Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಫಾರಂ: ಉಳಿದ ತಂಡಗಳಿಗೆ ಎಚ್ಚರಿಕೆಯ ಸಂಕೇತ

ಟೀಂ ಇಂಡಿಯಾ ಫಾರಂ: ಉಳಿದ ತಂಡಗಳಿಗೆ ಎಚ್ಚರಿಕೆಯ ಸಂಕೇತ
ನವದೆಹಲಿ , ಸೋಮವಾರ, 2 ಮಾರ್ಚ್ 2015 (17:03 IST)
ಟೀಂ ಇಂಡಿಯಾ ವಿಶ್ವಕಪ್‌ನಲ್ಲಿ ಸತತವಾಗಿ ಮೂರು ಪಂದ್ಯಗಳನ್ನು ಗೆಲ್ಲುವುದರೊಂದಿಗೆ ವೇಗಿ ಆರ್.ಪಿ. ಸಿಂಗ್ ಪ್ರತಿಕ್ರಿಯಿಸಿದ್ದು, ಹಾಲಿ ಚಾಂಪಿಯನ್ನರು ಸೂಕ್ತ ಕಾಲದಲ್ಲಿ ಫಾರಂ ಕಂಡುಕೊಂಡಿದ್ದಾರೆಂದು ಹೇಳುವ ಮೂಲಕ ಇತರೆ ತಂಡಗಳಿಗೆ ಎಚ್ಚರಿಕೆಯ ಸಂಕೇತ ನೀಡಿದ್ದಾರೆ.
 
 ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಮತ್ತು ತ್ರಿಕೋನ ಸರಣಿಯಲ್ಲಿ ನೀರಸ ಪ್ರದರ್ಶನದ ನಂತರ ಭಾರತ ಸಂಪೂರ್ಣ ಭಿನ್ನ ತಂಡವಾಗಿ ತಮಗೆ ಕಾಣುತ್ತಿರುವುದಾಗಿ ತಿಳಿಸಿದರು. ಕೆಲವು ಭಾರತದ ಸೀಮರ್‌ಗಳ ಸ್ವಿಂಗ್ ಬೌಲಿಂಗ್‌ ನಾನು ಮೆಚ್ಚಿದ್ದೇನೆ. ಪಿಚ್‌ನ ನೆರವನ್ನು ತೆಗೆದುಕೊಳ್ಳಲು ಬೌಲರುಗಳಿಗೆ ಸಾಧ್ಯವಾಗಿದ್ದು, ವಿಶೇಷವಾಗಿ ಗಮನಾರ್ಹವಾಗಿದೆ ಎಂದು ವೇಗಿ ಆರ್.ಪಿ. ಸಿಂಗ್ ಹೇಳಿದರು.  

ಉಮೇಶ್ ಯಾದವ್ ಯುಎಇ ವಿರುದ್ಧ ಪಂದ್ಯದಲ್ಲಿ 6.3 ಓವರುಗಳಲ್ಲಿ 2 ವಿಕೆಟ್ ಕಬಳಿಸಿದ್ದರು. ಭುವನೇಶ್  1 ವಿಕೆಟ್ ಗಳಿಸಿದ್ದರು. ಶಮಿಯ ಅನುಪಸ್ಥಿತಿಯಲ್ಲಿ ತಮ್ಮ ಉಪಸ್ಥಿತಿಯನ್ನು ಹೇಳಿದ ಹೊಸ ಚೆಂಡಿನ ಬೌಲರುಗಳನ್ನು ಅವರು ಶ್ಲಾಘಿಸಿದರು.

Share this Story:

Follow Webdunia kannada