Select Your Language

Notifications

webdunia
webdunia
webdunia
webdunia

ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷರಾಗಿ ಎರಡನೇ ಬಾರಿ ನೇಮಕ

ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷರಾಗಿ ಎರಡನೇ ಬಾರಿ ನೇಮಕ
ಕೋಲ್ಕತಾ , ಸೋಮವಾರ, 5 ಅಕ್ಟೋಬರ್ 2015 (15:02 IST)
ಶಶಾಂಕ್ ಮನೋಹರ್ ಅವರು ಎರಡನೇ ಬಾರಿ ಅವಿರೋಧವಾಗಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಬಿಸಿಸಿಐನಲ್ಲಿ ಹೊಸ ಶಕೆ ಆರಂಭವಾಗಿದೆ. ಪೂರ್ವ ವಲಯದ ಎಲ್ಲಾ ಘಟಕಗಳು ಸರ್ವಾನುಮತದಿಂದ ಅಧ್ಯಕ್ಷ ಹುದ್ದೆಗೆ ಮನೋಹರ್ ಹೆಸರನ್ನು ಅನುಮೋದಿಸಿದರು. ಇದರಿಂದಾಗಿ ಮಂಡಳಿಯ ಅಧಿಕಾರ ರಾಜಕೀಯದಲ್ಲಿ ಶ್ರೀನಿವಾಸ್ ಹಿಡಿತ ಕ್ಷೀಣಿಸುತ್ತಿರುವುದನ್ನು ಇದು ಬಿಂಬಿಸಿದೆ.
 
ಮನೋಹರ್ ಎಲ್ಲಾ ಆರು ಸಂಸ್ಥೆಗಳಿಂದ ಅನುಮತಿ ಪಡೆದು ಏಕಮಾತ್ರ ಅಭ್ಯರ್ಥಿಯಾಗಿದ್ದರು. ತಮ್ಮ ನೇಮಕದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಮನೋಹರ್, ಬಿಸಿಸಿಐ ಈಗಿರುವ ಸ್ಥಿತಿಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ಬಿಸಿಸಿಐ ಭ್ರಷ್ಚಾಚಾರ ಮತ್ತು ಹಿತಾಸಕ್ತಿ ಸಂಘರ್ಷ ವಿಷಯ ನಿಭಾಯಿಸಲು ತೆಗೆದುಕೊಳ್ಳುವ ಕಾರ್ಯತಂತ್ರವನ್ನು ಅವರು ವಿವರಿಸಿದರು.
 
ಬಿಸಿಸಿಐ ಮಂಡಳಿಯಿಂದ ಸ್ವತಂತ್ರವಾದ ನ್ಯಾಯಾಧಿಕಾರಿಯನ್ನು ಹಿತಾಸಕ್ತಿ ಸಂಘರ್ಷದ ದೂರುಗಳನ್ನು ನಿಭಾಯಿಸಲು ನೇಮಕ ಮಾಡಲಿದೆ. ಆಟದಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡುವಂತೆ ಮಂಡಳಿಯು ಆಟಗಾರರಿಗೆ ತಿಳಿವಳಿಕೆ ನೀಡುತ್ತದೆ ಎಂದು ಮನೋಹರ್ ಹೇಳಿದ್ದಾರೆ.
 

Share this Story:

Follow Webdunia kannada