Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಆಲ್‌ರೌಂಡ್ ಬಲ ಹೊಂದಿದೆ: ಕ್ಲೈವ್ ಲಾಯ್ಡ್

ಟೀಂ ಇಂಡಿಯಾ ಆಲ್‌ರೌಂಡ್ ಬಲ ಹೊಂದಿದೆ: ಕ್ಲೈವ್ ಲಾಯ್ಡ್
ಪರ್ತ್ , ಮಂಗಳವಾರ, 3 ಮಾರ್ಚ್ 2015 (10:41 IST)
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾಗೆ ಆಲ್‌ರೌಂಡ್ ಬಲವಿದೆ ಎಂದು ವೆಸ್ಟ್ ಇಂಡೀಸ್ ಮಾಜಿ ನಾಯಕ ಮತ್ತು ಆಯ್ಕೆದಾರರ ಅಧ್ಯಕ್ಷ ಕ್ಲೈವ್ ಲಾಯ್ಡ್ ಪ್ರತಿಕ್ರಿಯಿಸಿದ್ದಾರೆ.

ಫಾರಂನಲ್ಲಿರುವ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಮುಂತಾದ ಆಟಗಾರರೊಂದಿಗೆ ಭಾರತದ ಬೌಲಿಂಗ್ ವೈವಿಧ್ಯದ ಬಗ್ಗೆ ಲಾಯ್ಡ್ ಮೆಚ್ಚಿಗೆ ವ್ಯಕ್ತಪಡಿಸಿದರು. ಭಾರತದ ವೇಗದ ಬೌಲಿಂಗ್ ಚೆನ್ನಾಗಿದೆ ಮತ್ತು ಅಶ್ವಿನ್ ಉತ್ತಮ ಸ್ಪಿನ್ ಬೌಲರ್ ಎಂದು ಲಾಯ್ಡ್ ಹೇಳಿದರು.

ಮರ್ಡೋಕ್ ವಿವಿಯ ಮೈದಾನದಲ್ಲಿ ವೆಸ್ಟ್ ಇಂಡೀಸ್  ತರಬೇತಿ ಸೆಷನ್‌ ನೇಪಥ್ಯದಲ್ಲಿ ಲಾಯ್ಡ್ ತಮ್ಮ ಅಭಿಪ್ರಾಯ ತಿಳಿಸಿದರು. ಡಬ್ಲ್ಯುಸಿಎ ಮೈದಾನದಲ್ಲಿ ಶುಕ್ರವಾರ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಲೀಗ್‌ನ ನಾಲ್ಕನೇ ಪಂದ್ಯವನ್ನು ಆಡಲಿದೆ.

Share this Story:

Follow Webdunia kannada