Select Your Language

Notifications

webdunia
webdunia
webdunia
webdunia

ಕುಮಾರ್ ಸಂಗಕ್ಕಾರ ನಿವೃತ್ತಿ ಪುನರ್ಪರಿಶೀಲನೆಗೆ ಶ್ರೀಲಂಕಾ ಒತ್ತಾಯ

ಕುಮಾರ್ ಸಂಗಕ್ಕಾರ ನಿವೃತ್ತಿ ಪುನರ್ಪರಿಶೀಲನೆಗೆ ಶ್ರೀಲಂಕಾ ಒತ್ತಾಯ
ಕೊಲಂಬೊ , ಗುರುವಾರ, 2 ಏಪ್ರಿಲ್ 2015 (11:36 IST)
ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ನೀಡಲು ತೀರ್ಮಾನಿಸಿರುವ ಕುಮಾರ್ ಸಂಗಕ್ಕಾರಾ ತಮ್ಮ ನಿರ್ಧಾರವನ್ನು ಪುನರ್ಪರಿಶೀಲಿಸಿ ಇನ್ನೊಂದು ವರ್ಷ ಆಟವಾಡುವಂತೆ ಶ್ರೀಲಂಕಾ ಕ್ರೀಡಾ ಸಚಿವರು ಬುಧವಾರ ಒತ್ತಾಯಿಸಿದ್ದಾರೆ.
 
 ಸರ್ಕಾರ ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಆಮೂಲಾಗ್ರ ಸುಧಾರಣೆ ಮಾಡುವುದಾಗಿ ಭರವಸೆ ನೀಡಿರುವುದರಿಂದ 37 ವರ್ಷದ ಆಟಗಾರ ಇನ್ನಷ್ಟು ಸಮಯ ಉಳಿಯಲಿದ್ದಾರೆಂದು ಆಶಿಸುವುದಾಗಿ  ನವೀನ್ ದಿಸಾನಾಯಕೆ ಹೇಳಿದರು.
 
ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಪೀಡಿತವಾದ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಶುದ್ಧೀಕರಿಸಲು ಹೊಸ ಸರ್ಕಾರ ಸಂಕಲ್ಪಿಸಿದೆ ಎಂದೂ ಅವರು ಹೇಳಿದರು. 
 ನಾನು ಸಂಗಕ್ಕಾರಾ ಜೊತೆ ನ್ಯೂಜಿಲೆಂಡ್‌ನಲ್ಲಿ ಮಾತನಾಡಿದೆ. ಅವರು ಕ್ರಿಕೆಟ್ ಆಡಳಿತದ ಬಗ್ಗೆ ತೀವ್ರ ನಿರಾಶರಾಗಿದ್ದರು. ಈಗ ಬದಲಾವಣೆಯಾಗಿರುವುದರಿಂದ ಅವರು ಮನಸ್ಸು ಬದಲಾಯಿಸುವ ಸಾಧ್ಯತೆಯಿದೆ ಎಂದು ಹೇಳಿದರು. 

Share this Story:

Follow Webdunia kannada