ಶ್ರೇಯಸ್ ಅಯ್ಯರ್‌ ತಂದೆಯಿಂದಲೇ ಬಂತು ಅಭಿಮಾನಿಗಳಿಗೆ ಸಂದೇಶ, ಇಲ್ಲಿದೆ ಮಾಹಿತಿ

Sampriya
ಮಂಗಳವಾರ, 28 ಅಕ್ಟೋಬರ್ 2025 (19:43 IST)
Photo Credit X
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಗಾಯಗೊಂಡಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್​​ ಶ್ರೇಯಸ್ ಅಯ್ಯರ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ.

ಅದೇನೆಂದರೆ ನೆಚ್ಚಿನ ಕ್ರಿಕೆಟಿಗ ಶ್ರೇಯಸ್ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಪ್ರಸ್ತುತ ಅಯ್ಯರ್​ ಅವರು ಸಿಡ್ನಿಯ ಸೇಂಟ್ ವಿನ್ಸೆಂಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರ ಆರೋಗ್ಯ ಸುಧಾರಿಸುತ್ತಿರುವ ಕಾರಣ ಈ ವಾರದೊಳಗೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಶ್ರೇಯಸ್ ಅಯ್ಯರ್​ ತಂದೆ ಸಂತೋಷ್ ಅಯ್ಯರ್ ದೃಢಪಡಿಸಿದ್ದಾರೆ.

ಬಿಸಿಸಿಐ ವೈದ್ಯಕೀಯ ತಂಡವು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅವರಿಗೆ ಸಿಡ್ನಿಯ ಅತ್ಯುತ್ತಮ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಒಂದು ವಾರದೊಳಗೆ ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ. ಸಾಧ್ಯವಾದರೆ, ಅದಕ್ಕೂ ಮೊದಲೇ ಮನೆಗೆ ಮರಳಬಹುದು. ಅಯ್ಯರ್​ ಅವರು ಟಿ20 ತಂಡದ ಭಾಗವಾಗಿರದ ಕಾರಣ ಅವರು ನೇರವಾಗಿ ಮನೆಗೆ ಬರಲಿದ್ದಾರೆ. ಆದ್ದರಿಂದ ನಾವು ಸಿಡ್ನಿಗೆ ಹೋಗುವ ನಿರ್ಧಾರವನ್ನು ಬದಲಾಯಿಸಿದ್ದೇವೆ. ನಾವು ಅಲ್ಲಿಗೆ ಹೋಗುತ್ತಿಲ್ಲ ಎಂದು ಸಂತೋಷ್ ಅಯ್ಯರ್ ಡೆಕ್ಕನ್ ಕ್ರಾನಿಕಲ್‌ಗೆ ತಿಳಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS: ಟಿ20 ಯಲ್ಲೂ ಆಸ್ಟ್ರೇಲಿಯಾ ಕೈಲಿ ಹೊಡೆಸಿಕೊಂಡ ಟೀಂ ಇಂಡಿಯಾ

ಅಭಿಷೇಕ್‌ ಶರ್ಮಾ ಬ್ಯಾಗ್‌ ನೋಡಿ ಹರ್ಷದೀಪ್‌, ಶುಭ್ಮನ್ ಗಿಲ್ ಹೀಗೇ ಕಾಲೆಳೆಯುವುದಾ

ಹುಡುಗರ ಹೃದಯ ಗೆದ್ದ ಸ್ಮೃತಿ ಮಂಧಾನಗೆ ಮದುವೆ ಫಿಕ್ಸ್‌, ಎಲ್ಲಿ, ಯಾವಾಗ ಇಲ್ಲಿದೆ ಮಾಹಿತಿ

IND vs AUS: ವಿಕೆಟ್ ಮೇಲೆ ವಿಕೆಟ್ ಬಿದ್ದರೂ ಅಭಿಷೇಕ್ ಶರ್ಮಾಗೆ ಕ್ಯಾರೇ ಇಲ್ಲ

ಮತಾಂತರ ಆರೋಪದಿಂದ ಆತಂಕದ ಖಾಯಿಲೆವರೆಗೆ: ಸೆಮಿಫೈನಲ್ ಸ್ಟಾರ್ ಜೆಮಿಮಾ ರೊಡ್ರಿಗಸ್ ಕತೆ

ಮುಂದಿನ ಸುದ್ದಿ
Show comments