Select Your Language

Notifications

webdunia
webdunia
webdunia
webdunia

ಅಮೆರಿಕನ್ನರು ಕ್ರಿಕೆಟ್ ಬ್ಯಾಟ್ ಎತ್ತಿಕೊಳ್ಳಲು ಸಚಿನ್ ತೆಂಡೂಲ್ಕರ್ ಬಯಕೆ

ಅಮೆರಿಕನ್ನರು ಕ್ರಿಕೆಟ್ ಬ್ಯಾಟ್ ಎತ್ತಿಕೊಳ್ಳಲು ಸಚಿನ್ ತೆಂಡೂಲ್ಕರ್ ಬಯಕೆ
ವಾಷಿಂಗ್ಟನ್ , ಬುಧವಾರ, 7 ಅಕ್ಟೋಬರ್ 2015 (16:54 IST)
ಅಮೆರಿಕನ್ನರು ಬೇಸ್ ಬಾಲ್ ಬ್ಯಾಟ್ ಜತೆ ಕ್ರಿಕೆಟ್ ಬ್ಯಾಟ್ ಕೈಗೆತ್ತಿಕೊಳ್ಳುವುದನ್ನು ತಮಗೆ ನೋಡುವಾಸೆ ಎಂದು ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಕ್ರಿಕೆಟ್ ಹರಡುವ ಅವರ ಯೋಜನೆಯಲ್ಲಿ ಸಚಿನ್ ತೆಂಡೂಲ್ಕರ್ ಅಮೆರಿಕದ ಮೇಲೆ ಕಣ್ಣಿರಿಸಿದ್ದಾರೆ. 
 
ನೀವು ಪ್ರಯತ್ನ ಮಾಡಿದರೆ ಮಾತ್ರ ಕಲಿಯುವುದಕ್ಕೆ ಸಾಧ್ಯ ಎಂದು ತೆಂಡೂಲ್ಕರ್ ಹೇಳಿದರು. ತೆಂಡೂಲ್ಕರ್ ಅವರು ನವೆಂಬರ್‌ನಲ್ಲಿ  10 ದಿನಗಳ ಮೂರು ನಗರ ಕ್ರಿಕೆಟ್ ಆಲ್ ಸ್ಟಾರ್ ಎಕ್ಸಿಬಿಷನ್ ಪ್ರವಾಸವನ್ನು ಅಮೆರಿಕದಲ್ಲಿ  ಆಸ್ಟ್ರೇಲಿಯಾದ ಕ್ರಿಕೆಟ್ ಲೆಜೆಂಡ್  ಶೇನ್ ವಾರ್ನ್ ಜತೆ ಹಮ್ಮಿಕೊಂಡಿದ್ದಾರೆ.
 
 ಅಮೆರಿಕನ್ನರು ಸ್ಟೇಡಿಯಂಗೆ ಬರಲಾರಂಭಿಸಿದರೆ ಇಲ್ಲಿಂದ ಅವರು ಕ್ರಿಕೆಟ್ ಆಟದ ಬೆನ್ನಟ್ಟುವುದರಲ್ಲಿ ಅಚ್ಚರಿಯಿಲ್ಲ ಎಂದು ತೆಂಡೂಲ್ಕರ್ ಹೇಳಿದರು. ಪ್ರವಾಸದ ಪರಿಣಾಮವು ಅದು ಎಷ್ಟು ಜನರನ್ನು ಪ್ರೇರೇಪಿಸುವುದಾಗಿದೆ ಎಂದು ಅಳತೆಮಾಡುವುದಾಗಿದೆ. 
 
ಬೇಸ್ ಬಾಲ್ ಬ್ಯಾಟ್ ಜತೆ ಕ್ರಿಕೆಟ್ ಬ್ಯಾಟ್ ಎಷ್ಟು ಜನರು ಎತ್ತಿಕೊಳ್ಳುತ್ತಾರೆಂದು ನೋಡಲು ನಾನು ಬಯಸುತ್ತೇನೆ. ಅದರ ಅರ್ಥ ನಾವು ಹೆಜ್ಜೆಗುರುತುಗಳನ್ನು ಮೂಡಿಸಿದ್ದೇವೆಂದಾಗುತ್ತದೆ ಎಂದು ತೆಂಡೂಲ್ಕರ್ ಹೇಳಿದರು. 
 

Share this Story:

Follow Webdunia kannada