Webdunia - Bharat's app for daily news and videos

Install App

T20 World Cup 2024: ಟಿ20 ವಿಶ್ವಕಪ್ 2024 ರಿಂದ ಪಾಕಿಸ್ತಾನ ಔಟ್

Krishnaveni K
ಶನಿವಾರ, 15 ಜೂನ್ 2024 (09:42 IST)
ಫ್ಲೋರಿಡಾ: ಅಮೆರಿಕಾ ಮತ್ತು ಐರ್ಲೆಂಡ್ ನಡುವಿನ ಎ ಗುಂಪಿನ ಟಿ20 ವಿಶ್ವಕಪ್ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಈಗ ಪಾಕಿಸ್ತಾನಕ್ಕೆ ಸಂಕಷ್ಟ ಎದುರಾಗಿದೆ. ಈ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಪಾಕಿಸ್ತಾನ ಟೂರ್ನಿಯಿಂದಲೇ ಹೊರಬಿದ್ದಿದೆ.

ಅಮೆರಿಕಾ ಮತ್ತು ಭಾರತದ ವಿರುದ್ಧ ಸೋತಿದ್ದ ಪಾಕಿಸ್ತಾನಕ್ಕೆ ಸೂಪರ್ 8 ರ ಹಾದಿ ಕಷ್ಟವಾಗಿತ್ತು. ಒಂದು ವೇಳೆ ನಿನ್ನೆಯ ಪಂದ್ಯದಲ್ಲಿ ಅಮೆರಿಕಾ ಸೋತಿದ್ದರೆ ಪಾಕಿಸ್ತಾನಕ್ಕೆ ಸೂಪರ್ 8 ರ ಅವಕಾಶವಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದಾಗಿದ್ದರಿಂದ ಎರಡೂ ತಂಡಗಳಿಗೂ ಅಂಕ ಸಮಾನವಾಗಿ ಹಂಚಲಾಯಿತು.

ಇದರಿಂದಾಗಿ ಈಗಾಗಲೇ ನಾಲ್ಕು ಪಂದ್ಯಗಳಿಂದ 2 ಗೆಲುವು ಸಾಧಿಸಿರುವ ಅಮೆರಿಕಾ ಎ ಗುಂಪಿನಲ್ಲಿ ಎರಡನೇ ತಂಡವಾಗಿ ಸೂಪರ್ 8 ಕ್ಕೇರಿದೆ. ಈಗಾಗಲೇ ಈ ಗುಂಪಿನಲ್ಲಿರುವ ಟೀಂ ಇಂಡಿಯಾ ಸೂಪರ್ 8 ರ ಹಂತ ತಲುಪಿದೆ. ಇತ್ತ ಪಾಕಿಸ್ತಾನ 3 ಪಂದ್ಯಗಳಿಂದ ಕೇವಲ 1 ಗೆಲುವು ಮಾತ್ರ ಸಾಧಿಸಿದೆ.

ಅಮೆರಿಕಾ ಈಗಾಗಲೇ 5 ಅಂಕ ತನ್ನದಾಗಿಸಿಕೊಂಡಿದೆ. ಪಾಕಿಸ್ತಾನಕ್ಕೆ ಇನ್ನೊಂದು ಪಂದ್ಯ ಬಾಕಿಯಿದೆ. ಆ ಪಂದ್ಯ ಗೆದ್ದರೂ ಒಟ್ಟು ಅಂಕ ನಾಲ್ಕು ಆಗಲಿದೆಯಷ್ಟೇ. ಹೀಗಾಗಿ ಪಾಕಿಸ್ತಾನ ಇನ್ನೊಂದು ಪಂದ್ಯ ಗೆದ್ದರೂ ಸೂಪರ್ 8 ಕ್ಕೆ ಏರಲು ಸಾಧ್ಯವಾಗದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇಂದಿನ ದಿನದಾಟಕ್ಕೂ ಓವಲ್ ಮೈದಾನದಲ್ಲಿ ಮಳೆ ಬರುತ್ತಾ: ಇಲ್ಲಿದೆ ಹವಾಮಾನ ವರದಿ

IND vs ENG: ಕರುಣ್ ನಾಯರ್ ಗೆ ಅವಮಾನದ ನಂತರ ಸನ್ಮಾನ

IND vs ENG:ಟೀಂ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್ ಟಾಸ್ ಸೋಲುವುದರಲ್ಲೇ ದಾಖಲೆ

IND vs ENG: ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ 3 ಬದಲಾವಣೆ ಖಚಿತ

ENG vs IND: ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ, ತಂಡದ ನಾಯಕನೇ ಪ್ರಮುಖ ಪಂದ್ಯದಿಂದ ಹೊರಕ್ಕೆ

ಮುಂದಿನ ಸುದ್ದಿ
Show comments