T20 World Cup 2024: ವಿಶ್ವಕಪ್ ಗೆದ್ದ ಬೆನ್ನಲ್ಲೇ ಫ್ಯಾನ್ಸ್ ಗೆ ಬೇಸರದ ಸುದ್ದಿಕೊಟ್ಟ ವಿರಾಟ್ ಕೊಹ್ಲಿ

Krishnaveni K
ಭಾನುವಾರ, 30 ಜೂನ್ 2024 (00:03 IST)
ಬಾರ್ಬಡೋಸ್: ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾ ಅಭಿಮಾನಿಗಳಿಗೆ ಕಿಂಗ್ ಕೊಹ್ಲಿ ಬೇಸರದ ಸುದ್ದಿ ಕೊಟ್ಟಿದ್ದಾರೆ. ಇದು ನನ್ನ ಕೊನೆಯ ಟಿ20 ವಿಶ್ವಕಪ್ ಎಂದು ಕೊಹ್ಲಿ ಘೋಷಿಸಿದ್ದಾರೆ.

ಇದು ವಿರಾಟ್ ಕೊಹ್ಲಿ ಪಾಲಿಗೆ ಕೊನೆಯ ಟಿ20 ವಿಶ್ವಕಪ್ ಪಂದ್ಯವಾಗಿರಬಹುದು ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ ಈಗ ಕೊಹ್ಲಿಯೇ ಅಧಿಕೃತವಾಗಿ ಟಿ20 ವಿಶ್ವಕಪ್ ನಿಂದ ತಮ್ಮ ನಿವೃತ್ತಿ ಘೋಷಿಸಿದ್ದಾರೆ. ಇಂದಿನ ಪಂದ್ಯದಲ್ಲಿ 76 ರನ್ ಗಳಿಸಿ ಭಾರತದ ಬ್ಯಾಟಿಂಗ್ ಗೆ ಆಧಾರವಾಗಿದ್ದ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಈ ಗೆಲುವು ಕೊಹ್ಲಿ ಪಾಲಿಗೂ ಅತ್ಯಂತ ಅಗತ್ಯವಾಗಿತ್ತು. ತಮ್ಮ ನಿವೃತ್ತಿಗೆ ಮೊದಲು ಒಂದಾದರೂ ಐಸಿಸಿ ಟ್ರೋಫಿ ಗೆಲ್ಲಬೇಕು ಎಂಬುದು ಕೊಹ್ಲಿಯ ಕನಸಾಗಿತ್ತು. ಅದೀಗ ನನಸಾಗಿದೆ. ಇದೇ ಖುಷಿಯಲ್ಲಿ ಅವರು ಇಂದು ಮೈದಾನದಲ್ಲೇ ಕಣ್ಣೀರು ಹಾಕಿದರು.

ಇದರ ಜೊತೆಗೆ ಇದು ನಾನಿವತ್ತು ಇಲ್ಲಿ ಒಂದು ಘೋಷಣೆ ಮಾಡಲು ಬಯಸುತ್ತೇನೆ. ಇದು ರಹಸ್ಯವೇನೂ ಅಲ್ಲ. ಆದರೆ ಇದು ನನ್ನ ಕೊನೆಯ ಟಿ20 ವಿಶ್ವಕಪ್. ಮುಂದಿನ ಜನರೇಷನ್ ಗೆ ಅವಕಾಶ ಮಾಡಿಕೊಡುವ ನಿಟ್ಟಿನಿಂದ ಮುಂದೆ ನಾನು ಟಿ20 ವಿಶ್ವಕಪ್ ನಲ್ಲಿ ಆಡುವುದಿಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕೋಚ್ ಆಗಿ ಬಂದಾಗ ರಾಹುಲ್ ದ್ರಾವಿಡ್ ಹೇಳಿದ್ದ ಈ ಮಾತು ಗಂಭೀರ್ ಗೂ ಪಾಠವಾಗಬೇಕು

ಸಂಜು ಸ್ಯಾಮ್ಸನ್‌ ಅವರನ್ನು ಬಿಟ್ಟುಕೊಟ್ಟ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್‌ ಮತ್ತೊಂದು ಕಠಿಣ ನಿರ್ಧಾರ

ಕಾಲು ಮುರಿದಿದ್ರೂ ಆಡಿದ್ದ ರಿಷಭ್ ಪಂತ್ ನೋಡಿ ಕಲಿಯಿರಿ: ಪಿಚ್ ನೋಡಿ ಡವ್ ಮಾಡಿದ್ರಾ ಶುಭಮನ್ ಗಿಲ್

ಟೀಂ ಇಂಡಿಯಾ ಸೋಲಿನ ಬಳಿಕ ಕೋಲ್ಕತ್ತಾ ಪಿಚ್ ಬಗ್ಗೆ ಗಂಗೂಲಿ ಹೇಳಿಕೆ ವೈರಲ್

ರಾಹುಲ್ ದ್ರಾವಿಡ್, ರೋಹಿತ್ ಕಟ್ಟಿದ ತಂಡವನ್ನು ಕೆಡವಿದ ಗೌತಮ್ ಗಂಭೀರ್: ನೆಟ್ಟಿಗರ ಛೀಮಾರಿ

ಮುಂದಿನ ಸುದ್ದಿ
Show comments