Select Your Language

Notifications

webdunia
webdunia
webdunia
webdunia

ಟೆಸ್ಟ್ ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ದ.ಆಫ್ರಿಕಾ ವಿರುದ್ಧ ಅವಮಾನಕಾರಿ ಸೋಲು

ಟೆಸ್ಟ್ ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ದ.ಆಫ್ರಿಕಾ ವಿರುದ್ಧ ಅವಮಾನಕಾರಿ ಸೋಲು
Hobert , ಮಂಗಳವಾರ, 15 ನವೆಂಬರ್ 2016 (11:01 IST)
ಹೋಬರ್ಟ್: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನೂ ಗೆದ್ದ ಪ್ರವಾಸಿ ದ.ಆಫ್ರಿಕಾ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿತು.  ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಫ್ರಿಕನ್ನರು  ಆಸೀಸ್ ತಂಡವನ್ನು ಒಂದು ಇನಿಂಗ್ಸ್ ಮತ್ತು 80 ರನ್ ಗಳ ಬೃಹತ್ ಅಂತರದಿಂದ ಸೋಲಿಸಿದೆ.

ಈ ಮೂಲಕ ಕಳೆದ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು ತವರಿನಲ್ಲಿ ಸೋಲಿಸಿದ ಮೊದಲ ತಂಡ ಹೆಗ್ಗಳಿಕೆಗೆ ಆಫ್ರಿಕನ್ನರು ಪಾತ್ರರಾದರು. ಈ ಮೂಲಕ ಸತತವಾಗಿ ಐದು ಟೆಸ್ಟ್ ಸರಣಿ ಸೋತ ಅವಮಾನಕ್ಕೆ ಪಾತ್ರರಾದರು. ಈ ಪಂದ್ಯದಲ್ಲಿ ಅತಿಥೇಯ ತಂಡ ದಾಖಲೆಯ ಕಳಪೆ ಮೊತ್ತ 85 ಕ್ಕೆ ಆಲೌಟ್ ಆಗಿತ್ತು. ದ್ವಿತೀಯ ಇನಿಂಗ್ಸ್ ನಲ್ಲೂ ಕೇವಲ 161 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ದ.ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 326 ಕ್ಕೆ ಆಲೌಟ್ ಆಗಿತ್ತು. ದ.ಆಫ್ರಿಕಾ ಪರ ವೆಮನ್ ಫಿಲ್ಯಾಂಡರ್ ಪ್ರಥಮ ಇನಿಂಗ್ಸ್ ನಲ್ಲಿ 5 ವಿಕೆಟ್ ಕಿತ್ತಿದ್ದರು. ಪ್ರಥಮ ಇನಿಂಗ್ಸ್ ನಲ್ಲಿ ಮೂರು ವಿಕೆಟ್ ಕಬಳಿಸಿದ್ದ ಕೈಲ್ ಅಬೋಟ್ ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ಕಿತ್ತು ಆಸೀಸ್ ಗೆ ಮರ್ಮಾಘಾತ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಿಚ್ ಸರಿ ಇರಲಿಲ್ಲ ಎಂದರು ವಿರಾಟ್ ಕೊಹ್ಲಿ, ಸರಿ ಇತ್ತು ಎಂದ ನಿರಂಜನ್ ಶಾ!