Select Your Language

Notifications

webdunia
webdunia
webdunia
webdunia

ಸುರೇಶ್ ರೈನಾ ಇನ್ನೂ ಚೇತರಿಸಿಕೊಂಡಿಲ್ಲ

ಸುರೇಶ್ ರೈನಾ ಇನ್ನೂ ಚೇತರಿಸಿಕೊಂಡಿಲ್ಲ
Mohali , ಭಾನುವಾರ, 23 ಅಕ್ಟೋಬರ್ 2016 (11:22 IST)
ಮೊಹಾಲಿ: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸುರೇಶ್ ರೈನಾ ಇನ್ನೂ ಫಿಟ್ ಆಗಿಲ್ಲದೇ ಇರುವುದರಿಂದ ಇಂದು ನಡೆಯಲಿರುವ ಏಕದಿನ ಪಂದ್ಯದಲ್ಲೂ ಆಡುವುದಿಲ್ಲ.

ಜ್ವರದಿಂದ ಬಳಲುತ್ತಿದ್ದ ರೈನಾ ನ್ಯೂಜಿಲೆಂಡ್ ವಿರುದ್ಧ ನಡೆದ ಕಳೆದ ಎರಡು ಏಕದಿನ ಪಂದ್ಯಗಳಲ್ಲೂ ಆಡಿರಲಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಕೊಂಚ ಅಸ್ವಸ್ಥರಂತೆ ಕಂಡುಬಂದ ರೋಹಿತ್ ಶರ್ಮಾ ಸಂಪೂರ್ಣ ಫಿಟ್ ಆಗಿದ್ದು ನೆಟ್ಸ್ ನಲ್ಲಿ ಕಾಲ ಕಳೆದಿದ್ದಾರೆ.

ರೈನಾ ಅಲಭ್ಯತೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾದವ್ ಗೆ ಅವಕಾಶ ಸಿಗಲಿದೆ. ಸುದೀರ್ಘ ವಿರಾಮದ ನಂತರ ರೈನಾ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಜ್ವರದ ಕಾರಣದಿಂದ ಬೆಂಚ್ ಕಾಯುವಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೀನಿಯರ್ ಬೌಲರ್ ಎನಿಸಿಕೊಳ್ಳುವುದು ಗೌರವ ಎಂದ ಅಮಿತ್ ಮಿಶ್ರಾ