Select Your Language

Notifications

webdunia
webdunia
webdunia
webdunia

ಐರ್ಲೆಂಡ್ ವಿರುದ್ಧ 411 ರನ್ ಬೃಹತ್ ಮೊತ್ತ ಪೇರಿಸಿದ ದ.ಆಫ್ರಿಕಾ

ಐರ್ಲೆಂಡ್ ವಿರುದ್ಧ 411 ರನ್ ಬೃಹತ್ ಮೊತ್ತ ಪೇರಿಸಿದ ದ.ಆಫ್ರಿಕಾ
ಕ್ಯಾನ್ಬೆರಾ , ಮಂಗಳವಾರ, 3 ಮಾರ್ಚ್ 2015 (13:22 IST)
ಹಶೀಮ್   ಆಮ್ಲಾ ಮತ್ತು ಡು ಪ್ಲೆಸಿಸ್ ಅವರ 2 ನೇ ವಿಕೆಟ್‌ಗೆ 247 ರನ್  ಜೊತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ನಡುವೆ ಕ್ಯಾನ್ಬೆರಾದ ಮನುಕಾ ಓವಲ್‌ನಲ್ಲಿ ನಡೆಯುತ್ತಿರುವ ವಿಶ್ವ ಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಐರ್ಲೆಂಡ್‌ಗೆ  412 ರನ್‌ಗಳ ಬೃಹತ್ ಮೊತ್ತದ ಸವಾಲನ್ನು ಒಡ್ಡಿದೆ. ಹಶೀಮ್ ಆಮ್ಲಾ 128 ಎಸೆತಗಳಲ್ಲಿ ಭರ್ಜರಿ 159 ರನ್ ಸ್ಕೋರ್ ಮಾಡಿದ್ದು ಅವರ ಸ್ಕೋರಿನಲ್ಲಿ 16 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರುಗಳಿದ್ದವು.

ಅವರಿಗೆ ಜೊತೆಯಾಟ ನೀಡಿದ ಪ್ಲೆಸಿಸ್ 109 ಎಸೆತಗಳಲ್ಲಿ 109 ರನ್ ಸ್ಕೋರ್ ಮಾಡಿದರು. ಅವರ ಸ್ಕೋರಿನಲ್ಲಿ 10 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇತ್ತು. ಆಮ್ಲಾ ಮತ್ತು ಪ್ಲೆಸಿಸ್ ಅವರ ಸ್ಫೋಟಕ ಬ್ಯಾಟಿಂಗ್ ದಾಳಿಗೆ ಐರ್ಲೆಂಡ್ ಬೌಲರುಗಳು ಅಸಹಾಯಕರಾಗಿದ್ದರು. ಕ್ವಿಂಟನ್ ಡಿ ಕಾಕ್ ಬೇಗನೇ ಔಟಾದ ಬಳಿಕ ಐರ್ಲೆಂಡ್ ಬೌಲರುಗಳನ್ನು ಇಬ್ಬರು ಆಟಗಾರರು ಮನಬಂದಂತೆ ದಂಡಿಸಿದರು.

ಆಮ್ಲಾ ಮೆಕ್‌ಬ್ರೈನ್ ಬೌಲಿಂಗ್‌ನಲ್ಲಿ ಜಾಯ್ಸ್‌ಗೆ ಕ್ಯಾಚಿತ್ತು ಔಟಾದರು. ಪ್ಲೆಸಿಸ್ ಓ ಬ್ರೇನ್‌ಗೆ ಬೌಲ್ಡ್ ಆದರು. ಇದಾದ ನಂತರ ಆಡಲಿಳಿದ ವಿಲಿಯರ್ಸ್ ವೇಗದ ರನ್ ಗಳಿಕೆಯಲ್ಲಿ ತೊಡಗಿ 9 ಎಸೆತಗಳಲ್ಲೇ 24 ರನ್ ಸಿಡಿಸಿದರೂ ಕೂಡ ಬೇಗನೇ ಔಟಾದರು. ರೌಸೌ ಮಾತ್ರ ಮೈದಾನದ ಎಲ್ಲಾ ಕಡೆ ಚೆಂಡನ್ನು ಅಟ್ಟಿ 61 ರನ್ ಸಿಡಿಸಿದರು.

300 ರನ್ ಗುರಿಯನ್ನು ಮುಟ್ಟಿದ್ದ ಐರ್ಲೆಂಡ್ ಆಟಗಾರರಿಗೆ 400ರ ಗಡಿ ದಾಟುವುದು ಹರಸಾಹಸವಾಗಿದ್ದು, ದಕ್ಷಿಣ ಆಫ್ರಿಕಾ ಇನ್ನೊಂದು ಗೆಲವು ಗಳಿಸುವುದು ನಿಶ್ಚಿತವೆನಿಸಿದೆ.
ಐರ್ಲಂಡ್ ಪರ ಆಂಡಿ ಮೆಕ್‌ಬ್ರೈನ್ 2 ವಿಕೆಟ್ ಗಳಿಸಿದರೆ ಮೂನಿ ಮತ್ತು ಕೆವಿನ್ ಓಬ್ರೈನ್ ತಲಾ ಒಂದು ವಿಕೆಟ್ ಗಳಿಸಿದರು. 

Share this Story:

Follow Webdunia kannada