ಮುಂಬೈ: ಇತ್ತೀಚೆಗಷ್ಟೇ ಸ್ಟಾರ್ ಇಂಡಿಯಾ ಇನ್ನು ಮುಂದೆ ತಾನು ಭಾರತೀಯ ಕ್ರಿಕೆಟಿಗರ ಪರಿಕರಗಳಿಗೆ ಪ್ರಾಯೋಜಕತ್ವ ನೀಡುವುದಿಲ್ಲ ಎಂದಿತ್ತು. ಸ್ಟಾರ್ ಇಂಡಿಯಾ ಇಲ್ಲದಿದ್ದರೇನಂತೆ, ಟೀಂ ಇಂಡಿಯಾಕ್ಕೆ ಇನ್ನೊಂದು ಸಂಸ್ಥೆ ಸ್ಪಾನ್ಸರ್ ಆಗಲು ಮುಂದೆ ಬಂದಿದೆ.
ಅದು ಇತ್ತೀಚೆಗೆ ಭಾರತದಲ್ಲಿ ಜನಪ್ರಿಯವಾಗುತ್ತಿರುವ ಒಪೊ ಮೊಬೈಲ್ ಸಂಸ್ಥೆ. “ಒಪೊ ಸಂಸ್ಥೆಯನ್ನು ಭಾರತ ತಂಡದ ಹೊಸ ಪ್ರಾಯೋಜಕರಾಗಿ ಪರಿಚಯಿಸಲು ಸಂತಸವಾಗುತ್ತಿದೆ” ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.
ಏಪ್ರಿಲ್ ನಲ್ಲಿ ಅಧಿಕೃತವಾಗಿ ಪ್ರಾಯೋಜಕತ್ವ ವಹಿಸಲಿರುವ ಒಪೊ ಸಂಸ್ಥೆಯೊಂದಿಗಿನ ಬಿಸಿಸಿಐ ಒಪ್ಪಂದ ಐದು ವರ್ಷದ ಅವಧಿಯದ್ದಾಗಲಿದೆ. ಅಧಿಕೃತ ಪ್ರಾಯೋಜಕ ಸಂಸ್ಥೆಯ ಲೋಗೋ ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ಉಡುಪಿನಲ್ಲಿ ಕಂಗೊಳಿಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ