Select Your Language

Notifications

webdunia
webdunia
webdunia
webdunia

ಅಹ್ಮದಾಬಾದ್ ಟೆಸ್ಟ್‌‌ನೊಂದಿಗೆ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಆರಂಭ

ಅಹ್ಮದಾಬಾದ್ ಟೆಸ್ಟ್‌‌ನೊಂದಿಗೆ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಆರಂಭ
ನವದೆಹಲಿ , ಸೋಮವಾರ, 25 ಮೇ 2015 (12:44 IST)
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಅಕ್ಟೋಬರ್‌‌ನಲ್ಲಿ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು,  ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಅಹ್ಮದಾಬಾದ್‌ನಲ್ಲಿ ಆಡಲಿದೆ. ಅದನ್ನು ಅನುಸರಿಸಿ ದೆಹಲಿ, ನಾಗಪುರ ಮತ್ತು ಬೆಂಗಳೂರಿನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ.  ಟೆಸ್ಟ್ ಸರಣಿಯ ಬೆನ್ನ ಹಿಂದೆಯೇ  ಐದು ಏಕ ದಿನ ಪಂದ್ಯಗಳನ್ನು ಚೆನ್ನೈ, ಕಾನ್ಪುರ, ಮಧ್ಯಪ್ರದೇಶ, ರಾಜಕೋಟ್ ಮತ್ತು ಮುಂಬೈನಲ್ಲಿ ಆಡಲಿದೆ. 
 
2016ರ ಮಾರ್ಚ್‌ನಲ್ಲಿ ವಿಶ್ವ ಟಿ 20 ಪಂದ್ಯಾವಳಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ಭಾರತ ಮುಂದಿನ 10 ತಿಂಗಳಲ್ಲಿ 11 ಟಿ20 ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಕೂಡ ಮೂರು ಟಿ20 ಪಂದ್ಯಗಳನ್ನು ಭಾರತ ಆಡಲಿದೆ. ಪಂದ್ಯಗಳನ್ನು ಕೋಲ್ಕತಾ, ಮೊಹಾಲಿ ಮತ್ತು ಧರ್ಮಶಾಲಾ ಆತಿಥ್ಯ ವಹಿಸುತ್ತದೆ. 
 
 ಬಿಸಿಸಿಐ ಟ್ವಿಟರ್ ಮೂಲಕ ಕ್ರಿಕೆಟ್ ತಾಣಗಳನ್ನು ಬಯಲು ಮಾಡಿದ್ದು, ಮುಂದಿನ ವರ್ಷದ ಫೆಬ್ರವರಿಯಲ್ಲಿ ವಿಶಾಖಪಟ್ನಂ, ಪುಣೆ ಮತ್ತು ಡೆಲ್ಲಿಯಲ್ಲಿ ಶ್ರೀಲಂಕಾ ವಿರುದ್ಧ ಟಿ20 ಪಂದ್ಯಗಳನ್ನು ಆಯೋಜಿಸುವುದಾಗಿ ತಿಳಿಸಿದೆ. 

Share this Story:

Follow Webdunia kannada