Select Your Language

Notifications

webdunia
webdunia
webdunia
webdunia

ಮಹಿಳಾ ಕ್ರಿಕೆಟಿಗರಿಗೆ ಕೇಂದ್ರ ಗುತ್ತಿಗೆ ಪದ್ಧತಿ: ಶಶಾಂಕ್ ಮನೋಹರ್

ಮಹಿಳಾ ಕ್ರಿಕೆಟಿಗರಿಗೆ ಕೇಂದ್ರ ಗುತ್ತಿಗೆ ಪದ್ಧತಿ: ಶಶಾಂಕ್  ಮನೋಹರ್
kolkatta , ಸೋಮವಾರ, 5 ಅಕ್ಟೋಬರ್ 2015 (16:01 IST)
ಶಶಾಂಕ್ ಮನೋಹರ್ ಅಧ್ಯಕ್ಷರಾದ ಬೆನ್ನಲ್ಲೇ ಹಲವಾರು ಸುಧಾರಣಾ ಕ್ರಮಗಳನ್ನು ಬಿಸಿಸಿಐ  ಘೋಷಿಸಿದ್ದು, ಮಹಿಳಾ ಕ್ರಿಕೆಟಿಗರನ್ನು ಕೇಂದ್ರ ಗುತ್ತಿಗೆ ಪದ್ಧತಿಗೆ ಒಳಪಡಿಸುವುದನ್ನು ಪ್ರಕಟಿಸಿದ್ದಾರೆ.  ಪುರುಷ ಆಟಗಾರರಿಗೆ ಕೇಂದ್ರ ಗುತ್ತಿಗೆ ಪದ್ಧತಿ ಅಳವಡಿಸಿದ 11 ವರ್ಷಗಳ ಬಳಿಕ ಮಹಿಳೆಯರಿಗೂ ಈ ಸೌಲಭ್ಯ ನೀಡಲಾಗಿದೆ.

ಈ ಕ್ರಮದಿಂದ ಹೆಚ್ಚೆಚ್ಚು ಯುವತಿಯರು ಕ್ರಿಕೆಟ್ ಕ್ರೀಡೆಗೆ ಆಗಮಿಸುವುದಕ್ಕೆ ಪ್ರೋತ್ಸಾಹಿಸುತ್ತದೆ ಎಂದು ಮನೋಹರ್ ಹೇಳಿದರು.  ಇದೊಂದು ಸ್ವಾಗತಾರ್ಹ ಕ್ರಮವಾಗಿದ್ದು, ಮಹಿಳಾ ಕ್ರಿಕೆಟ್‌ ಸುಧಾರಣೆಗೆ ಇನ್ನಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಪುರುಷ ಕ್ರಿಕೆಟ್ ಆಟಗಾರರ ರೀತಿ ಮಹಿಳಾ ಕ್ರಿಕೆಟರ್‌ಗಳಿಗೆ ಕೂಡ ಉದ್ಯೋಗ ಭದ್ರತೆಯ ಭಾವನೆ ಅಗತ್ಯವಾಗಿದೆ.

ಗುತ್ತಿಗೆಗಳಲ್ಲಿ ಅವರು ಎಷ್ಟು ಹಣದ ಮೊತ್ತ ಪಡೆಯುತ್ತಾರೆಂದು ನೋಡಬೇಕಾಗಿದೆ ಎಂದು ಭಾರತದ ಮಾಜಿ ನಾಯಕಿ ಎಡುಲ್ಜಿ ಹೇಳಿದ್ದಾರೆ. ಮನೋಹರ್ ನೇತೃತ್ವದ ಬಿಸಿಸಿಐ , ಮಹಿಳಾ ಕ್ರಿಕೆಟ್ ಸುಧಾರಣೆಗೆ ಹೆಚ್ಚು ಒತ್ತುನೀಡುತ್ತಾರೆಂದು ಅವರು ಆಶಿಸಿದರು.
 

Share this Story:

Follow Webdunia kannada