Select Your Language

Notifications

webdunia
webdunia
webdunia
webdunia

ಶಾರುಕ್ ಖಾನ್ ಟ್ರಿನಿಡಾಡ್ ಟ್ಯುಬಾಗೊ ರೆಡ್ ಸ್ಟೀಲ್ ಸಿಪಿಎಲ್ ಚಾಂಪಿಯನ್ಸ್

ಶಾರುಕ್ ಖಾನ್ ಟ್ರಿನಿಡಾಡ್ ಟ್ಯುಬಾಗೊ ರೆಡ್ ಸ್ಟೀಲ್ ಸಿಪಿಎಲ್ ಚಾಂಪಿಯನ್ಸ್
ಪೋರ್ಟ್ ಆಫ್ ಸ್ಪೇನ್ , ಸೋಮವಾರ, 27 ಜುಲೈ 2015 (18:52 IST)
ಶಾರೂಕ್ ಖಾನ್ ಅವರ ಮಾಲೀಕತ್ವದ ಟ್ರಿನಿಡಾಡ್ ಮತ್ತು ಟೊಬ್ಯಾಗೊ ರೆಡ್ ಸ್ಟೀಲ್ ಕಂಪನಿಯು ಕ್ಯಾರಿಬಿಯನ್ ಪ್ರೀಮಿಯರ್ ಲೀಗ್‌ನ ಹೊಸ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.  ಕಳೆದ ಬಾರಿಯ ಪ್ರಶಸ್ತಿ ವಿಜೇತರಾದ ಬಾರ್ಬಡೋಸ್ ಟ್ರೈಡೆಂಡ್ಸ್ ತಂಡವನ್ನು  ಆಲ್‌ರೌಂಡ್ ಪ್ರದರ್ಶನದ ಮೂಲಕ ಫೈನಲ್ ಪಂದ್ಯದಲ್ಲಿ ಸೋಲಿಸಿ 20 ರನ್ ಅಂತರದಿಂದ ಜಯಗಳಿಸಿದರು. 
 
ಕ್ವೀನ್ಸ್ ಪಾರ್ಕ್‌ ಓವಲ್‌ನಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ ಭಾನುವಾರ ರಾತ್ರಿ  ಆಡಿದ ರೆಡ್ ಸ್ಟೀಲ್ 5 ವಿಕೆಟ್ ಕಳೆದುಕೊಂಡು 178 ರನ್ ಸ್ಕೋರ್ ಮಾಡಿ ಟ್ರೈಡೆಂಟ್ಸ್ ಬ್ಯಾಟಿಂಗ್ ಲೈನ್‌ಅಪ್‌ ಮುರಿದು ಪ್ರಪ್ರಥಮ ಸಿಪಿಎಲ್ ಪ್ರಶಸ್ತಿಯನ್ನು ಬುಟ್ಟಿಗೆ ಹಾಕಿಕೊಂಡಿತು.
 
ರೆಡ್ ಸ್ಟೀಲ್ ಪರ ಪಾಕಿಸ್ತಾನಿ ಕಮ್ರಾನ್ ಅಕ್ಮಲ್ 46 ಎಸೆತಗಳಲ್ಲಿ 60 ರನ್ ಬಾರಿಸಿದರು. ದಕ್ಷಿಣ ಆಫ್ರಿಕಾದ ಓಪನರ್ ಕ್ಯಾಮರಾನ್ ಡೆಲ್‌ಪೋರ್ಟ್ 38 ಎಸೆತಗಳಲ್ಲಿ 50 ರನ್ ಬಾರಿಸಿದರು. ಇವರಿಬ್ಬರ ಜೋಡಿ ಎರಡನೇ ವಿಕೆಟ್‌‌ಗೆ 102 ರನ್ ಬಾರಿಸಿತು.
 
ಇದಕ್ಕೆ ಉತ್ತರವಾಗಿ ಟ್ರೈಡೆಂಟ್ಸ್ ಉತ್ತಮ ಆರಂಭ ನೀಡಿ ಡ್ವೇನ್ ಸ್ಮಿತ್ 30 ಎಸೆತಗಳಲ್ಲಿ 49 ರನ್ ಬಾರಿಸಿದರು. 10ನೇ ಓವರಿನಲ್ಲಿ ಸ್ಮಿತ್ ಔಟಾದ ಬಳಿಕ ಟ್ರೈಡೆಂಟ್ಸ್ ಬ್ಯಾಟಿಂಗ್ ಕುಸಿದು ರನ್ ರೇಟ್ ಏರುತ್ತಾ ಹೋಯಿತು. ಕೊನೆಯ ಓವರಿನಲ್ಲಿ ಅವರಿಗೆ 26 ರನ್ ಅಗತ್ಯವಿತ್ತು. ಆದರೆ ಕೇವಲ 6 ರನ್ ಮಾತ್ರ ಗಳಿಸಲು ಸಾಧ್ಯವಾಗಿ ಸೋಲಪ್ಪಿತು. 
 
 ಅಕ್ಮಲ್ ತಮ್ಮ ಅಬ್ಬರದ ಆಟದಿಂದ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಡ್ವೇನ್ ಬ್ರೇವೋ  28 ವಿಕೆಟ್ ಮತ್ತು 173 ರನ್ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. 

Share this Story:

Follow Webdunia kannada