Select Your Language

Notifications

webdunia
webdunia
webdunia
webdunia

ಶಿಖರ್ ಧವನ್ ಶತಕ: ಬಾಂಗ್ಲಾ ವಿರುದ್ಧ ಭಾರತ 239 ನೋಲಾಸ್

ಶಿಖರ್ ಧವನ್ ಶತಕ: ಬಾಂಗ್ಲಾ ವಿರುದ್ಧ ಭಾರತ 239 ನೋಲಾಸ್
dhaka , ಬುಧವಾರ, 10 ಜೂನ್ 2015 (18:31 IST)
ಬಾಂಗ್ಲಾದೇಶದ ವಿರುದ್ಧ ಭಾರತದ ಟೆಸ್ಟ್ ಪಂದ್ಯದಲ್ಲಿ ಶಿಖರ್ ಧವನ್ ತಮ್ಮ ಮೂರನೇ ಟೆಸ್ಟ್ ಶತಕದ ಮೂಲಕ ಟೆಸ್ಟ್ ಪಂದ್ಯಕ್ಕೆ ಕಮ್ ಬ್ಯಾಕ್ ಆಗಿದ್ದು, ಮಳೆಯಿಂದ ಅಡ್ಡಿಯಾದ ಪಂದ್ಯದಲ್ಲಿ ಭಾರತ  239 ರನ್‌ಗೆ ನೋಲಾಸ್ ಆಗಿದ್ದು, ಶಿಖರ್ ಧವನ್ ಮತ್ತು ಮುರಳಿ ವಿಜಯ್ ಭದ್ರ ಅಡಿಪಾಯ ಹಾಕಿದ್ದಾರೆ. 
 
ಫಾತುಲ್ಲಾದ ಖಾನ್ ಸಾಹೇಬ್ ಒಸ್ಮಾನ್ ಆಲಿ ಸ್ಟೇಡಿಯಂನ ಪರಿಪೂರ್ಣ ಬ್ಯಾಟಿಂಗ್ ಟ್ರಾಕ್‌ನಲ್ಲಿ ಎಡಗೈ ಆಟಗಾರ ಧವನ್ (150ಕ್ಕೆ ನಾಟೌಟ್) ಮತ್ತು ಬಲಗೈ ಆಟಗಾರ ಮುರಳಿ ವಿಜಯ್( 89 ಬ್ಯಾಟಿಂಗ್) ಬಿರುಸಿನ ವೇಗದಲ್ಲಿ ರನ್ ಸ್ಕೋರ್ ಮಾಡಿ  ಟೀಂ ಇಂಡಿಯಾದ ದೊಡ್ಡ ಮೊತ್ತಕ್ಕೆ ಅಡಿಪಾಯ ಹಾಕಿದರು. ಧವನ್ 158 ಎಸೆತಗಳಲ್ಲಿ 150 ರನ್ ಸಿಡಿಸಿದರು. ಅವರ ಸ್ಕೋರಿನಲ್ಲಿ 21 ಬೌಂಡರಿಗಳಿದ್ದವು.

ಅವರಿಗೆ ಸಾಥ್ ನೀಡಿದ ಮುರಳಿ ವಿಜಯ್ 178 ಎಸೆತಗಳಲ್ಲಿ ಅಜೇಯ 89 ರನ್ ಬಾರಿಸಿದರು. ಧವನ್ ಮತ್ತು ವಿಜಯ್ ದ್ವಿಶತಕದ ಜೊತೆಯಾಟವಾಡಿದ್ದು ಇದು ಎರಡನೇ ಬಾರಿಯಾಗಿದ್ದು, 2013ರಲ್ಲಿ ಮೊಹಾಲಿಯಲ್ಲಿ ಅವರು 289 ರನ್ ಜೊತೆಯಾಟವಾಡಿದ್ದರು.

 ಬಾಂಗ್ಲಾ ಬೌಲರುಗಳಾದ  ಶಕೀಬ್ ಅಲ್ ಹಸನ್ (9 ಓವರುಗಳಲ್ಲಿ 34 ರನ್) ತಾಯಿಜುಲ್ ಇಸ್ಲಾಮ್ ( 12 ಓವರುಗಳಲ್ಲಿ 55 ರನ್) ಮತ್ತು ಸ್ಪಿನ್ನರ್ ಜುಬೈರ್ ಹುಸೇನ್ (7 ಓವರುಗಳಲ್ಲಿ 41 ರನ್)  ಮತ್ತು ಶುವಾಗಟಾ ಹೊಮ್ (13 ಓವರುಗಳಲ್ಲಿ 47 ರನ್) ಭಾರತದ ಓಪನರುಗಳ ರನ್ ವೇಗಕ್ಕೆ ಕಡಿವಾಣ ಹಾಕಲು ವಿಫಲರಾದರು.   ಧವನ್ ಅವರ ಶತಕ 101 ಎಸೆತಗಳಲ್ಲಿ ಬಂದಿದ್ದು, ಅದರಲ್ಲಿ 16 ಬೌಂಡರಿಗಳಿದ್ದವು. ಅವರ ಮುಂಚಿನ ಶತಕ 115 ರನ್ 2014ರ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಬಂದಿತ್ತು. 

Share this Story:

Follow Webdunia kannada