Select Your Language

Notifications

webdunia
webdunia
webdunia
webdunia

ಶೇನ್ ವಾಟ್ಸನ್‌ಗೆ ಹೆಣ್ಣುಮಗು: ಸಾಮಾಜಿಕ ತಾಣದಲ್ಲಿ ಚಿತ್ರ ಪೋಸ್ಟ್

ಶೇನ್ ವಾಟ್ಸನ್‌ಗೆ ಹೆಣ್ಣುಮಗು: ಸಾಮಾಜಿಕ ತಾಣದಲ್ಲಿ ಚಿತ್ರ ಪೋಸ್ಟ್
ಸಿಡ್ನಿ , ಗುರುವಾರ, 28 ಮೇ 2015 (16:47 IST)
ಆಸ್ಟ್ರೇಲಿಯಾ ಆಲ್‌ರೌಂಡರ್ ಶೇನ್ ವಾಟ್ಸನ್ ಮತ್ತು ಅವರ ಪತ್ನಿ ಲೀ ಶನಿವಾರ ಜನಿಸಿದ ಹೆಣ್ಣು ಮಗು ಮಾಟಿಲ್ಡಾ ವಿಕ್ಟೋರಿಯಾದ ಸುಂದರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಮಾಟಿಲ್ಡಾ ಎರಡು ವರ್ಷದ ಸೋದರ ವಿಲ್‌ನ ತಂಗಿಯಾಗಿದ್ದಾಳೆ. ವಾಟ್ಸನ್ ಅವರು ವೆಸ್ಟ್‌ಇಂಡೀಸ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಕೂಡಲಿದ್ದು, ಪ್ರೆಸಿಡೆಂಟ್ಸ್ ಇಲೆವನ್ ವಿರುದ್ಧ ಆರಂಭಿಕ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

 ವಾಟ್ಸನ್ ತಮ್ಮ ವೆಬ್ಸೈಟ್ ಮತ್ತು ಸಾಮಾಜಿಕ ತಾಣಗಳಲ್ಲಿ ಹಸುಗೂಸಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ನಮ್ಮ ಕಣ್ಸೆಳೆಯುವ ಪುತ್ರಿ ಮಾಟಿಲ್ಡಾ ವಿಕ್ಟೋರಿಯಾ ವಾಟ್ಸನ್ ಎಂದು ವಾಟ್ಸನ್ ಪರಿಚಯಿಸಿದ್ದಾರೆ. ನಮ್ಮ ಸುಂದರ ಹೆಣ್ಣುಮಗುವಿನ ಮೇಲಿನ ಪ್ರೀತಿಯನ್ನು ವರ್ಣಿಸಲು ಪದಗಳೇ ಇಲ್ಲ. ವಿಲ್ ದೊಡ್ಡಣ್ಣನ ಪಾತ್ರ ನಿರ್ವಹಣೆಯಲ್ಲಿ ನಿರೀಕ್ಷೆಗಳನ್ನು ಮೀರಿದ್ದಾನೆ ಎಂದು ವಾಟ್ಸನ್ ಹೇಳಿದ್ದಾರೆ. 
 
 ರಾಜಸ್ಥಾನ ರಾಯಲ್ಸ್ ಐಪಿಎಲ್ ಫೈನಲ್ ರೇಸ್‌ನಿಂದ ನಿರ್ಗಮಿಸಿದ ಬಳಿಕ ವಾಟ್ಸನ್ ಆಸ್ಟ್ರೇಲಿಯಾಕ್ಕೆ ಹಿಂತಿರುಗಿದ್ದರು.  ಟಿ20 ಬಿಗ್ ಬ್ಯಾಷ್ ಲೀಗ್‌ನ ಮುಂದಿನ ಮೂರು ಸೀಸನ್‌ಗಳಿಗೆ 33 ವರ್ಷದ ವಾಟ್ಸನ್ ಸಿಡ್ನಿ ಥಂಡರ್‌ಗೆ ಸಹಿ ಹಾಕಿದ್ದಾರೆಂದು ಪ್ರಕಟಿಸಲಾಗಿದೆ. 
 

Share this Story:

Follow Webdunia kannada