Webdunia - Bharat's app for daily news and videos

Install App

ಸ್ಮಿತ್ ಮನೋಜ್ಞ ಶತಕದಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತ

Webdunia
ಗುರುವಾರ, 26 ಮಾರ್ಚ್ 2015 (13:34 IST)
ಭಾರತ ವಿರುದ್ಧ ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಮನೋಜ್ಞ ಇನ್ನಿಂಗ್ ಆಡುವ ಮೂಲಕ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 105 ರನ್‌ಗಳ ಶತಕವನ್ನು ದಾಖಲಿಸಿದರು. ಫಿಂಚ್ ಅಬ್ಬರದ ಅರ್ಧಶತಕ ಬಾರಿಸಿದರು. ಇವರಿಬ್ಬರ ಜೊತೆಯಾಟದ ಮೂಲಕ  ಭಾರತಕ್ಕೆ 329 ರನ್ ಬೃಹತ್ ಸವಾಲನ್ನು ಆಸಿಸ್  ಒಡ್ಡಿದೆ. 

ಆಸ್ಟ್ರೇಲಿಯಾ ಒಂದು ವಿಕೆಟ್ ಕಳೆದುಕೊಂಡಿದ್ದಾಗ ಆಡಲಿಳಿದ ಸ್ಮಿತ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತದ ಬೌಲರುಗಳನ್ನು ಮನಬಂದಂತೆ ದಂಡಿಸಿದರು. ಸ್ಮಿತ್ ರನ್ ವೇಗವನ್ನು ನಿಯಂತ್ರಿಸಲು ಬೌಲರುಗಳಿಗೆ ಸಾಧ್ಯವಾಗದೇ ಹತಾಶರಾಗಿದ್ದರು.
 
ಭಾರತದ ವಿರುದ್ಧ 11 ಪಂದ್ಯಗಳಲ್ಲಿ ಸ್ಮಿತ್ 90.25 ಸರಾಸರಿ ದಾಖಲಿಸಿದ್ದಾರೆ. ಈ ಬೇಸಿಗೆಯಲ್ಲಿ ಸ್ಮಿತ್ ಧೋನಿ ತಂಡದ ವಿರುದ್ಧ ಎರಡೂ ಸ್ವರೂಪದ ಆಟಗಳಲ್ಲಿ ಒಟ್ಟು 115. 2 ಸರಾಸರಿ ರನ್ ಮಾಡಿ, 921 ರನ್ ಕಲೆಹಾಕಿದ್ದರು.
 
ಎರಡೂ ತಂಡಗಳ ಪರ ಅಭಿಮಾನಿಗಳು ಕಲೆತಿದ್ದು, ಆಸ್ಟ್ರೇಲಿಯಾದ ಬ್ಯಾಟಿಂಗ್ ಪ್ರದರ್ಶನವನ್ನು ಮನಸಾರೆ ಆನಂದಿಸಿದರು. ಆದರೆ ಭಾರತದ ಅಭಿಮಾನಿಗಳು ಭಾರತ ಕೂಡ ಆಸಿಸ್ ಬೃಹತ್ ಮೊತ್ತ ಚೇಸ್ ಮಾಡುತ್ತದೆಂಬ ಆಶಾಭಾವನೆ ಹೊಂದಿದ್ದು, ಭಾರತ ಫೈನಲ್ ಪ್ರವೇಶಿಸುವ ಕನಸು ಕಂಡಿದ್ದಾರೆ.   ಡೇವಿಡ್ ವಾರ್ನರ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ, ಸ್ಮಿತ್ ಮತ್ತು ಫಿಂಚ್ ನಿರಾಯಾಸವಾಗಿ ಬ್ಯಾಟಿಂಗ್ ಮಾಡಿ  ಎರಡನೇ ವಿಕೆಟ್‌ಗ 184 ರನ್ ಕಲೆಹಾಕಿದರು.

ಸ್ಮಿತ್ ಕೇವಲ 93 ಎಸೆತಗಳಲ್ಲಿ ಭರ್ಜರಿ 105 ರನ್ ಬಾರಿಸಿ ಆಸಿಸ್ ಸ್ಕೋರ್ ಗತಿಯನ್ನು ಚುರುಕುಗೊಳಿಸಿದರು. ಫಿಂಚ್ ಕೂಡ 116 ಎಸೆತಗಳಲ್ಲಿ 81 ರನ್ ಉತ್ತಮ ಸ್ಕೋರ್ ಮಾಡಿದರು.  33 ಓವರುಗಳಾಗಿದ್ದಾಗ ಆಸ್ಟ್ರೇಲಿಯಾ 1 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತ್ತು. ಆಸ್ಟ್ರೇಲಿಯಾ 350ರ ಗಡಿ ದಾಟುವುದೆಂದು ನಿರೀಕ್ಷಿಸಲಾಗಿತ್ತು.

ಆದರೆ ಸ್ಮಿತ್ ಔಟಾದ ಬಳಿಕ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿದ್ದರಿಂದ 328 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಮಿಚೆಲ್ ಜಾನ್ಸನ್ 9 ಎಸೆತಗಳಲ್ಲಿ ಅಜೇಯ 27 ರನ್ ಬಾರಿಸಿ ಆಸಿಸ್ ಸ್ಕೋರನ್ನು 325 ಗಡಿ ದಾಟಿಸಿದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments