Select Your Language

Notifications

webdunia
webdunia
webdunia
webdunia

ಶ್ರೀಲಂಕಾ ಸರಣಿಯ ಉಳಿದ ಪಂದ್ಯಗಳಿಗೆ ಸ್ಟೀವನ್ ಸ್ಮಿತ್ ಮಿಸ್

ಶ್ರೀಲಂಕಾ ಸರಣಿಯ ಉಳಿದ ಪಂದ್ಯಗಳಿಗೆ ಸ್ಟೀವನ್ ಸ್ಮಿತ್ ಮಿಸ್
ಕೊಲಂಬೊ , ಗುರುವಾರ, 25 ಆಗಸ್ಟ್ 2016 (13:13 IST)
ಆಸ್ಟ್ರೇಲಿಯಾದ ನಾಯಕ ಸ್ಟೀವನ್ ಸ್ಮಿತ್ ದಟ್ಟಣೆಯ ಆಸ್ಟ್ರೇಲಿಯಾ ಬೇಸಿಗೆ ಸರಣಿಗಳಿಗೆ ಮುನ್ನ ವಿಶ್ರಾಂತಿ ತೆಗೆದುಕೊಳ್ಳಲಿದ್ದು, ಶ್ರೀಲಂಕಾದಲ್ಲಿ ಏಕದಿನ ಅಂತಾರಾಷ್ಟ್ರೀಯ ಸರಣಿಯ ಉಳಿದ ಪಂದ್ಯಗಳಿಗೆ ಮಿಸ್ ಆಗಲಿದ್ದಾರೆ. ಸ್ಮಿತ್ ಅವರ ಡೆಪ್ಯೂಟಿ ಡೇವಿಡ್ ವಾರ್ನರ್ ಅವರು ಮುಂದಿನ ಮೂರು ಏಕದಿನಗಳಿಗೆ ಮತ್ತು ಎರಡು 2 ಟ್ವೆಂಟಿಗಳಿಗೆ ತಂಡಕ್ಕೆ ನಾಯಕತ್ವ ವಹಿಸಲಿದ್ದಾರೆ.
 
ನಾನು ಕ್ರಿಕೆಟ್ ಮಿಸ್ ಮಾಡಿಕೊಳ್ಳುವುದನ್ನು ದ್ವೇಷಿಸುತ್ತೇನೆ. ಆದರೆ ಕ್ರಿಕೆಟ್ ವೇಳಾಪಟ್ಟಿ ದಟ್ಟಣೆಯಿಂದ ಕೂಡಿದೆ.ಆದರೂ ಎಲ್ಲಾ ಮೂರು ಮಾದರಿಗಳಲ್ಲಿ ನಾನು ನಾಯಕತ್ವ ವಹಿಸಿ ಶ್ರೇಷ್ಟ ಪ್ರದರ್ಶನಕ್ಕೆ ಬಯಸುತ್ತೇನೆ ಎಂದು ಸ್ಮಿತ್ ಶ್ರೀಲಂಕಾ ವಿರುದ್ಧ 2ನೇ ಏಕದಿನದಲ್ಲಿ 82 ರನ್ ಸೋಲಿನ ಬಳಿಕ ಹೇಳಿದರು. 
 
ಮುಂದಿನ 12 ತಿಂಗಳಲ್ಲಿ ಸ್ಟೀವನ್ ಅಪಾರ ಪ್ರಮಾಣದಲ್ಲಿ ಕ್ರಿಕೆಟ್ ಆಡಲಿದ್ದಾರೆ. ಸ್ಟೀವನ್ ಅವರು ವಿಶ್ರಾಂತಿ ಮೂಲಕ  ಚೈತನ್ಯ ತುಂಬಿಕೊಳ್ಳಲು ನಾವು ಕಾಲಾವಕಾಶ ಬಯಸಿದ್ದು, ಕೊನೆಯ ಐದು ಪಂದ್ಯಗಳು ಅದಕ್ಕೆ ಉತ್ತಮ ಅವಕಾಶವಾಗಿದೆ. ಮೊದಲ ಎರಡು ಪಂದ್ಯಗಳ ಫಲಿತಾಂಶ ಏನೇ ಇರಲಿ, ಸ್ಟೀವ್ ವಿರಾಮ ತೆಗೆದುಕೊಂಡು ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಹೊಸ ಹುರುಪಿನಿಂದ ಸ್ಟೀವ್ ಆಡಬೇಕೆಂಬುದು ನಮ್ಮ ಯೋಜನೆಯಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ರಾಷ್ಟ್ರೀಯ ಆಯ್ಕೆದಾರ ರಾಡ್ ಮಾರ್ಶ್ ಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಜಾಸನ್ ರಾಯ್ ಬಿರುಸಿನ 65 ರನ್, ಇಂಗ್ಲೆಂಡ್‌ಗೆ ಏಕದಿನದಲ್ಲಿ ಪಾಕ್ ವಿರುದ್ಧ ಜಯ