Select Your Language

Notifications

webdunia
webdunia
webdunia
webdunia

ವಿಷಾಹಾರ ಸೇವನೆ: ದಕ್ಷಿಣ ಆಫ್ರಿಕಾ ಎ ನ 10 ಆಟಗಾರರು ಆಸ್ಪತ್ರೆಗೆ

ವಿಷಾಹಾರ ಸೇವನೆ: ದಕ್ಷಿಣ ಆಫ್ರಿಕಾ ಎ ನ 10 ಆಟಗಾರರು ಆಸ್ಪತ್ರೆಗೆ
ಚೆನ್ನೈ , ಸೋಮವಾರ, 10 ಆಗಸ್ಟ್ 2015 (13:41 IST)
ಭಾರತ ಎ ವಿರುದ್ಧ ತ್ರಿಕೋನ ಸರಣಿ ಕ್ರಿಕೆಟ್ ಆಡಿದ ಬಳಿಕ ದಕ್ಷಿಣ ಆಫ್ರಿಕಾ ಎ ತಂಡದ 10 ಮಂದಿ ಆಟಗಾರರು ವಿಷಾಹಾರ ಸೇವನೆಯಿಂದ ಆಸ್ಪತ್ರೆಗೆ ಸೇರಿದ್ದಾರೆ ಎಂದು ಪ್ರವಾಸಿ ತಂಡದ ಆಡಳಿತಮಂಡಳಿ ತಿಳಿಸಿದೆ. ಶತಕ ಬಾರಿಸಿದ  ಓಪನರ್ ಕ್ವಿಂಟನ್ ಡಿ ಕಾಕ್ ಅವರನ್ನು ಆಟದ ಬಳಿಕ ನಗರದ ಆಸ್ಪತ್ರೆಗೆ ಸೇರಿಸಲಾಯಿತು. ಪಂದ್ಯ ನಡೆಯುವಾಗಲೇ ಇನ್ನೂ ಮೂವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. 
 
ದಕ್ಷಿಣ ಆಫ್ರಿಕಾ ಕ್ರಿಕೆಟ್ ಪತ್ರಿಕಾ ಪ್ರಕಟಣೆ ನೀಡಿ, ಪ್ರಸಕ್ತ 10 ಆಟಗಾರರು ಆಸ್ಪತ್ರೆಯಲ್ಲಿದ್ದಾರೆಂದು ಹೇಳಿದೆ. ತಂಡದ ಅರ್ಧದಷ್ಟು ಮಂದಿ ಆಸ್ಪತ್ರೆಯಲ್ಲಿರುವುದರಿಂದ ದಕ್ಷಿಣ ಆಫ್ರಿಕಾ ಅಸಮತೋಲಿತ ತಂಡದೊಂದಿಗೆ ಆಡಬೇಕಾಯಿತು. ಡೀನ್ ಎಲ್ಗಾರ್ ಮತ್ತು ಕಾಯಾ ಜೊಂಡಾ ಮುಂತಾದ ನಾಲ್ಕು ಮುಂಚೂಣಿ ಬೌಲರ್‌ಗಳು ಉಳಿದ ಓವರುಗಳನ್ನು ಮಾಡಬೇಕಾಯಿತು ಎಂದು ಸಿಎಸ್‍ಎ ಹೇಳಿದೆ. 
 
ರೀಜಾ ಹೆಂಡ್ರಿಕ್ಸ್, ಜೊಂಡೊ ಮತ್ತು ಥೊಕೊಜಿಸಿ ಶೆಜಿ ಎಲ್ಲರೂ ಅಸ್ವಸ್ಥರ ಪಟ್ಟಿಯಲ್ಲಿದ್ದಾರೆ. ಆದರೆ ಬೇರೆ ಯಾರೂ ಲಭ್ಯವಾಗಿಲ್ಲದಿದ್ದರಿಂದ ಅವರು ಆಡಬೇಕಾಯಿತು ಮತ್ತು ಎಲ್ಲಾ ಮೂವರೂ ಪಂದ್ಯ ಆಡುತ್ತಿದ್ದಾಗಲೇ ಆಸ್ಪತ್ರೆಗೆ ಸೇರಿದ್ದರು.
 
 ಆಟಗಾರರು ಆಸ್ಪತ್ರೆಗೆ ಸೇರಿದ್ದರಿಂದ ದಕ್ಷಿಣ ಆಫ್ರಿಕಾಗೆ ಬದಲಿಯಾಗಿ ಭಾರತ ಎ ತಂಡವು ಆಸ್ಟ್ರೇಲಿಯ  ಎ ವಿರುದ್ಧ ತ್ರಿಕೋನ ಸರಣಿಯಲ್ಲಿ ಆಡಲಿದೆ. ದಕ್ಷಿಣ ಆಫ್ರಿಕಾ ಎ ತಂಡದ ಆಡಳಿತ ಮಂಡಳಿ ತಮ್ಮ ಕನಿಷ್ಠ 6 ಆಟಗಾರರು ಅಸ್ವಸ್ಥರಾಗಿದ್ದು,  ಆಸ್ಟ್ರೇಲಿಯಾ ಎ ವಿರುದ್ಧ ಆಡಲು ಫಿಟ್ ಆಗಿಲ್ಲವೆಂದೂ, ವೇಳಾಪಟ್ಟಿ ಬದಲಿಸುವಂತೆಯೂ ಭಾರತ ಎ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಕೇಳಿದ್ದರಿಂದ ದ್ರಾವಿಡ್ ಅವರ ಮನವಿಯನ್ನು ಸ್ವೀಕರಿಸಿತು. ಇದರಿಂದ ಭಾರತ ಎ ಮಂಗಳವಾರ ಆಸೀಸ್ ವಿರುದ್ಧ ಆಡುವ ಬದಲಿಗೆ ಸೋಮವಾರವೇ ಆಡಲಿದೆ. 

Share this Story:

Follow Webdunia kannada