Select Your Language

Notifications

webdunia
webdunia
webdunia
webdunia

ಶ್ರೀಲಂಕಾದ ತರಿಂಡು ಕೌಶಲ್ ಶಂಕಿತ ಬೌಲಿಂಗ್ ಶೈಲಿಯ ವರದಿ

ಶ್ರೀಲಂಕಾದ ತರಿಂಡು ಕೌಶಲ್ ಶಂಕಿತ ಬೌಲಿಂಗ್ ಶೈಲಿಯ ವರದಿ
ಕೊಲಂಬೊ , ಗುರುವಾರ, 3 ಸೆಪ್ಟಂಬರ್ 2015 (14:34 IST)
ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಆಫ್‌ಸ್ಪಿನ್ನರ್ ತರಿಂಡು ಕೌಶಲ್ ಅವರ ಶಂಕಿತ ಬೌಲಿಂಗ್ ಶೈಲಿಯ ಬಗ್ಗೆ ವರದಿ ನೀಡಲಾಗಿದೆ. ಶ್ರೀಲಂಕಾ ಮ್ಯಾನೇಜ್‌ಮೆಂಟ್‌ಗೆ ಪಂದ್ಯದ ಅಧಿಕಾರಿಗಳ ವರದಿಯನ್ನು ಕಳಿಸಲಾಗಿದ್ದು, 22 ವರ್ಷ ವಯಸ್ಸಿನ ಆಟಗಾರನ ಬೌಲಿಂಗ್ ಶೈಲಿ ಕುರಿತು ಕಳವಳವನ್ನು ವ್ಯಕ್ತಪಡಿಸಿದೆ. 
ಕೌಶಲ್ ಭಾರತದ ವಿರುದ್ಧ ಮೂರು ಟೆಸ್ಟ್ ಪಂದ್ಯಗಳಿಂದ 13 ವಿಕೆಟ್ ಕಬಳಿಸಿದ್ದರು.

ಗಾಲೆಯಲ್ಲಿನ ಜಯದಲ್ಲಿ ಕೌಶಲ್ 8 ವಿಕೆಟ್ ಕಬಳಿಸಿದ್ದರು.  ಟೆಸ್ಟ್‌ಗಳು, ಏಕದಿನ ಮತ್ತು ಟಿ20ಗಳಲ್ಲಿ ವರದಿಯಾದ ಶಂಕಿತ ಬೌಲಿಂಗ್ ಶೈಲಿಗಳಿಗೆ ಸಂಬಂಧಿಸಿದಂತೆ ಐಸಿಸಿ ಪ್ರಕ್ರಿಯೆಯಡಿಯಲ್ಲಿ ಕೌಶಲ್ ಬೌಲಿಂಗ್ ಶೈಲಿಯನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ.

ಅವರು 14 ದಿನದೊಳಗೆ ಟೆಸ್ಟಿಂಗ್‌ಗೆ ಹಾಜರಾಗಬೇಕು. ಈ ಅವಧಿಯಲ್ಲಿ ಕೌಶಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.  ಐಸಿಸಿ ಮಾನ್ಯತೆಯ ಟೆಸ್ಟಿಂಗ್ ಕೇಂದ್ರವಿರುವ ಚೆನ್ನೈಗೆ ಕೌಶಲ್ ಆಗಮಿಸಿ ತಮ್ಮ ಶೈಲಿಯನ್ನು ಸರಿಪಡಿಸಿಕೊಳ್ಳುವರೆಂದು ನಿರೀಕ್ಷಿಸಲಾಗಿದೆ.
 

Share this Story:

Follow Webdunia kannada