Select Your Language

Notifications

webdunia
webdunia
webdunia
webdunia

4 ಟೆಸ್ಟ್ ಪಂದ್ಯಗಳ ಸರಣಿ ಆಡಲು ವೆಸ್ಟ್ ಇಂಡೀಸ್ ತಲುಪಿದ ಟೀಂ ಇಂಡಿಯಾ

4 ಟೆಸ್ಟ್ ಪಂದ್ಯಗಳ ಸರಣಿ ಆಡಲು ವೆಸ್ಟ್ ಇಂಡೀಸ್ ತಲುಪಿದ ಟೀಂ ಇಂಡಿಯಾ
ಸೇಂಟ್ ಕಿಟ್ಸ್: , ಗುರುವಾರ, 7 ಜುಲೈ 2016 (15:57 IST)
ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್‌ನಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡುವುದಕ್ಕಾಗಿ ಸೇಂಟ್ ಕಿಟ್ಸ್‌ಗೆ ಮುಟ್ಟಿದೆ. ಹೊಸ ಹೆಡ್ ಕೋಚ್ ಅನಿಲ್ ಕುಂಬ್ಳೆ ತಂಡದ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಸೇಂಟ್ ಕಿಟ್ಸ್ ತಲುಪಿರುವುದಾಗಿ ಬರೆದಿದ್ದಾರೆ.
 
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಸೇಂಟ್ ಕಿಟ್ಸ್ ತಲುಪಿದ ಬಳಿಕ ಭಾರತ ತಂಡದ ಚಿತ್ರವನ್ನು ಶೇರ್ ಮಾಡಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಂಟಿಗುವಾದಲ್ಲಿ ಜುಲೈ 21ರಿಂದ ಆಡಲಿದೆ. ತಂಡದ ಮುಖ್ಯ ಕೋಚ್ ಆಗಿ ಇದು ಕುಂಬ್ಳೆಯ ಮೊದಲ ಹುದ್ದೆಯಾಗಿದ್ದು, ವಿರಾಟ್ ಕೊಹ್ಲಿ ಅವರು ಟೆಸ್ಟ್ ನಾಯಕರಾಗಿ ಕ್ಯಾರಿಬಿಯನ್‌ಗೆ ಮೊದಲ ಪ್ರವಾಸ ಹಮ್ಮಿಕೊಂಡಿದ್ದಾರೆ.
 
ಭಾರತವು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವನ್ ವಿರುದ್ಧ ಜುಲೈ 9-10ರವರೆಗೆ ಮತ್ತು ಜುಲೈ 14-16ರವರೆಗೆ ಬೆಸೆಟ್ಟೆರೆಯ ವಾರ್ನರ್ ಪಾರ್ಕ್‌ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಸರಣಿಯಲ್ಲಿ ಭಾರತ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಜುಲೈ 21ರಿಂದ 25ರವರೆಗೆ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಆರಂಭದ ಪಂದ್ಯ, ಜುಲೈ 30ರಿಂದ ಆಗಸ್ಟ್ 3ರವರೆಗೆ ಕಿಂಗ್‌ಸ್ಟನ್‌ನಲ್ಲಿ 2ನೇ ಟೆಸ್ಟ್, ಆಗಸ್ಟ್ 9ರಿಂದ 13ರವರೆಗೆ ಗ್ರಾಸ್ ಐಲೆಟ್‌ನಲ್ಲಿ ಮೂರನೇ ಟೆಸ್ಟ್ ಹಾಗೂ ಟ್ರಿನಿಡಾಡ್‌ನಲ್ಲಿ ಆ. 18ರಿಂದ 22ರವರೆಗೆ ನಾಲ್ಕನೇ ಟೆಸ್ಟ್ ಪಂದ್ಯವನ್ನು ಆಡಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಹುಟ್ಟುಹಬ್ಬಕ್ಕೆ ''ನ್ಯಾಷನಲ್ ಹೆಲಿಕಾಪ್ಟರ್ ಡೇ'' ಎಂದು ಸೆಹ್ವಾಗ್ ಟ್ವೀಟ್