲೆಂಡ್ ನಡುವೆ ಪ್ರಥಮ ಟೆಸ್ಟ್ ಮೊದಲ ದಿನ ಮಾತನಾಡುತ್ತಿದ್ದ  ಆಂಬ್ರೋಸ್ ದುರದೃಷ್ಟವಶಾತ್ ಸದ್ಯಕ್ಕೆ ನಮ್ಮ ಶ್ರೇಷ್ಟ ಆಟಗಾರರು ಐಪಿಎಲ್‌ನಲ್ಲಿದ್ದಾರೆ.  ಆದರೆ ಕೆಲವರ ನಿರ್ಧಾರಗಳನ್ನು ತಡೆಯಲು ನಮಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ವೆಸ್ಟ್ ಇಂಡೀಸ್ ಪರವಾಗಿ ಆಡಬೇಕೋ ಅಥವಾ ಐಪಿಎಲ್‌ಗೆ ಆಡಬೇಕೋ ಎಂದು ನಿರ್ಧರಿಸುವುದು ಅವರಿಗೆ ಬಿಟ್ಟ ವಿಚಾರ ಎಂದು ಆಂಬ್ರೋಸ್ ಹೇಳಿದರು. 
 
ಟಿ20 ಮತ್ತು ಐಪಿಎಲ್ ಲಾಭದಾಯಕ ಎನ್ನುವುದು ನಮಗೆ ಗೊತ್ತಿದೆ. ಆದರೆ ಕೊನೆಯಲ್ಲಿ ಯಾರನ್ನು ಹೊಂದಿದ್ದೇವೋ ಅವರ ಜೊತೆ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. 
 
ನಾನು ಯುವ ಆಟಗಾರರ ಜತೆ ಕೆಲಸ ಮಾಡಿ ಅವರನ್ನು ಬೆಳೆಸಿ ಕೆಲವು ವರ್ಷಗಳಲ್ಲಿ ಕ್ರಿಕೆಟ್ ಶಕ್ತಿಯಾಗಿ ಹೊಮ್ಮುತ್ತೇವೆ ಎಂದು ಹೇಳಿದರು. ಸತತ ವೆಸ್ಟ್ ಇಂಡೀಸ್ ತಂಡಗಳನ್ನು ಅದರ ವೈಭವದ ದಿನಗಳಿಂದಲೂ ಅಸ್ಥಿರತೆ ಕಾಡುತ್ತಿರುವುದು ಸಮಸ್ಯೆಯಾಗಿದ್ದು, ಅದರ ನಿವಾರಣೆಗೆ ಆಂಬ್ರೋಸ್ ನಿರ್ಧರಿಸಿದ್ದಾರೆ. 
 

Share this Story:

Follow Webdunia kannada