Select Your Language

Notifications

webdunia
webdunia
webdunia
webdunia

ಕುಂದಾಪುರದ ಅಥ್ಲೀಟ್ ಅಶ್ವಿನಿ ಅಕ್ಕುಂಜೆ ವಿವಾಹ ನಿಶ್ಚಿತಾರ್ಥ

ಕುಂದಾಪುರದ ಅಥ್ಲೀಟ್ ಅಶ್ವಿನಿ ಅಕ್ಕುಂಜೆ ವಿವಾಹ ನಿಶ್ಚಿತಾರ್ಥ
ಉಡುಪಿ , ಶನಿವಾರ, 26 ಸೆಪ್ಟಂಬರ್ 2015 (18:36 IST)
ಕುಂದಾಪುರದ ಸಿದ್ದಾಪುರ ಅಥ್ಲೀಟ್ ಅಶ್ವಿನ್ ಅಕ್ಕುಂಜಿ ಅವರ ನಿಶ್ಚಿತಾರ್ಥವು  ಬೆಂಗಳೂರಿನಲ್ಲಿ ಅಕ್ಸೆಂಚರ್‌ನಲ್ಲಿ ಕೆಲಸ ಮಾಡುತ್ತಿರುವ ಅಭಿಜಿತ್ ರಾಯ್ ಜತೆ  ನೆರವೇರಿದೆ. ಉಡುಪಿಯ ಹೊಸೆಟ್ ಶಾರದಾ ಇಂಟರ್‌ನ್ಯಾಷನಲ್‌ನಲ್ಲಿ ಅವರಿಬ್ಬರ ನಿಶ್ಚಿತಾರ್ಥ ಸಮಾರಂಭ ನಡೆಯಿತು.



ಕುಟುಂಬದ ಹಿರಿಯರು ನವಜೋಡಿಗಳನ್ನು ಆಶೀರ್ವದಿಸಿದರು. ಇದೊಂದು ಖಾಸಗಿ ಸಮಾರಂಭವಾದ್ದರಿಂದ ಮಾಧ್ಯಮ ಪ್ರಚಾರ ಪಡೆಯಲಿಲ್ಲ.  ಅಭಿಜಿತ್ ರಾಯ್ ಕೂಡ ಕ್ರೀಡಾ ಹಿನ್ನೆಲೆ ಹೊಂದಿದ್ದು, ಕಾಲೇಜು ದಿನಗಳಲ್ಲಿ  ರಾಷ್ಟ್ರೀಯ ಮಟ್ಟದ ಪಂದ್ಯದಲ್ಲಿ  ಶಾಟ್‌ಪುಟ್‌ನಲ್ಲಿ ಪ್ರತಿನಿಧಿಸಿದ್ದರು.
 
ಅವರು ಸಿಕ್ಕಿಮ್ ಮಣಿಪಾಲ್ ವಿವಿಯ ಎಂಬಿಎ ಪದವೀಧರರಾಗಿದ್ದು, ಅವರ ತಂದೆ ಅಮರನಾಥ್ ರಾಯ್ ರಾಷ್ಟ್ರೀಯ ಮಟ್ಟದ ಮಾಜಿ ಕಬಡ್ಡಿ ಆಟಗಾರರು. ಅಶ್ವಿನಿ ತಂದೆ ಚಿದಾನಂದ ಶೆಟ್ಟಿ, ತಾಯಿ ಯಶೋದಾ, ಸಹೋದರಿ ದೀಪ್ತಿ ಮತ್ತಿತರ ಕುಟುಂಬ ಸದಸ್ಯರು ಸಮಾರಂಭದಲ್ಲಿ ಹಾಜರಿದ್ದರು.

ಅಶ್ವಿನಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ಟ್ ಕ್ರೀಡಾಕೂಟದ  4x400 ಮೀಟರ್ ರಿಲೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. 2010ರ ಏಷ್ಯನ್ ಗೇಮ್ಸ್‌ನ 400 ಮೀ ಹರ್ಡಲ್ಸ್ ಮತ್ತು 4x400 ಮೀಟರ್ ರಿಲೇ ಈವೆಂಟ್‌ಗಳಲ್ಲಿ ಕೂಡ ಚಿನ್ನದ ಪದಕಗಳನ್ನು ಗೆದ್ದಿದ್ದರು. 
 

Share this Story:

Follow Webdunia kannada