Select Your Language

Notifications

webdunia
webdunia
webdunia
webdunia

ಕೋಚ್-ನಾಯಕನ ರಗಳೆಗಳ ಮಧ್ಯೆಯೇ ಮಹತ್ವದ ಪರೀಕ್ಷೆಗೆ ಟೀಂ ಇಂಡಿಯಾ ಸಿದ್ಧ

ಕೋಚ್-ನಾಯಕನ ರಗಳೆಗಳ ಮಧ್ಯೆಯೇ ಮಹತ್ವದ ಪರೀಕ್ಷೆಗೆ ಟೀಂ ಇಂಡಿಯಾ ಸಿದ್ಧ
ಪೋರ್ಟ್ ಆಫ್ ಸ್ಪೇನ್ , ಶುಕ್ರವಾರ, 23 ಜೂನ್ 2017 (09:30 IST)
ಪೋರ್ಟ್ ಆಫ್ ಸ್ಪೇನ್: ಕೋಚ್ ಅನಿಲ್ ಕುಂಬ್ಳೆಯನ್ನು ಇಲ್ಲದೇ ವೆಸ್ಟ್ ಇಂಡೀಸ್ ಗೆ ತೆರಳಲು ಯಶಸ್ವಿಯಾದ ವಿರಾಟ್ ಕೊಹ್ಲಿ ಮತ್ತು ಬಳಗಕ್ಕೆ ಇಂದಿನಿಂದ ಕೆರೆಬಿಯನ್ನರ ನಾಡಿನಲ್ಲಿ ಅಗ್ನಿ ಪರೀಕ್ಷೆ ಶುರು.

 
ಇಂದಿನಿಂದ ಏಕದಿನ ಸರಣಿ ಆರಂಭವಾಗಿಲಿದ್ದು, ಹಳೆಯ ರಗಳೆಗಳನ್ನೆಲ್ಲಾ ಮರೆತು ಹೊಸದಾಗಿ ಪಂದ್ಯ ಆರಂಭಿಸುವ ಉತ್ಸಾಹದಲ್ಲಿ ಟೀಂ ಇಂಡಿಯಾ ಇದೆ. ಪ್ರಧಾನ ಕೋಚ್ ಇಲ್ಲದ ತಂಡಕ್ಕೆ ಇದೀಗ ಕೊಹ್ಲಿಯೇ ಏಕಮೇವ ಚಕ್ರಾಧಿಪತಿ.

ಕೋಚ್ ಕುಂಬ್ಳೆಯನ್ನು ಹೊರಗಟ್ಟಿದ ಮೇಲೆ ಇದೀಗ ಸ್ವತಃ ತಂಡದ ಜವಾಬ್ದಾರಿ ಹೆಗಲಿಗೇರಿಸಿಕೊಂಡು ಯಶಸ್ಸು ಸಾಧಿಸಬೇಕಾದ ಒತ್ತಡದಲ್ಲಿ ಟೀಂ ಇಂಡಿಯಾವಿದೆ. ಮೇಲ್ನೋಟಕ್ಕೆ ಟೀಂ ಇಂಡಿಯಾ ಬಲಿಷ್ಠವಾಗಿದ್ದು, ಟೂರ್ನಿ ಗೆಲ್ಲುವ ಫೇವರಿಟ್ ಆಗಿದೆ.

ಅತ್ತ ವೆಸ್ಟ್ ಇಂಡೀಸ್ ಗೆ ತವರಿನ ಬಲವಿದೆ. ಅಲ್ಲದೆ ಐಪಿಎಲ್ ಸಂದರ್ಭದಲ್ಲಿ ಗಾಯಗೊಂಡಿದ್ದ ಡ್ವಾನ್ ಬ್ರಾವೋ ತಂಡಕ್ಕೆ ಮರಳಿದ್ದಾರೆ. ಆರಂಭಿಕ ಕ್ರಿಸ್ ಗೇಲ್ ಖ್ಯಾತಿಗೆ  ತಕ್ಕಂತೆ ಆಡಿದರೆ ಭಾರತದ ಕತೆ ಮುಗಿದಂತೇ.

ಆದರೆ ಇಲ್ಲೂ ಆಟಕ್ಕಿಂತ ಮಂಡಳಿಯೊಂದಿಗಿನ ಗುದ್ದಾಟದಿಂದಾಗಿ ಪ್ರದರ್ಶನ ಸೊರಗುವ ಸಾಧ್ಯತೆಯೇ ಹೆಚ್ಚು. ವಿಂಡೀಸ್ ತಂಡಕ್ಕೆ ಹೋಲಿಸಿದರೆ ಭಾರತ ಹೆಚ್ಚು ಅನುಭವಿ ತಂಡ. ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಸಿಗದ ಆಟಗಾರರು ಇಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಪಂದ್ಯದ ಸಮಯ: ಸಂಜೆ 6.30
ನೇರ ಪ್ರಸಾರ: ಟೆನ್ 3

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟರ್ ನಲ್ಲೂ ಕುಂಬ್ಳೆ ಮೇಲೆ ಕೋಪ ತೀರಿಸಿಕೊಂಡ ಕೊಹ್ಲಿ!