ಯಾರೂ ಮಾಡದ ದಾಖಲೆ ಮಾಡುತ್ತಾ ಟೀಂ ಇಂಡಿಯಾ

Webdunia
ಶನಿವಾರ, 12 ಆಗಸ್ಟ್ 2017 (09:04 IST)
ಪಲ್ಲೆಕೆಲೆ: ದ್ವೀಪ ರಾಷ್ಟ್ರ ಪ್ರವಾಸ ಮಾಡಿರುವ ಟೀಂ ಇಂಡಿಯಾ ಇದುವರೆಗೆ ನಡೆದ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದು ಮೂರನೇ ಟೆಸ್ಟ್ ಗೆ ಸಜ್ಜಾಗಿದೆ. ಇದೀಗ ಯಾರೂ ಮಾಡದ ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದೆ.

 
ಭಾರತ ತಂಡ ಇದುವರೆಗೆ ವಿದೇಶಗಳಲ್ಲಿ ಸರಣಿ ಗೆದ್ದಿದ್ದರೂ, ಕ್ಲೀನ್ ಸ್ವೀಪ್ ಮಾಡಿಕೊಂಡಿರಲಿಲ್ಲ. ಇದೀಗ ದುರ್ಬಲ ಲಂಕಾವನ್ನು ವೈಟ್ ವಾಶ್ ಮಾಡುವ ಮೂಲಕ ಮೊದಲ ಬಾರಿಗೆ ಈ ದಾಖಲೆ ಮಾಡುವ ಉತ್ಸಾಹದೊಂದಿಗೆ ಕೊಹ್ಲಿ ಪಡೆ ಇಂದು ಕಣಕ್ಕಿಳಿಯುತ್ತಿದೆ.

ಭಾರತ ತಂಡಕ್ಕೆ ವಿಶ್ವ ನಂ.1 ಆಲ್ ರೌಂಡರ್ ಜಡೇಜಾ ಅನುಪಸ್ಥಿತಿಯಿದ್ದರೂ, ಕೊರತೆಯಾಗಿ ಕಾಣದು. ಅವರ ಜಾಗ ತುಂಬಲು ಕುಲದೀಪ್ ಯಾದವ್ ಸಜ್ಜಾಗಿದ್ದಾರೆ. ಆದರೆ ಲಂಕಾ ಮಾತ್ರ ಎಲ್ಲಾ ವಿಭಾಗಗಳಲ್ಲೂ ಬರಗಾಲ ಎದುರಿಸುತ್ತಿದೆ.

ಇದುವರೆಗೆ ನಡೆದ ಎರಡೂ ಪಂದ್ಯಗಳಲ್ಲಿ ದ್ವಿತೀಯ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಕೊಂಚ ಹೊತ್ತು ಬಿಟ್ಟರೆ ಉಳಿದೆಲ್ಲಾ ಅವಧಿಗಳಲ್ಲೂ ಟೀಂ ಇಂಡಿಯಾಕ್ಕೆ ಲಂಕಾ ಯಾವುದೇ ಹಂತದಲ್ಲೂ ಸಾಟಿಯಾಗಿರಲಿಲ್ಲ. ಹೀಗಾಗಿ ಯಾರೂ ಮಾಡದ ದಾಖಲೆಯನ್ನು ಈ ಪಂದ್ಯವನ್ನು ಗೆಲ್ಲುವ ಮೂಲಕ ಕೊಹ್ಲಿ ಪಡೆ ಮಾಡಲಿದೆ ಎಂಬ ಲೆಕ್ಕಾಚಾರದಲ್ಲಿ ಅಭಿಮಾನಿಗಳಿದ್ದಾರೆ.

ಆದರೆ ಎಲ್ಲದಕ್ಕೂ ಹವಾಮಾನ ಅನುವು ಮಾಡಿಕೊಡಬೇಕು. ಇಲ್ಲಿ ತುಂತುರು ಮಳೆಯಾಗುವ ನಿರೀಕ್ಷೆಯಿದ್ದು, ಭಾರತದ ಕನಸಿಗೆ ನೀರೆರಚದಿದ್ದರೆ ಸಾಕು ಎಂಬ ಪರಿಸ್ಥಿತಿಯಿದೆ.  ತೇವಾಂಶ ಹೆಚ್ಚಿರುವ ಕಾರಣ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವುದೇ ಒಳ್ಳೆಯದು. ಹಾಗಿದ್ದರೂ ಭಾರತದ ದಾಖಲೆ ಈ ಮೈದಾನದಲ್ಲಿ ಉತ್ತಮವಾಗಿಯೇ ಇದೆ ಎನ್ನುವುದು ಪ್ಲಸ್ ಪಾಯಿಂಟ್.

ಇದನ್ನೂ ಓದಿ.. ಭಾರತ-ಚೀನಾ ಗಡಿಯಲ್ಲಿ ಹೆಚ್ಚಾಯ್ತು ಸೈನಿಕರ ಹೆಜ್ಜೆ ಸದ್ದು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತದಲ್ಲಿ ಆಡಲ್ಲ ಎಂದ ಬಾಂಗ್ಲಾದೇಶಕ್ಕೆ ತಕ್ಕ ಪಾಠ ಕಲಿಸಿದ ಐಸಿಸಿ

IPL 2026: ಆರ್ ಸಿಬಿ ಬೆಂಗಳೂರಿನಲ್ಲಿ ಆಡಲು ಹಿಂದೇಟು ಹಾಕುತ್ತಿರುವುದು ಇದೇ ಕಾರಣಕ್ಕೆ

IND vs NZ: ಟೀಂ ಇಂಡಿಯಾ, ನ್ಯೂಜಿಲೆಂಡ್ ಎರಡನೇ ಟಿ20 ಇಂದು, ಎಷ್ಟು ಗಂಟೆಗೆ ಆರಂಭ ನೋಡಿ

ಆರ್ ಸಿಬಿಗೆ ಒಡತಿಯಾಗಲು ಹೊರಟ ಅನುಷ್ಕಾ ಶರ್ಮಾ

IND vs NZ: ಸಿಕ್ಕ ಅವಕಾಶ ಬಳಸಿಕೊಂಡ ರಿಂಕು ಸಿಂಗ್: ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮಾಡಿದ್ದೇನು

ಮುಂದಿನ ಸುದ್ದಿ
Show comments