Select Your Language

Notifications

webdunia
webdunia
webdunia
webdunia

ದಕ್ಷಿಣ ಆಫ್ರಿಕಾದ 408 ರನ್ ಬೃಹತ್ ಮೊತ್ತ: ನೆಲಕಚ್ಚಿದ ವೆಸ್ಟ್ ಇಂಡೀಸ್

ದಕ್ಷಿಣ ಆಫ್ರಿಕಾದ 408 ರನ್ ಬೃಹತ್ ಮೊತ್ತ: ನೆಲಕಚ್ಚಿದ ವೆಸ್ಟ್ ಇಂಡೀಸ್
ಸಿಡ್ನಿ , ಶುಕ್ರವಾರ, 27 ಫೆಬ್ರವರಿ 2015 (16:13 IST)
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ವಿಶ್ವ ಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ 408 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲು ವಿಫಲವಾದ ವೆಸ್ಟ್ ಇಂಡೀಸ್ ಕೇವಲ 151 ರನ್‌ಗಳಿಗೆ ಆಲೌಟ್ ಆಗುವ ಮೂಲಕ  257 ರನ್‌ಗಳಿಂದ ಸೋತು ಹೀನಾಯ ಪ್ರದರ್ಶನ ನೀಡಿದೆ. ವೆಸ್ಟ್ ಇಂಡೀಸ್ ತಂಡ ನಿಗದಿತ ಐವತ್ತು ಓವರುಗಳನ್ನೂ ಪೂರೈಸದೇ 33.1 ಓವರುಗಳಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ನೆಲಕಚ್ಚಿತು.

ಜಿಂಬಾಬ್ವೆ ವಿರುದ್ಧ ದ್ವಿಶತಕ ಬಾರಿಸಿ ದಾಖಲೆ ನಿರ್ಮಿಸಿದ್ದ ಕ್ರಿಸ್ ಗೇಲ್  ದ. ಆಫ್ರಿಕಾ ವಿರುದ್ಧ ಮಿಂಚಲಿಲ್ಲ. ಕೇವಲ ನಾಲ್ಕು ಎಸೆತಗಳನ್ನು ಎದುರಿಸಿದ್ದ ಗೇಲ್ ಕೈಲ್ ಅಬಾಟ್ ಅವರ ವೇಗದ ದಾಳಿಗೆ ಬೌಲ್ಡ್ ಆಗುವ ಮೂಲಕ ಔಟಾದರು. ಸ್ಮಿತ್ 34 ರನ್ ಬಾರಿಸಿದರೆ, ಹೋಲ್ಡರ್ 48 ಎಸೆತಗಳಲ್ಲಿ 56 ರನ್ ಬಾರಿಸಿದರು. ರಾಮ್ಡಿನ್ 22 ರನ್ ಗಳಿಸಿದರು. ಉಳಿದ ಯಾವ ಆಟಗಾರನೂ 20 ರನ್ ಗಡಿಯನ್ನು ದಾಟಿಲ್ಲ.

ದಕ್ಷಿಣ ಆಫ್ರಿಕಾ ಪರ ಇಮ್ರಾನ್ ತಾಹಿರ್ ಸ್ಪಿನ್ ದಾಳಿಯಿಂದ ಐದು ವಿಕೆಟ್ ಕಬಳಿಸಿದ್ದಾರೆ. ಸ್ಮಿತ್, ರಾಮ್ಡಿನ್, ಸಿಮ್ಮನ್ಸ್, ರಸೆಲ್ ಮತ್ತು ಸ್ಯಾಮಿ ಇವರು ತಾಹಿಲ್ ಸ್ಪಿನ್ ದಾಳಿಗೆ ಉರುಳಿದರು. ಉಳಿದಂತೆ ಆಬಾಟ್ ಮತ್ತು ಮಾರ್ಕೆಲ್ ತಲಾ 2 ವಿಕೆಟ್ ಪಡೆದರು.
 ಮೊದಲಿಗೆ ಬ್ಯಾಟಿಂಗ್ ಮಾಡಿದ ಎಬಿ ಡಿ ವಿಲಿಯರ್ಸ್ ಅವರ 66 ಎಸೆತಗಳಲ್ಲಿ ಸಿಡಿಸಿದ 162 ರನ್‌ಗಳ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತದ 5 ವಿಕೆಟ್ ಕಳೆದುಕೊಂಡು 408 ರನ್ ದಾಖಲಿಸಿದೆ. 
 
ಭಾರತದ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿ ಮುಜುಗರಕ್ಕೀಡಾಗಿದ್ದ ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್ ತಂಡಕ್ಕೆ ಬಲವಾದ ಪೆಟ್ಟು ಕೊಟ್ಟಿದೆ. ದಕ್ಷಿಣ ಆಫ್ರಿಕಾದ 408 ರನ್ ಆಸ್ಟ್ರೇಲಿಯಾದಲ್ಲಿ ಅತೀ ಹೆಚ್ಚು ಏಕ ದಿನ ಪಂದ್ಯದ ಸ್ಕೋರಾಗಿದ್ದು, ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಎರಡನೇ ಅತ್ಯಧಿಕ ಸ್ಕೋರಾಗಿದೆ. ಡಿ ವಿಲಿಯರ್ಸ್ ನಾಲ್ಕನೇ ವಿಕೆಟ್‌ಗೆ ರೊಸೋವ್ ಜೆತ 134 ರನ್ ಜೊತೆಯಾಟ ಮತ್ತು 6 ನೆ ವಿಕೆಟ್‌ಗೆ ಬೆಹರಾಡಿನ್ ಜೊತೆ 80 ವಿಕೆಟ್ ಜೊತೆಯಾಟವಾಡಿದರು.
 
ವಿಶ್ವಕಪ್‌ನಲ್ಲಿ ಎರಡನೇ ಅತೀ ವೇಗದ ಶತಕವನ್ನು  ದಕ್ಷಿಣ ಆಫ್ರಿಕಾದ ಡಿವಿಲಿಯರ್ಸ್ ಸಿಡಿಸಿದ್ದಾರೆ.  ಒಬ್ರಿಯಾನ್ ಕೇವಲ ಇಂಗ್ಲೆಂಡ್ ವಿರುದ್ಧ 50 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಐರ್ಲೆಂಡ್ ತಂಡದ ಆಟಗಾರ ಒಬ್ರಿಯಾನ್ ನಂತರ ಅತೀ ವೇಗದ ಶತಕವನ್ನು 52 ಎಸೆತಗಳಲ್ಲಿ  ಡಿವಿಲಿಯರ್ಸ್ ಸಿಡಿಸಿದ್ದಾರೆ. ಡಿ ವಿಲಿಯರ್ಸ್ ಸಿಡಿಲಬ್ಬರದ ಬ್ಯಾಟಿಂಗ್‌ನಲ್ಲಿ 8 ಸಿಕ್ಸರುಗಳು ಮತ್ತು 17 ಬೌಂಡರಿಗಳಿದ್ದವು.

ಪ್ಲೆಸಿಸ್ ಅವರು 70 ಎಸೆತಗಳಲ್ಲಿ 62 ರನ್ ಮತ್ತು ರಿಲೀ ರೋಸೋವ್ 39 ಎಸೆತಗಳಲ್ಲಿ ಅಬ್ಬರದ 61 ರನ್ ಸಿಡಿಸಿದರು. ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ದ.ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ ಹೋಲ್ಡರ್ ಬೌಲಿಂಗ್‌ನಲ್ಲಿ ರಸೆಲ್‌ಗೆ ಕ್ಯಾಚಿತ್ತು ಔಟಾದರು. ನಂತರ ಹಶೀಮ್ ಆಮ್ಲಾ ಗೇಲ್‌ ಎಸೆತಕ್ಕೆ ಎಲ್‌ಬಿಡಬ್ಲ್ಯುಗೆ ಬಲಿಯಾದರು. ಅವರು 88 ಎಸೆತಗಳಲ್ಲಿ 65 ರನ್ ಸ್ಕೋರ್ ಮಾಡಿದ್ದರು. 

Share this Story:

Follow Webdunia kannada