Select Your Language

Notifications

webdunia
webdunia
webdunia
webdunia

ನಂ.1 ಶ್ರೇಯಾಂಕ ಉಳಿಸಿಕೊಂಡ ಸೈನಾ ನೆಹ್ವಾಲ್

ನಂ.1 ಶ್ರೇಯಾಂಕ ಉಳಿಸಿಕೊಂಡ ಸೈನಾ ನೆಹ್ವಾಲ್
ನವದೆಹಲಿ , ಗುರುವಾರ, 20 ಆಗಸ್ಟ್ 2015 (15:12 IST)
ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟದ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಕಳೆದ ವಾರ ವಿಶ್ವ ಚಾಂಪಿಯನ್‍‌ಷಿಪ್‌ ಫೈನಲ್‌ನಲ್ಲಿ ಸಾನಿಯಾ ಸ್ಪೇನ್‌ನ ಕರೋಲಿನಾ ಮಾರಿನ್ ಅವರಿಗೆ ಸೋತಿದ್ದರೂ ಇತ್ತೀಚಿನ ಶ್ರೇಯಾಂಕದಲ್ಲಿ ಅವರನ್ನು ಹಿಂದಿಕ್ಕಿದ್ದಾರೆ.

 ಸೈನಾ ಹಾಲಿ ಚಾಂಪಿಯನ್ನರ ವಿರುದ್ಧ  16-21 ಮತ್ತು 19-21ರಿಂದ ಸೋಲಪ್ಪಿದ ಬಳಿಕ ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದ ಸೈನಾ ವಿಶ್ವ ಚಾಂಪಿಯನ್‌ಷಿಪ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದರು.
 
ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಕಗ್ಗಂಟಿನಿಂದ ಸೈನಾ ಇದೇ ಮೊದಲ ಬಾರಿಗೆ ಪಾರಾಗಿದ್ದರು. ಪ್ರತಿಷ್ಠಿತ ಅಖಿಲ ಭಾರತ ಇಂಗ್ಲೆಂಡ್ ಚಾಂಪಿಯನ್‌‌ಷಿಪ್‌ ಫೈನಲ್‌ನಲ್ಲಿ ಕೂಡ ಕರೋಲಿನಾಗೆ ಸೈನಾ ಸೋತಿದ್ದರು. 
 

Share this Story:

Follow Webdunia kannada