Select Your Language

Notifications

webdunia
webdunia
webdunia
webdunia

ದ್ವಿತೀಯ ಟೆಸ್ಟ್: ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ 255 ಕ್ಕೆ ಆಲೌಟ್

ದ್ವಿತೀಯ ಟೆಸ್ಟ್: ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ 255 ಕ್ಕೆ ಆಲೌಟ್
Vishakha Pattanam , ಶನಿವಾರ, 19 ನವೆಂಬರ್ 2016 (13:45 IST)
ವಿಶಾಖಪಟ್ಟಣಂ: ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ 255 ಕ್ಕೆ ಆಲೌಟ್ ಆಗಿದೆ. ಇದರೊಂದಿಗೆ ಮೊದಲ ಇನಿಂಗ್ಸ್ ನಲ್ಲಿ 200 ರನ್ ಹಿನ್ನಡೆ ಅನುಭವಿಸಿದೆ.

ನಿನ್ನೆ ದಿನದಂತ್ಯಕ್ಕೆ5 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿದ್ದ ಇಂಗ್ಲೆಂಡ್ ಇಂದು ನಿನ್ನೆಯ ಅಜೇಯ ಬ್ಯಾಟ್ಸ್ ಮನ್ ಗಳಾದ ಬೆನ್ ಸ್ಟೋಕ್ಸ್ ಮತ್ತು ಬೇರ್ ಸ್ಟೋ ಅವರ ಅರ್ಧಶತಕದ ನೆರವಿನಿಂದ ಮತ್ತಷ್ಟು ಮೊತ್ತ ವಿಸ್ತರಿಸಿತು. ಬೆಳಗಿನ ಅವಧಿಯಲ್ಲಿ ನೆಲಕಚ್ಚಿ ನಿಂತು ಆಡಿದ ಈ ಜೋಡಿ 110 ರನ್ ಪೇರಿಸಿತು. ಕೊನೆಯಲ್ಲಿ ಅದಿಲ್ ರಶೀದ್ 32 ರನ್ ಗಳಿಸಿದರು.

ಭಾರತದ ಪರ ರವಿಚಂದ್ರನ್ ಅಶ್ವಿನ್ ಮತ್ತೊಂದು ಐದು ವಿಕೆಟ್ ಗಳ ಗೊಂಚಲು ಪಡೆದರು. ಕೊನೆಯ ಎರಡು ವಿಕೆಟ್ ಗಳನ್ನು ಎರಡು ಎಸೆತಗಳಲ್ಲಿ ಪಡೆದುಕೊಂಡರು. ಉಳಿದೆಲ್ಲಾ ಬೌಲರ್ ಗಳೂ ಒಂದೊಂದು ವಿಕೆಟ್ ಪಡೆದುಕೊಂಡರು. ಸರಿಯಾಗಿ 200 ರನ್ ಮುನ್ನಡೆ ಸಾಧಿಸಿದ್ದರಿಂದ ಟೀಂ ಇಂಡಿಯಾ ಮತ್ತೆ ತನ್ನ ದ್ವಿತೀಯ ಸರದಿ ಆರಂಭಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿಯಲ್ಲಿ ಪಾಲ್ಗೊಳ್ಳಲು ಹಾಕಿ ತಂಡಕ್ಕೆ ಅನುಮತಿ ನೀಡಿದ ಪಾಕಿಸ್ತಾನ ಸರ್ಕಾರ