Select Your Language

Notifications

webdunia
webdunia
webdunia
webdunia

ಪಾಕಿಸ್ತಾನದ ಆಲ್ರೌಂಡ್ ಪ್ರದರ್ಶನಕ್ಕೆ ಶಾಹಿತ್ ಅಫ್ರಿದಿ ಕುಷ್

ಪಾಕಿಸ್ತಾನದ ಆಲ್ರೌಂಡ್ ಪ್ರದರ್ಶನಕ್ಕೆ ಶಾಹಿತ್ ಅಫ್ರಿದಿ ಕುಷ್
ಕೊಲಂಬೊ , ಶುಕ್ರವಾರ, 31 ಜುಲೈ 2015 (21:03 IST)
ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕೆ ನಾಯಕ ಶಾಹಿದ್ ಅಫ್ರಿದಿ ಪುಳುಕಿತರಾಗಿದ್ದಾರೆ. ಪಾಕಿಸ್ತಾನದ ಟಿ20 ನಾಯಕ ಅಫ್ರಿದಿ ತಮ್ಮ ತಂಡವು ಟಿ 20 ಪಂದ್ಯವನ್ನು 29 ರನ್‌ಗಳಿಂದ ಗೆದ್ದಿದ್ದಕ್ಕೆ ಅತ್ಯುತ್ತಮ ಆಲ್‌ರೌಂಡ್ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ. 
 
ಗೆಲುವಿನ ಕ್ರೆಡಿಟ್ ಆಟಗಾರರಿಗೆ ಸಲ್ಲುತ್ತದೆ. ಇಂದು ತಂಡದ ಪ್ರಯತ್ನವಾಗಿದ್ದು, ಉತ್ತಮ ಜೊತೆಯಾಟ ಮೂಡಿಬಂದಿದೆ. ಶೆಹಜಾದ್, ಹಫೀಜ್, ಮಲಿಕ್ ಮತ್ತು ಉಮರ್ ಅಕ್ಮಲ್ ಎಲ್ಲರೂ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಬೌಲರ್‌ಗಳು ಕೂಡ ಚೆನ್ನಾಗಿ ಬೌಲ್ ಮಾಡಿದರು ಎಂದು ಅಫ್ರಿದಿ ಪಂದ್ಯದ ನಂತರ ಹೇಳಿದ್ದಾರೆ. 
 
ಯುವ ಆಟಗಾರರು ಗಂಭೀರವಾಗಿ ತೆಗೆದುಕೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ. ಪಾಕಿಸ್ತಾನದಿಂದ ಬಂದಿರುವ ಅಭಿಮಾನಿಗಳಿಗೂ ಕೂಡ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಅಫ್ರಿದಿ ಹೇಳಿದರು.
 
ಶ್ರೀಲಂಕಾ ತಂಡದಲ್ಲಿ ನಾಲ್ವರು ಹೊಸಬರಿದ್ದು ಅವರು ಉತ್ತಮವಾಗಿ ನಿರ್ವಹಿಸಿದ್ದಾರೆ, ಆದರೆ ಉಳಿದ ಆಟಗಾರರಿಂದ ಸರಿಯಾದ ಬೆಂಬಲ ಸಿಗಲಿಲ್ಲ ಎಂದು ಶ್ರೀಲಂಕಾ ನಾಯಕ ಮಾಲಿಂಗಾ ಹೇಳಿದ್ದಾರೆ.  ಅವರ ಬೌಲಿಂಗ್ ಫಾರಂ ಕೂಡ ಕಳವಳಕಾರಿಯಾಗಿದ್ದು, ಎರಡನೇ ಪಂದ್ಯದಲ್ಲಿ ಟೀಂ ಪುಟಿದೇಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

Share this Story:

Follow Webdunia kannada