Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಆಟಗಾರರಿಗೆ ದುಬಾರಿ ಸೂಟ್ ತೊಡುವ ಚಾನ್ಸ್ ಮಿಸ್ ಆಯ್ತು

ಟೀಂ ಇಂಡಿಯಾ ಆಟಗಾರರಿಗೆ ದುಬಾರಿ ಸೂಟ್ ತೊಡುವ ಚಾನ್ಸ್ ಮಿಸ್ ಆಯ್ತು
Mumbai , ಗುರುವಾರ, 8 ಡಿಸೆಂಬರ್ 2016 (08:31 IST)
ಮುಂಬೈ: ಬಿಸಿಸಿಐ ಒಪ್ಪಿದ್ದರೆ ಟೀಂ ಇಂಡಿಯಾ ಆಟಗಾರರು ಇಟೆಲಿ ಮೂಲದ ದುಬಾರಿ ಸೂಟ್ ತೊಡಬೇಕಿತ್ತು. ಆದರೆ ಸಿಇಒ ಮಾಡಿದ ಪ್ರಸ್ತಾಪವನ್ನು ಬಿಸಿಸಿಐ ಒಪ್ಪಲಿಲ್ಲ. ಹೀಗಾಗಿ ಚಾನ್ಸ್ ಮಿಸ್ ಆಯ್ತು.

ಈ ಸೂಟ್ ಗಳಿಗೆ 2.5 ಲಕ್ಷ ರೂ. ಎಂದು ನಿಗದಿಪಡಿಸಲಾಗಿತ್ತು. ಹೆಚ್ಚು ವೆಚ್ಚ ಮಾಡಿದರೆ ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಬೇಕಾದೀತು. ಹಣದ ಮೂಲದ ಬಗ್ಗೆ ತನಿಖೆ ಎದುರಿಸಬೇಕು. ಹೀಗಾಗಿ ಇಟೆಲಿ ಮೂಲದ ಅಂತಾರಾಷ್ಟ್ರೀಯ ಖ್ಯಾತಿಯ ಡಿಸೈನರ್ ಗಳು ವಿನ್ಯಾಸ ಮಾಡಿದ ಸೂಟ್ ಖರೀದಿಸಬಹುದು ಎಂಬ ಸಿಇಒ ರಾಹುಲ್ ಜೋಹ್ರಿ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿದೆ.

ಭಾರತ ತಂಡಕ್ಕೆ ಒಂದು ಹೊಸ ವಿನ್ಯಾಸದ ಸ್ಟ್ಐಲಿಶ್ ಸೂಟ್ ನ ಅಗತ್ಯವಿದೆ. ಇದಕ್ಕಾಗಿ 50 ಸೂಟ್ ಗಳನ್ನು ಖರೀದಿಸಬಹುದು ಎಂದು ರಾಹುಲ್ ಲೆಕ್ಕಾಚಾರ ಹಾಕಿದ್ದರು. ಎಲ್ಲಾ ಸರಿ, ಇದಕ್ಕೆ ಲೋಧಾ ಸಮಿತಿಯ ಒಪ್ಪಿಗೆ ಬೇಕಾಗುತ್ತದಲ್ಲ ಎಂದು ಬಿಸಿಸಿಐ ರಾಹುಲ್ ಗೆ ಪ್ರಶ್ನೆ ಹಾಕಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಥಿವ್ ಪಟೇಲ್ ಯಾವಾಗ್ಲೂ ಸ್ವೀಟ್ ಸಿಕ್ಸ್ಟೀನ್ ಅಂದವರು ಯಾರು?