Select Your Language

Notifications

webdunia
webdunia
webdunia
webdunia

ಗುರುಪೂರ್ಣಿಮೆಯಂದು ಗುರು ಅಚ್ರೇಕರ್ ಆಶೀರ್ವಾದ ಪಡೆದ ಸಚಿನ್

ಗುರುಪೂರ್ಣಿಮೆಯಂದು ಗುರು ಅಚ್ರೇಕರ್ ಆಶೀರ್ವಾದ ಪಡೆದ ಸಚಿನ್
ಮುಂಬೈ , ಶುಕ್ರವಾರ, 31 ಜುಲೈ 2015 (20:58 IST)
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶುಕ್ರವಾರ ತಮ್ಮ ಬಾಲ್ಯದಲ್ಲಿ ಕೋಚ್ ಆಗಿದ್ದ ರಮಾಕಾಂತ್ ಅಚ್ರೇಕರ್ ಅವರನ್ನು ಕಂಡು ಗುರು ಪೂರ್ಣಿಮೆಯ ಸಂದರ್ಭದಲ್ಲಿ ಅವರ ಆಶೀರ್ವಾದ ಪಡೆದರು. ಪ್ರಸಿದ್ಧ ಬ್ಯಾಟ್ಸ್‌ಮನ್ ಚಿತ್ರವೊಂದನ್ನು ಟ್ವೀಟ್ ಮಾಡಿದ್ದು ಅದರಲ್ಲಿ ಬಾಲ್ಯದ ಕೋಚ್ ಅಚ್ರೇಕರ್‌ಗೆ ಗೌರವ ಸೂಚಿಸುವ ಸಲುವಾಗಿ ಅವರ ಪಾದ ಮುಟ್ಟಿ ನಮಸ್ಕರಿಸಿದರು.
 
 ಈ ಪವಿತ್ರ ದಿನದಂದು ನನ್ನ ಗುರುವಿನ ಆಶೀರ್ವಾದ ಪಡೆದೆ. ಎಲ್ಲಿರಿಗೂ ಸಂತೋಷದ ಗುರುಪೂರ್ಣಿಮೆ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.  ತೆಂಡೂಲ್ಕರ್ 83 ವರ್ಷ ವಯಸ್ಸಿನ ಅಚ್ರೇಕರ್ ಅವರಿಂದ  ಈ ಪವಿತ್ರ ದಿನದಂದು ಪ್ರತಿ ವರ್ಷವೂ  ಆಶೀರ್ವಾದ ಪಡೆಯುವುದು ವಾಡಿಕೆ.

 ಮಾಸ್ಟರ್ ಬ್ಲಾಸ್ಟರ್ 2013ರಲ್ಲಿ ತಮ್ಮ ವಿದಾಯದ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ವೈಯಕ್ತಿಕವಾಗಿ ಅಚ್ರೇಕರ್ ಅವರಿಗೆ ಆಹ್ವಾನವಿತ್ತಿದ್ದರು. 
 

Share this Story:

Follow Webdunia kannada