ಟಿ20 ವಿಶ್ವಕಪ್: ಭಾರತ-ಬಾಂಗ್ಲಾ ನಡುವೆ ಇಂದು ಮಹತ್ವದ ಪಂದ್ಯ

Webdunia
ಬುಧವಾರ, 2 ನವೆಂಬರ್ 2022 (08:20 IST)
ಅಡಿಲೇಡ್: ಟಿ20 ವಿಶ್ವಕಪ್ ನಲ್ಲಿ ಇಂದು ಟೀಂ ಇಂಡಿಯಾ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಸೆಮಿಫೈನಲ್ ನಿಟ್ಟಿನಲ್ಲಿ ಈ ಪಂದ್ಯ ಭಾರತಕ್ಕೆ ಮಹತ್ವದ್ದಾಗಿದೆ.

ಕಳೆದ ಪಂದ್ಯವನ್ನು ದ.ಆಫ್ರಿಕಾ ವಿರುದ್ಧ ರೋಹಿತ್ ಪಡೆ ಸೋತಿತ್ತು. ಹೀಗಾಗಿ ಈಗ ಟೀಂ ಇಂಡಿಯಾಗೆ ಸೆಮಿಫೈನಲ್ ಗೇರಬೇಕಾದರೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಿದೆ.

ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎರಡರಲ್ಲಿಯೂ ಭಾರತ ಕಳಪೆ ಪ್ರದರ್ಶನ ನೀಡಿತ್ತು. ಬಿಗ್ ಹಿಟ್ಟರ್ ಗಳು ವೈಫಲ್ಯ ಅನುಭವಿಸುತ್ತಿರುವುದು ಟೀಂ ಇಂಡಿಯಾಕ್ಕೆ ಹಿನ್ನಡೆಯಾಗಿದೆ. ದಿನೇಶ್ ಕಾರ್ತಿಕ್ ಗಾಯಗೊಂಡಿದ್ದು ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಹೀಗಾದಲ್ಲಿ ರಿಷಬ್ ಪಂತ್ ಅವಕಾಶ ಪಡೆಯಬಹುದು. ಕೆಎಲ್ ರಾಹುಲ್ ಕಳಪೆ ಫಾರ್ಮ್ ನಲ್ಲಿರುವುದರಿಂದ ಅವರಿಗೆ ಹಿಂಬಡ್ತಿ ಸಿಗುವ ಸಾಧ್ಯತೆಯೂ ಇಲ್ಲದಿಲ್ಲ. ಬೌಲಿಂಗ್ ನಲ್ಲಿ ಅನುಭವಿ ರವಿಚಂದ್ರನ್ ಅಶ್ವಿನ್ ದುಬಾರಿಯಾಗಿದ್ದು, ದೀಪಕ್ ಹೂಡಾ ಸಿಕ್ಕ ಅವಕಾಶವನ್ನು ಬಳಸಿಕೊಂಡಿಲ್ಲ. ಹೀಗಾಗಿ ಅಕ್ಸರ್ ಪಟೇಲ್ ಕಮ್ ಬ್ಯಾಕ್ ಮಾಡಬಹುದು. ಉಳಿದಂತೆ ತಂಡದಲ್ಲಿ ದೊಡ್ಡ ಬದಲಾವಣೆ ಸಾಧ್ಯತೆಯಿಲ್ಲ.  ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.


-Edited by Rajesh Patil

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್ ಗಾಗಿ ಸೂರ್ಯ ಕುಮಾರ್ ಯಾದವ್ ತಾಯಿ ಪೂಜೆ: ಎಂಥಾ ಅನುಬಂಧ

IND vs AUS T20: ಮಳೆಗೆ ಕೊಚ್ಚಿ ಹೋದ ಮೊದಲ ಟಿ20

IND vs AUS T20: ಟಾಸ್ ಗೆದ್ದ ಆಸ್ಟ್ರೇಲಿಯಾ, ಮತ್ತೆ ಹರ್ಷಿತ್ ರಾಣಾಗೆ ಜೈ ಎಂದ ಗಂಭೀರ್

ರೋಹಿತ್ ಶರ್ಮಾ ಈಗ ವಿಶ್ವ ನಂ 1: ವಯಸ್ಸಾಯ್ತು ಎಂದವರಿಗೆ ತಕ್ಕ ತಿರುಗೇಟು ಕೊಟ್ಟ ಹಿಟ್ ಮ್ಯಾನ್

ಶ್ರೇಯಸ್ ಅಯ್ಯರ್ ನಿಂದ ಸದ್ಯದಲ್ಲೇ ಸಿಗಲಿದೆ ಸರ್ಪೈಸ್: ಬಿಸಿಸಿಐ

ಮುಂದಿನ ಸುದ್ದಿ
Show comments