Select Your Language

Notifications

webdunia
webdunia
webdunia
webdunia

ಶ್ರೀಲಂಕಾ ಬೃಹತ್ ಮೊತ್ತ: ಸೋತು ಶರಣಾದ ಬಾಂಗ್ಲಾ

ಶ್ರೀಲಂಕಾ ಬೃಹತ್ ಮೊತ್ತ: ಸೋತು ಶರಣಾದ ಬಾಂಗ್ಲಾ
ಮೆಲ್ಬರ್ನ್ , ಗುರುವಾರ, 26 ಫೆಬ್ರವರಿ 2015 (18:11 IST)
ತಿಲಕರತ್ನೆ ದಿಲ್ಶನ್ ಅವರ ಅತ್ಯಮೋಘ, ಅಬ್ಬರದ ಅಜೇಯ 161 ರನ್ ಮತ್ತು ಕುಮಾರ್ ಸಂಗಕ್ಕರಾ ಅವರ 105 ಅಜೇಯ ರನ್‌ಗಳ ನೆರವಿನಿಂದ ಹಾಗೂ ಲಸಿತಾ ಮಾಲಿಂಗಾ ಅವರ ಮಾರಕ ಬೌಲಿಂಗ್ ದಾಳಿಯಿಂದ ಶ್ರೀಲಂಕಾ ಬಾಂಗ್ಲಾದೇಶದ ವಿರುದ್ಧ 92 ರನ್‌ಗಳ ಜಯಗಳಿಸಿದೆ.
 
ಶ್ರೀಲಂಕಾದ ಬೃಹತ್ ಸ್ಕೋರ್ 332 ರನ್ ಬೆನ್ನೆತ್ತಿದ ಬಾಂಗ್ಲಾದೇಶ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು 47 ಓವರುಗಳಲ್ಲಿ 240 ರನ್ ಮಾತ್ರ ಗಳಿಸಲು ಸಾಧ್ಯವಾಗಿ ಸೋಲಪ್ಪಿದೆ. ಶಕೀಬ್ ಅಲ್ ಹಸನ್ 46 ಮತ್ತು ಸಬೀರ್ ರೆಹ್ಮಾನ್ 53 ರನ್ ಗಳಿಸಿದ್ದನ್ನು ಹೊರತುಪಡಿಸಿ ಬೇರಾರಿಂದಲೂ ಉತ್ತಮ ಆಟ ಮೂಡಿಬರಲಿಲ್ಲ.

ತಿಲಕರತ್ನೆ ದಿಲ್ಶನ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರ ಜೊತೆಗೆ ಬೌಲಿಂಗ್‌ನಲ್ಲೂ ಎರಡು ವಿಕೆಟ್ ಕಬಳಿಸಿ ಮಿಂಚಿದರು. ಇನ್ನುಳಿದಂತೆ ಸುರಂಗಾ ಲಕ್ಮಲ್ 2 ವಿಕೆಟ್ ಮತ್ತು ಮಾಲಿಂಗಾ 3 ವಿಕೆಟ್ ಕಬಳಿಸಿದರು.
 
 ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ಆಡಿ ಕೇವಲ ಒಂದು ವಿಕೆಟ್ ಕಳೆದುಕೊಂಡು 332 ರನ್ ಕಲೆಹಾಕಿತು. ದಿಲ್ಶನ್ ಮತ್ತು ಸಂಗಕ್ಕರಾ ಶತಕದ ಜೊತೆಯಾಟದೊಂದಿಗೆ ತಿರಿಮನೆ 52 ರನ್ ಬಾರಿಸಿದ್ದರಿಂದ ಶ್ರೀಲಂಕಾ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಬಾಂಗ್ಲಾದೇಶದ ಬೌಲರುಗಳ ಎಸೆತಗಳನ್ನು ಇಬ್ಬರು ಬ್ಯಾಟ್ಸ್‌ಮನ್‌ಗಳು ಮೈದಾನದ ಎಲ್ಲಾ ಕಡೆಗೂ ಅಟ್ಟಿದರು.

ದಿಲ್ಶನ್ ಅವರ ಅಜೇಯ 161 ರನ್‌ಗಳಲ್ಲಿ ಒಂದು ಸಿಕ್ಸರ್ ಕೂಡ ಇಲ್ಲದಿರುವುದು ಅವರ ಎಚ್ಚರಿಕೆಯ ಆಟಕ್ಕೆ ಸಾಕ್ಷಿಯಾಗಿತ್ತು.    ಶ್ರೀಲಂಕಾ 122 ರನ್‌ಗಳಾಗಿದ್ದಾಗ ತಿರಿಮನೆ ಔಟಾದ ನಂತರ ದಿಲ್ಶನ್ ಮತ್ತು ಸಂಗಕ್ಕರಾ ಎರಡನೇ ವಿಕೆಟ್‌ಗೆ 210 ರನ್ ಜೊತೆಯಾಟವಾಡಿದರು. 

Share this Story:

Follow Webdunia kannada