Select Your Language

Notifications

webdunia
webdunia
webdunia
webdunia

ಹಶೀಮ್ ಆಮ್ಲಾ ಭರ್ಜರಿ ಶತಕ: ಐರ್ಲೆಂಡ್ ವಿರುದ್ಧ ದ.ಆಫ್ರಿಕಾಗೆ 201 ರನ್ ಜಯ

ಹಶೀಮ್ ಆಮ್ಲಾ ಭರ್ಜರಿ ಶತಕ: ಐರ್ಲೆಂಡ್ ವಿರುದ್ಧ ದ.ಆಫ್ರಿಕಾಗೆ 201 ರನ್ ಜಯ
ಕ್ಯಾನ್‌ಬೆರಾ , ಮಂಗಳವಾರ, 3 ಮಾರ್ಚ್ 2015 (16:36 IST)
ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕ್ಯಾನ್‌ಬೆರಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಕೈಲ್ ಅಬಾಟ್ ಅವರ ವೇಗದ ದಾಳಿಗೆ ಧೂಳಿಪಟವಾದ ಐರ್ಲೆಂಡ್ ತಂಡ  50 ಔವರುಗಳಲ್ಲಿ 210 ರನ್  ಗಳಿಸಿ ಹೀನಾಯ ಸೋಲು ಅನುಭವಿಸಿದೆ. ದಕ್ಷಿಣ ಆಫ್ರಿಕಾದ ಭರ್ಜರಿ ಸ್ಕೋರಾದ 411 ರನ್   ಬೆನ್ನಟ್ಟಿದ ಐರ್ಲೆಂಡ್ ಪರ ಮೇಲಿನ ಕ್ರಮಾಂಕದ ಆಟಗಾರರು ಬೇಗನೇ ಔಟಾದರು.

ಐರ್ಲೆಂಡ್ ಪರ ಆಂಡ್ರಿವ್ ಬಲಬಿರಿನಿ ಮತ್ತು ಓ ಬ್ರೈನ್ ಅವರನ್ನು ಬಿಟ್ಟರೆ ಬೇರೆ ಯಾರಿಂದಲೂ ಉತ್ತಮ ಸ್ಕೋರ್ ಬರಲಿಲ್ಲ. ಆಂಡ್ರಿವ್ ಬಲಬಿರಿನಿ 71 ಎಸೆತಗಳಲ್ಲಿ 58 ರನ್ ಗಳಿಸಿದರು ಮತ್ತು ಕೆಜೆ ಎನ್‌ಜೆ  ಒ ಬ್ರೇನ್ 65 ಎಸೆತಗಳಲ್ಲಿ 48 ರನ್ ಗಳಿಸಿದರು. ಅಬಾಟ್ ಪೋರ್ಟರ್‌ಫೀಲ್ಡ್,  ಎನ್‌ಜೆ ಒ ಬ್ರೇನ್, ವಿಲ್ಸನ್ ಮತ್ತು ಕೆಜೆ ಓಬ್ರೇನ್ ವಿಕೆಟ್‌ಗಳನ್ನು ಗಳಿಸಿ ಐರ್ಲೆಂಡ್ ಬ್ಯಾಟಿಂಗ್ ಶಕ್ತಿಯನ್ನು ನುಚ್ಚುನೂರು ಮಾಡಿದರು.  

ಕೊನೆಯ ಕ್ರಮಾಂಕದ ಆಟಗಾರರಾದ ಡಾಕ್ರೆಲ್ ಮತ್ತು ಸೊರೆನ್‌ಸನ್ ತಲಾ 25 ಮತ್ತು 22 ರನ್ ಹೊಡೆದು ಔಟಾದರು. ದ.ಆಫ್ರಿಕಾ ಪರ ಕೈಲ್ ಅಬಾಟ್ 4 ವಿಕೆಟ್, ಡೇಲ್ ಸ್ಟೈನ್ 3 ವಿಕೆಟ್, ಮಾರ್ನೆ ಮಾರ್ಕೆಲ್ 3 ವಿಕೆಟ್ ಗಳಿಸಿದ್ದರೆ ಡಿ ವಿಲಿಯರ್ಸ್ ಒಂದು ವಿಕೆಟ್ ಪಡೆದರು.
 
 ಮೊದಲಿಗೆ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಹಶೀಮ್ ಆಮ್ಲಾ ಮತ್ತು ಡು ಪ್ಲೆಸಿಸ್ ಅವರ 2 ನೇ ವಿಕೆಟ್‌ಗೆ 247 ರನ್ ನೆರವಿನಿಂದ ದಕ್ಷಿಣ ಆಫ್ರಿಕಾ ಐರ್ಲೆಂಡ್‌ಗೆ  412 ರನ್‌ಗಳ ಬೃಹತ್ ಮೊತ್ತದ ಸವಾಲನ್ನು ಒಡ್ಡಿತ್ತು. ಹಶೀಮ್ ಆಮ್ಲಾ 128 ಎಸೆತಗಳಲ್ಲಿ ಭರ್ಜರಿ 159 ರನ್ ಸ್ಕೋರ್ ಮಾಡಿದ್ದು ಅವರ ಸ್ಕೋರಿನಲ್ಲಿ 16 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರುಗಳಿದ್ದವು. ಅವರಿಗೆ ಜೊತೆಯಾಟ ನೀಡಿದ ಪ್ಲೆಸಿಸ್ 109 ಎಸೆತಗಳಲ್ಲಿ 109 ರನ್ ಸ್ಕೋರ್ ಮಾಡಿದರು.

ಅವರ ಸ್ಕೋರಿನಲ್ಲಿ 10 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇತ್ತು. ಆಮ್ಲಾ ಮತ್ತು ಪ್ಲೆಸಿಸ್ ಅವರ ಸ್ಫೋಟಕ ಬ್ಯಾಟಿಂಗ್ ದಾಳಿಗೆ ಐರ್ಲೆಂಡ್ ಬೌಲರುಗಳು ಅಸಹಾಯಕರಾಗಿದ್ದರು. ಕ್ವಿಂಟನ್ ಡಿ ಕಾಕ್ ಬೇಗನೇ ಔಟಾದ ಬಳಿಕ ಐರ್ಲೆಂಡ್ ಬೌಲರುಗಳನ್ನು ಇಬ್ಬರು ಆಟಗಾರರು ಮನಬಂದಂತೆ ದಂಡಿಸಿದರು. ಆಮ್ಲಾ ಮೆಕ್‌ಬ್ರೈನ್ ಬೌಲಿಂಗ್‌ನಲ್ಲಿ ಜಾಯ್ಸ್‌ಗೆ ಕ್ಯಾಚಿತ್ತು ಔಟಾದರು. ಪ್ಲೆಸಿಸ್ ಓ ಬ್ರೇನ್‌ಗೆ ಬೌಲ್ಡ್ ಆದರು.

ಇದಾದ ನಂತರ ಆಡಲಿಳಿದ ವಿಲಿಯರ್ಸ್ ವೇಗದ ರನ್ ಗಳಿಕೆಯಲ್ಲಿ ತೊಡಗಿ 9 ಎಸೆತಗಳಲ್ಲೇ 24 ರನ್ ಸಿಡಿಸಿದರೂ ಕೂಡ ಬೇಗನೇ ಔಟಾದರು. ರೌಸೌ ಮಾತ್ರ ಮೈದಾನದ ಎಲ್ಲಾ ಕಡೆ ಚೆಂಡನ್ನು ಅಟ್ಟಿ 61 ರನ್ ಸಿಡಿಸಿದರು. 300 ರನ್ ಗುರಿಯನ್ನು ಮುಟ್ಟಿದ್ದ ಐರ್ಲೆಂಡ್ ಆಟಗಾರರಿಗೆ 400ರ ಗಡಿ ದಾಟುವುದು ಹರಸಾಹಸವಾಗಿದ್ದು, ದಕ್ಷಿಣ ಆಫ್ರಿಕಾ ಇನ್ನೊಂದು ಗೆಲವು ಗಳಿಸುವುದು ನಿಶ್ಚಿತವೆನಿಸಿದೆ.

Share this Story:

Follow Webdunia kannada