Select Your Language

Notifications

webdunia
webdunia
webdunia
webdunia

ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಶೇನ್ ವಾಟ್ಸನ್

ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಶೇನ್ ವಾಟ್ಸನ್
ಕರಾಚಿ , ಮಂಗಳವಾರ, 13 ಅಕ್ಟೋಬರ್ 2015 (14:44 IST)
ದುಬೈ ಮತ್ತು ಶಾರ್ಜಾದಲ್ಲಿ ಮುಂದಿನ ಫೆಬ್ರವರಿಯಲ್ಲಿ ನಡೆಯಲು ನಿಗದಿಯಾಗಿರುವ ಪಾಕಿಸ್ತಾನ ಸೂಪರ್ ಲೀಗ್ ಟಿ20 ಸರಣಿಯಲ್ಲಿ ಆಡಲು ಒಪ್ಪಿರುವ  ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವಾಟ್ಸನ್ ಅವರು ಇತ್ತೀಚಿನ ವಿದೇಶಿ ಆಟಗಾರರಾಗಿದ್ದಾರೆ. ಪಿಎಸ್‌ಎಲ್‌ನಲ್ಲಿ ಆಡಲು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ 152ನೇ ವಿದೇಶಿ ಆಟಗಾರ ಶೇನ್ ವಾಟ್ಸನ್ ಎಂದು ಪಿಸಿಬಿ ಹೇಳಿದೆ.

 ಪಿಎಸ್ಎಲ್ ಕಾರ್ಯಾಲಯವು ಪಿಎಎಸ್‌ಎಲ್ ಪಂದ್ಯಾವಳಿಗೆ ಆಟಗಾರರ ಹರಾಜನ್ನು ನಡೆಸಲಿದ್ದು, ಆರಂಭದಲ್ಲಿ ಐದು ಫ್ರಾಂಚೈಸಿ ತಂಡಗಳು ಭಾಗವಹಿಸಲಿದ್ದು, ನಾಲ್ಕರಿಂದ ಐದು ವಿದೇಶಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. 
 
ವಾಟ್ಸನ್ ಅವರು ಸಹಿ ಮಾಡಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಅವರ ಹಿನ್ನೆಲೆ ಗಮನಿಸಿದಾಗ ಅವರು ಪಿಎಸ್‌ಎಲ್ ಹರಾಜಿನಲ್ಲಿ ಬೇಡಿಕೆಯ ಆಟಗಾರರಾಗಬಹುದು ಎಂದು ಪಿಎಸ್‌ಎಲ್ ಯೋಜನೆಯ ಮುಖ್ಯಸ್ಥ ನಜಾಮ್ ಸೇಥಿ ಹೇಳಿದ್ದಾರೆ. 
 
 ಆರಂಭದಲ್ಲಿ ಪಿಸಿಬಿಯು ಆಟಗಾರರ ಸಹಿಗಳಿಗೆ ಕನಿಷ್ಠ ಮತ್ತು ಗರಿಷ್ಠ ಮೊತ್ತವನ್ನು ಪ್ರಕಟಿಸಿದ್ದು, 25,000 ಡಾಲರ್‌ನಿಂದ 150,000 ಡಾಲರ್‌ಗಳಾಗಿವೆ. ಆದರೆ ಒಪ್ಪಿಗೆ ಪತ್ರಗಳಿಗೆ ಸಹಿ ಹಾಕಿದ ಕೆಲವು ಅಗ್ರ ಆಟಗಾರರು ಹೆಚ್ಚಿನ ಮೊತ್ತಕ್ಕಾಗಿ ಒತ್ತಾಯಿಸಿದ್ದಾರೆ. 
 
 ಪೂರ್ಣ ಆಟಗಾರರಲ್ಲಿ ಭಾರತವನ್ನು ಬಿಡಲಾಗಿದ್ದು, ಕೆಲವು ಭಾರತೀಯ ಆಟಗಾರರಿಗೆ ಉದ್ಘಾಟನಾ ಆವೃತ್ತಿಯಲ್ಲಿ ಆಡುವುದಕ್ಕೆ ಅವಕಾಶ ನೀಡುವಂತೆ ಭಾರತದ ಅಧಿಕಾರಿಗಳಿಗೆ ಮನವೊಲಿಸುವುದಾಗಿ ಸೇಥಿ ಹೇಳಿದ್ದಾರೆ. ಇದರಿಂದ ಲೀಗ್ ಪ್ರತಿಷ್ಠೆ ಮತ್ತು ಖ್ಯಾತಿ ಹೆಚ್ಚುತ್ತದೆ ಎಂದೂ ಅವರು ಹೇಳಿದರು. 
 

Share this Story:

Follow Webdunia kannada