Select Your Language

Notifications

webdunia
webdunia
webdunia
webdunia

ನಾಳೆ ಟೀಂ ಇಂಡಿಯಾಗೆ ಫೈನಲ್ ಮ್ಯಾಚ್

ನಾಳೆ ಟೀಂ ಇಂಡಿಯಾಗೆ ಫೈನಲ್ ಮ್ಯಾಚ್
Vishaka Pattana , ಶುಕ್ರವಾರ, 28 ಅಕ್ಟೋಬರ್ 2016 (12:24 IST)
ವಿಶಾಖ ಪಟ್ಟಣ: ನ್ಯೂಜಿಲೆಂಡ್ ವಿರುದ್ಧ ನಡೆಯತ್ತಿರುವ ಏಕದಿನ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯ ನಾಳೆ ವಿಶಾಖ ಪಟ್ಟಣದಲ್ಲಿ ನಡೆಯಲಿದೆ.

ಕಳೆದ ಪಂದ್ಯವನ್ನು ಭಾರತ  ಸೋತಿದ್ದರಿಂದ ಉಭಯ ತಂಡಗಳು ಸರಣಿಯಲ್ಲಿ 2-2 ರಿಂದ ಸಮಬಲ ಸಾಧಿಸಿವೆ. ಹೀಗಾಗಿ ನಾಳೆ ನಡೆಯುವ ಪಂದ್ಯಕ್ಕೆ ಫೈನಲ್ ಪಂದ್ಯದ ಮಹತ್ವ ಬಂದಿದೆ.

ಅಲ್ಲದೆ ನಾಯಕ ಧೋನಿ ಕೂಡಾ ನಾಳೆ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳಲೇ ಬೇಕಾದ ಒತ್ತಡದಲ್ಲಿದ್ದಾರೆ. ಈಗಾಗಲೇ ಧೋನಿ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳೂ ಕೇಳಿಬರುತ್ತಿವೆ. ಇನ್ನನೊಂದೆಡೆ ವಿರಾಟ್ ಕೊಹ್ಲಿ ಟೆಸ್ಟ್ ಪಂದ್ಯಗಳಲ್ಲಿ ನಾಯಕನಾಗಿ ಯಶಸ್ಸು ಕಾಣುತ್ತಿರುವುದು  ಧೋನಿ ನೆತ್ತಿಯ ಮೇಲೆ ತೂಗುಗತ್ತಿ ನೇತಾಡುತ್ತಿದೆ.

ಭಾರತದ ಬೌಲರ್ ಗಳು ಇದುವರೆಗೆ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಭಾರತಕ್ಕಿರುವ ದೊಡ್ಡ ತಲೆನೋವೆಂದರೆ ಬ್ಯಾಟ್ಸ್ ಮನ್ ಗಳು. ಅತಿಥೇಯ ತಂಡ ವಿರಾಟ್ ಕೊಹ್ಲಿಯನ್ನೇ ಹೆಚ್ಚು ನೆಚ್ಚಿಕೊಂಡಿದೆ. ಒಂದು ವೇಳೆ ಅವರು ಔಟಾದರೆ ತಂಡವನ್ನು ಆಧರಿಸುವವರೇ ಇಲ್ಲ ಎಂಬಂತಾಗಿದೆ.

ಮಧ್ಯಮ ಕ್ರಮಾಂಕದಲ್ಲಿ ಅನುಭವಸ್ಥರ ಕೊರತೆ ಇದೆ. ಆರಂಭಿಕರು ಇದುವರೆಗೆ ಉತ್ತಮ ಪ್ರದರ್ಶನ ನೀಡಿಲ್ಲ. ರೋಹಿತ್ ಶರ್ಮಾ ಅಂತೂ ಸಾಮಾಜಿಕ ಜಾಲ ತಾಣಗಳಲ್ಲಿ ನಗೆಪಾಟಲಿಗೀಡಾಗಿದ್ದಾರೆ. ಆರಂಭದಲ್ಲಿ ಬೇಗನೇ ವಿಕೆಟ್ ಕಳೆದುಕೊಳ್ಳುವುದರಿಂದ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಬೀಳುತ್ತಿದೆ. ಆದರೆ ಅಲ್ಲಿ ಅನುಭವಿಗಳು ಇಲ್ಲದೇ ಇರುವುದರಿಂದ ವಿಕೆಟ್ ಉಳಿಸಿಕೊಂಡು ರನ್ ಚೇಸ್ ಮಾಡುವಲ್ಲಿ ಎಡವುತ್ತಿದ್ದಾರೆ.

ನಾಯಕ ಧೋನಿ ಕ್ರಮಾಂಕದಲ್ಲಿ ಬಡ್ತಿ ಪಡೆದಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದ್ದರೂ, ಇತ್ತೀಚೆಗೆ ಯಾಕೋ ಅವರೂ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಅತ್ತ ಎದುರಾಳಿ ತಂಡದಲ್ಲಿ ಬೌಲರ್ ಗಳು ಲಯಕ್ಕೆ ಬಂದಿದ್ದಾರೆ. ಸೌಥಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಬ್ಯಾಟ್ಸ್ ಮನ್ ಗಳ ಪೈಕಿ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಾರ್ಟಿನ್ ಗುಪ್ಟಿಲ್, ನಾಯಕ ಕೇನ್ ವಿಲಿಯಮ್ಸ್ ಸನ್ ಕೀವೀಸ್ ಗಳ ಆಧಾರ ಸ್ತಂಭ. ರಾಸ್ ಟೇಲರ್ ಕಳೆದ ಪಂದ್ಯದಲ್ಲಿ ರನೌಟ್ ಆಗಿರದೇ ಇದ್ದಿದ್ದರೆ ಅಪಾಯಕಾರಿಯಾಗುವ ಲಕ್ಷಣ ತೋರಿದ್ದರು.
ಒಟ್ಟಾರೆ ಭಾರತಕ್ಕೆ ನ್ಯೂಜಿಲೆಂಡ್ ಸುಲಭ ತುತ್ತಲ್ಲ. ಸರಣಿ ಗೆಲ್ಲಲು ಸರ್ವರ ಪ್ರಯತ್ನ ಬೇಕೇ ಬೇಕು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಾಟರ್ ಟ್ಯಾಂಕ್ ಡ್ರೈವರ್ ಮಿ. ಏಷ್ಯಾ ಆದಾಗ!