Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಸುರೇಶ್ ರೈನಾ, ಪ್ರಿಯಾಂಕ ವೈವಾಹಿಕ ಬಂಧನ

ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಸುರೇಶ್ ರೈನಾ, ಪ್ರಿಯಾಂಕ ವೈವಾಹಿಕ ಬಂಧನ
ನವದೆಹಲಿ , ಮಂಗಳವಾರ, 31 ಮಾರ್ಚ್ 2015 (15:00 IST)
ಟೀಂ ಇಂಡಿಯಾ ಬ್ಯಾಟ್ಸಮನ್ ಸುರೇಶ್ ರೈನಾ ಲಕ್ನೋದಲ್ಲಿ ಏಪ್ರಿಲ್ 3ರಂದು ಪ್ರಿಯಾಂಕ ಚೌಧರಿ ಜೊತೆ ವಿವಾಹ ಬಂಧನಕ್ಕೆ ಕಾಲಿಡಲಿದ್ದಾರೆ.  ಐಪಿಎಲ್ ಸರಣಿ ಆರಂಭಕ್ಕೆ ಮುನ್ನ ಅವರಿಬ್ಬರೂ ವೈವಾಹಿಕ ಬದುಕಿಗೆ ಕಾಲಿಡಲು ನಿರ್ಧರಿಸಿದ್ದಾರೆ. 
 
 ಪ್ರಿಯಾಂಕ ಸದ್ಯದಲ್ಲಿ ನೆದರ್‌ಲೆಂಡ್ಸ್‌ನಲ್ಲಿ ನೆಲೆಸಿದ್ದು, ಚೌಧುರಿ ಕುಟುಂಬವು ಮೀರತ್ ಮೂಲದವರು. ರೈನಾ ಅವರದ್ದು ಅರೇಂಜ್ಡ್ ಮ್ಯಾರೇಜ್ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ತಮ್ಮದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂದು ರೈನಾ ಬಹಿರಂಗ ಮಾಡಿದ್ದಾರೆ. ಸುರೇಶ್ ರೈನಾ ತಂದೆ ಮತ್ತು ರೈನಾ ತಂದೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಎರಡೂ ಕುಟುಂಬಗಳ ನಡುವೆ ನಿಕಟ ಸಂಬಂಧ ಬೆಳೆದಿದೆ.

ಏಪ್ರಿಲ್ 3 ರೈನಾ ಅವರ ಲಕ್ಕಿ ನಂಬರ್ ಆಗಿದ್ದು, 3 ನೇ ಸಂಖ್ಯೆಯ ಜತೆ ರೈನಾ ನಿಕಟ ಸಂಬಂಧ ಹೊಂದಿದ್ದರಿಂದ ಏಪ್ರಿಲ್ 3ರಂದು ಅವರು ಮದುವೆಗೆ ನಿರ್ಧರಿಸಿದ್ದಾರೆ. ರೈನಾ ಹಿಂದೆ ಇದಕ್ಕೆ ಮುಂಚೆ ಚೆಂದೊಳ್ಳಿ ಚೆಲುವೆಯರು ಹಿಂದೆ ಬಿದ್ದಿದ್ದರು.  ಕಮಲಹಾಸನ್ ಪುತ್ರಿ ಶೃತಿ ಕೂಡ ರೈನಾಳ ಕಡೆ ಆಕರ್ಷಿತಳಾಗಿದ್ದಳು. ಆದರೆ ನಾವು ಬರೀ ಸ್ನೇಹಿತರು ಎಂದು ಹೇಳುವ ಮೂಲಕ ಈ ಲವ್‌ಸ್ಟೋರಿಗೆ ರೈನಾ ತೆರೆಎಳೆದಿದ್ದರು.  ಮದುವೆ ಸಮಾರಂಭವಲ್ಲದೇ ವಿಶೇಷ ಆರತಕ್ಷತೆ ಪಾರ್ಟಿ ಕೂಡ ದೆಹಲಿಯ ತೋಟದ ಮನೆಯೊಂದರಲ್ಲಿ ಏರ್ಪಡಿಸಲಾಗುತ್ತದೆ.

Share this Story:

Follow Webdunia kannada