Select Your Language

Notifications

webdunia
webdunia
webdunia
webdunia

ಶೋಯಬ್ ಮಲಿಕ್ 6 ವರ್ಷಗಳಲ್ಲಿ ಮೊದಲ ಶತಕ: ಪುಳಕಿತರಾದ ಸಾನಿಯಾ

ಶೋಯಬ್ ಮಲಿಕ್ 6 ವರ್ಷಗಳಲ್ಲಿ ಮೊದಲ ಶತಕ: ಪುಳಕಿತರಾದ ಸಾನಿಯಾ
ಇಸ್ಲಾಮಾಬಾದ್ , ಗುರುವಾರ, 28 ಮೇ 2015 (11:05 IST)
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಆಟಗಾರ ಶೋಯಬ್ ಮಲ್ಲಿಕ್ ಅವರು 6 ವರ್ಷಗಳ ನಂತರ ಪ್ರಥಮ ಶತಕ ದಾಖಲಿಸಿದ್ದು ಟೆನ್ನಿಸ್ ತಾರೆ ಪತ್ನಿ ಸಾನಿಯಾ ಮಿರ್ಜಾ ಅವರನ್ನು ಪುಳಕಿತರನ್ನಾಗಿ ಮಾಡಿದೆ.  ಶೋಯಬ್ ಮಲ್ಲಿಕ್ ಅವರ ಶತಕದ ನೆರವಿನಿಂದ ಲಾಹೋರ್‌ನಲ್ಲಿ ಪಾಕಿಸ್ತಾನ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಜಯಗಳಿಸಿತು.  ಮಲ್ಲಿಕ್ ಅವರ 8ನೇ ಏಕದಿನ ಶತಕವು ಕೇವಲ 70 ಎಸೆತಗಳಲ್ಲಿ ಬಂದಿದ್ದರಿಂದ ಆತಿಥೇಯರು 3 ವಿಕೆಟ್‌ಗೆ 375 ರನ್ ಹೊಡೆಯಲು ಕಾರಣವಾಯಿತು. ಜಿಂಬಾಬ್ವೆ 41 ರನ್ ಅಂತರದಿಂದ ಸೋಲನುಭವಿಸಿತು. 
 
 
ಪಾಕಿಸ್ತಾನದ ಮಾಜಿ ನಾಯಕ ಮಲಿಕ್ 2013ರ ಜೂನ್‌ನಲ್ಲಿ ಕೊನೆಯದಾಗಿ ಭಾರತದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಏಕದಿನ ಪಂದ್ಯವಾಡಿದ್ದರು. ಅವರ ಪತ್ನಿ ಸಾನಿಯಾ ಟೆನ್ನಿಸ್ ಲೋಕದಲ್ಲಿ ಬಲ ಹೆಚ್ಚಿಸಿಕೊಂಡು ಟೆನ್ನಿಸ್ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು.  ಆದರೆ  ಪಾಕ್ ಕ್ರಿಕೆಟ್  ಮಲಿಕ್ ಅವರನ್ನು ಕಡೆಗಣಿಸಿದ್ದರಿಂದ ರಾಷ್ಟ್ರೀಯ ಆಯ್ಕೆದಾರರನ್ನು ಮೆಚ್ಚಿಸುವ ಹತಾಶ ಪ್ರಯತ್ನ ಮಾಡಿದ್ದರು. ಕೊನೆಗೂ ಮಲಿಕ್ 76 ಎಸೆತಗಳಲ್ಲಿ 112 ರನ್ ಬಾರಿಸಿ ಬೆಳ್ಳಿಯ ಗೆರೆ ಮೂಡಿಸಿದರು. 
 
ಮಲಿಕ್ ಶತಕದಿಂದ ಉಬ್ಬಿದ ಸಾನಿಯಾ ತನ್ನ ಸಂತೋಷವನ್ನು ಮುಚ್ಚಿಟ್ಟುಕೊಳ್ಳಲಾಗದೇ,  ಟ್ವಿಟರ್‌ನಲ್ಲಿ ಹಂಚಿಕೊಂಡು ತಮ್ಮ ಸಂತೋಷವನ್ನು ಪ್ರಕಟಿಸಿದರು.  2009ರ ಭಯೋತ್ಪಾದನೆ ದಾಳಿ ಬಳಿಕ ಮೊ ದಲ ಬಾರಿಗೆ ಪಾಕಿಸ್ತಾನ ಅಂತಾರಾಷ್ಟ್ರೀಯ ಸರಣಿಯ ಆತಿಥ್ಯ ವಹಿಸಿದ್ದು, ಟಿ20 ಸರಣಿಯನ್ನು 2-0ಯಿಂದ ಗೆದ್ದಿದ್ದರೆ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ  1-0ಯಿಂದ ಮುನ್ನಡೆ ಸಾಧಿಸಿದ್ದಾರೆ.  ಸಾನಿಯಾ ಅವರ ಅರಳುತ್ತಿರುವ ಟೆನ್ನಿಸ್ ವೃತ್ತಿಜೀವನದ ಯಶಸ್ಸಿಗೆ ಸ್ವತಃ ಮಲಿಕ್ ಟ್ವಿಟರ್‌ನಲ್ಲಿ ಈ ಮುಂಚೆ ಅಭಿನಂದನೆ ಸಲ್ಲಿಸಿದ್ದರು. 

Share this Story:

Follow Webdunia kannada