Select Your Language

Notifications

webdunia
webdunia
webdunia
webdunia

ಹಾಕಿ: ಸರ್ದಾರ್‌ಗೆ ಕೊಕ್, ರಿಯೊ ಒಲಿಂಪಿಕ್ಸ್‌ಗೆ ಶ್ರೀಜೇಶ್ ನಾಯಕ

ಹಾಕಿ:  ಸರ್ದಾರ್‌ಗೆ ಕೊಕ್, ರಿಯೊ ಒಲಿಂಪಿಕ್ಸ್‌ಗೆ ಶ್ರೀಜೇಶ್ ನಾಯಕ
ನವದೆಹಲಿ: , ಮಂಗಳವಾರ, 12 ಜುಲೈ 2016 (16:37 IST)
ಇತ್ತೀಚಿನ ಗಮನಾರ್ಹ ನಿರ್ಧಾರಗಳೊಂದರಲ್ಲಿ ಹಾಕಿ ಇಂಡಿಯಾ ಹಿರಿಯ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅವರನ್ನು ರಿಯೊ ಒಲಿಂಪಿಕ್ಸ್‌ಗೆ ತೆರಳುವ ರಾಷ್ಟ್ರೀಯ ತಂಡದ ನಾಯಕರಾಗಿ ಹೆಸರಿಸಿದ್ದು, ಸುದೀರ್ಘ ಕಾಲ ನಾಯಕರಾಗಿದ್ದ ಸರ್ದಾರ್ ಸಿಂಗ್ ಅವರಿಗೆ ನಾಯಕತ್ವದಿಂದ ಕೊಕ್ ನೀಡಲಾಗಿದೆ.
 
 ಶ್ರೀಜೇಶ್ ನಾಯಕತ್ವದಲ್ಲಿ ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಹಾಕಿಯಲ್ಲಿ ಬೆಳ್ಳಿಪದಕವನ್ನು ಭಾರತ ಜಯಿಸಿತ್ತು. ತಂಡವು ಹಾಲಿ ಚಾಂಪಿಯನ್ ಆಸ್ಟ್ರೇಲಿಯನ್ನರ ವಿರುದ್ಧ ಮನೋಜ್ಞ ಆಟವಾಡಿ ಗೋಲುರಹಿತ ಡ್ರಾ ಮಾಡಿಕೊಂಡಿತ್ತು.  ಆದರೆ ವಿವಾದಾತ್ಮಕ ಶೂಟ್‌ಔಟ್‌ನಲ್ಲಿ ಸೋಲಪ್ಪಿದ್ದರು.
 
ತಂಡದ ಮುಖ್ಯಭಾಗವಾದ ಎಸ್.ವಿ. ಸುನಿಲ್ ಅವರನ್ನು ಉಪನಾಯಕರಾಗಿ ನೇಮಿಸಲಾಗಿದೆ. ಸರ್ದಾರ್ ಸಿಂಗ್ ಅವರು ಮೈದಾನದಲ್ಲಿ ಮತ್ತು ಹೊರಗೆ ಸಂಕಷ್ಟದ ಸ್ಥಿತಿಗೆ ಸಿಕ್ಕಿದ್ದರು. ಮೈದಾನದಲ್ಲಿ ಮೊನಚಿನ ಮಿಡ್‌ಫೀಲ್ಡರ್ ಆಗಿದ್ದ ಅವರ ಆಟ ಇತ್ತೀಚೆಗೆ ಕ್ಷೀಣಿಸಿತ್ತು. ಇದಲ್ಲದೇ ಬ್ರಿಟಿಷ್ ಯುವತಿಗೆ ಮದುವೆಯ ಭರವಸೆ ನೀಡಿದ ಬಳಿಕ ಕೇಳಿಬಂದ ರೇಪ್ ಆರೋಪಗಳು ಅವರ ಖ್ಯಾತಿಯನ್ನು ಕುಂದಿಸಿತ್ತು. 
 
ತಂಡ:
ಗೋಲ್ ಕೀಪರ್: ಪಿಆರ್ ಶ್ರೀಜೇಶ್ (ನಾಯಕ)
ಡಿಫೆಂಡರ್‌ಗಳು: ಹರ್ಮನ್ ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಕೊತಾಜಿತ್ ಸಿಂಗ್ ಸುರೇಂದರ್ ಕುಮಾರ್ ವಿಆರ್ ರಘುನಾಥ್
ಮಿಡ್ ಫೀಲ್ಡರ್ಸ್: ಸರ್ದಾರ್ ಸಿಂಗ್, ದೇವಿಂದರ್ ವಾಲ್ಮೀಕಿ, ಡ್ಯಾನಿಶ್ ಮುಜ್‌ತಾಬಾ, ಚಿಂಗಲಸೇನ ಸಿಂಗ್, ಮನ್ಪ್ರೀತ್ ಸಿಂಗ್, ಎಸ್ಕೆ ಉತ್ತಪ್ಪ
 
ಫಾರ್ವರ್ಡ್ಸ್: ಎಸ್.ವಿ. ಸುನಿಲ್ (ಉಪ ನಾಯಕ), ಆಕಾಶ್ ದೀಪ್ ಸಿಂಗ್ ರಮಣದೀಪ್ ಸಿಂಗ್ ನಿಕ್ಕಿನ್ ತಿಮ್ಮಯ್ಯ
ಸ್ಟಾಂಡ್‌ಬೈ: ಪ್ರದೀಪ್ ಮೊರ್ ಹಾಗೂ ವಿಕಾಸ್ ದಹಿಯಾ (ಗೋಲ್ ಕೀಪರ್).

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಬುಕ್ಕಿಗಳು ಪಂದ್ಯಗಳ ಫಿಕ್ಸ್‌ಗಾಗಿ ಗಂಗೂಲಿಯನ್ನು ಸಂಪರ್ಕಿಸಿದ್ದರೇ? ಇಲ್ಲಿದೆ ಸತ್ಯಾಂಶ