Webdunia - Bharat's app for daily news and videos

Install App

ಕ್ರಿಕೆಟಿಗ ಸುರೇಶ್ ರೈನಾಗೆ ಕೂಡಿ ಬಂದ ಕಂಕಣಬಲ

Webdunia
ಮಂಗಳವಾರ, 17 ಮಾರ್ಚ್ 2015 (16:27 IST)
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮೆನ್ ಸುರೇಶ್ ರೈನಾ ಮದುವೆಯಾಗುತ್ತಿದ್ದಾರಂತೆ. ವಿಶ್ವಕಪ್ ಪಂದ್ಯ ಮುಗಿದ ಮೇಲೆ ಮೀರತ್ ಮೂಲದ ಪ್ರಿಯಾಂಕಾ ಚೌಧರಿಯನ್ನು ರೈನಾ ವರಿಸಲಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

ಏಪ್ರಿಲ್ 8 ನೇ ತಾರೀಖಿಗೆ ರೈನಾ ವಿವಾಹ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಆ ಹೊತ್ತಿಗೆ ಐಪಿಎಲ್ ಆರಂಭವಾಗುವ ಕಾರಣ ಏಪ್ರಿಲ್ 3ರಂದು ವಿವಾಹ ಸಮಾರಂಭ ನಡೆಯಲಿದೆ. ಏಪ್ರಿಲ್ 8ರಂದು ದೆಹಲಿಯ ಫಾರ್ಮ್ ಹೌಸ್‌ನಲ್ಲಿ ಆರತಕ್ಷತೆ ನಡೆಯಲಿದೆ.

ನೆದರ್‌ಲ್ಯಾಂಡ್‌ನಲ್ಲಿ ನೆಲೆಸಿರುವ ಪ್ರಿಯಾಂಕಾ, ರೈನಾ ಕುಟುಂಬದ ಆಪ್ತರೊಬ್ಬರ ಮಗಳು. ರೈನಾ ಅವರ ಅಪ್ಪ ಮತ್ತು ಪ್ರಿಯಾಂಕಾ ಅವರ ಅಪ್ಪ ಒಂದೇ ಕಂಪನಿಯಲ್ಲಿ ಸಹೋದ್ಯೋಗಿಗಳಾಗಿದ್ದರು. ರೈನಾ ಮತ್ತು ಪ್ರಿಯಾಂಕಾ ಪರಸ್ಪರ ಪರಿಚಿತರಿದ್ದರೂ ಕಳೆದ 6 ತಿಂಗಳ ಹಿಂದೆಯಷ್ಟೇ ಇವರಿಬ್ಬರೂ ಮದುವೆಯಾಗುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದರು ಎಂದು ರೈನಾ ಆಪ್ತರು ಹೇಳಿರುವ ಬಗ್ಗೆ ವಿದೇಶಿ ಮಾಧ್ಯಮವೊಂದು ವರದಿ ಮಾಡಿದೆ.

ವಿವಾಹದ ಬಗ್ಗೆ ರೈನಾ ತಮ್ಮ ಟೀಂ ಮೇಟ್‌ಗಳ ಜತೆ ಹೇಳಿದ್ದಾರೆ ಎಂಬ ಮಾಹಿತಿ ಸೋರಿಕೆಯಾಗಿ ಮಾಧ್ಯಮಗಳಿಗೆ ತಲುಪಿದ್ದು ಬಿಟ್ಟರೆ ಇಲ್ಲಿಯವರೆಗೆ ರೈನಾ ಅಥವಾ ಅವರ ಕುಟುಂಬದವರು ವಿವಾಹದ ಬಗ್ಗೆ ಏನೂ ಹೇಳಿಲ್ಲ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments