Webdunia - Bharat's app for daily news and videos

Install App

ಗುಜರಾತ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೃಹತ್ ಮೊತ್ತ: 3 ವಿಕೆಟ್‌ಗೆ 248

Webdunia
ಶನಿವಾರ, 14 ಮೇ 2016 (18:27 IST)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಂತ ಪ್ರವೇಶಿಸಲು ಗುಜರಾತ್ ಲಯನ್ಸ್ ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಅದಕ್ಕೆ ಪೂರಕವಾಗಿ ರಾಯಲ್ ಚಾಲೆಂಜರ್ಸ್‌ ಮೊದಲ ಬ್ಯಾಟಿಂಗ್‌ನಲ್ಲಿ  3 ವಿಕೆಟ್ ಕಳೆದುಕೊಂಡು 248 ರನ್ ಬೃಹತ್ ಮೊತ್ತವನ್ನು ಪೇರಿಸಿದೆ.
 

ವಿರಾಟ್ ಕೊಹ್ಲಿ ಅವರ 55 ಎಸೆತಗಳಲ್ಲಿ 109 ರನ್ ಮತ್ತು ಎಬಿ ಡಿವಿಲಿಯರ್ಸ್ ಅವರ 52 ಎಸೆತಗಳಲ್ಲಿ ಅಜೇಯ 129 ರನ್ ನೆರವಿನಿಂದ ರಾಯಲ್ ಬೃಹತ್ ಮೊತ್ತ ದಾಖಲಿಸಲು ನೆರವಾಯಿತು.   ಕೊಹ್ಲಿಯ ಸ್ಕೋರಿನಲ್ಲಿ  5 ಬೌಂಡರಿಗಳು ಮತ್ತು 8 ಸಿಕ್ಸರುಗಳಿದ್ದರೆ, ಡಿ ವಿಲಿಯರ್ಸ್ ಸ್ಕೋರಿನಲ್ಲಿ 10 ಬೌಂಡರಿಗಳು ಮತ್ತು 12 ಸಿಕ್ಸರುಗಳಿವೆ. ವಿರಾಟ್ ಕೊಹ್ಲಿಗೆ ತಮ್ಮ ತಂಡದ ಬೌಲಿಂಗ್ ವೈಫಲ್ಯದ ಅರಿವು ಈಗಾಗಲೇ ಆಗಿದ್ದು, ಅದಕ್ಕಾಗಿ ಬೃಹತ್ ಮೊತ್ತವನ್ನು ಪೇರಿಸಲು ಉದ್ದೇಶಿಸಿದ್ದರು.



 ಈ ಮುಂಚೆ ಬಾರಿಸಿದ 180-190 ಗಡಿಯ ಸ್ಕೋರನ್ನು ವಿರೋಧಿ ತಂಡಗಳು ನಿರಾಯಾಸವಾಗಿ ಮುಟ್ಟಿದ್ದವು. ಈ ಹಿನ್ನೆಲೆಯಲ್ಲಿ ಕೊಹ್ಲಿ ಮತ್ತು ಡಿವಿಲಿಯರ್ಸ್ ಸಿಡಿಲಬ್ಬರದ ಆಟಕ್ಕೆ ಮೊರೆ ಹೋಗಿ ಬೃಹತ್ ಮೊತ್ತವನ್ನು ಪೇರಿಸಿದರು.  ಆರಂಭದಲ್ಲೇ ಸ್ಫೋಟಕ ಬ್ಯಾಟ್ಸ್‌ಮನ್ ಎಂದು ಹೆಸರಾಗಿದ್ದ ಕ್ರಿಸ್ ಗೇಲ್ ಮತ್ತೆ ಬ್ಯಾಟಿಂಗ್ ವೈಫಲ್ಯ ಪ್ರದರ್ಶಿಸಿ ಕೇವಲ 6 ರನ್‌ಗೆ ಔಟಾದರು. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

 

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಮತ್ತೆ ಟಾಸ್ ಗೆದ್ದ ಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಬದಲಾವಣೆ

ಆಂಗ್ಲರ ನಾಡಿನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಚಾರಿತ್ರಿಕ ಸಾಧನೆ: ಭಾರತಕ್ಕೆ ಚೊಚ್ಚಲ ಟಿ20 ಸರಣಿ

Viral video: ಈ ಹುಡುಗನ ಬೌಲಿಂಗ್ ಗೆ ನೀವೂ ಫಿದಾ ಆಗ್ಲೇಬೇಕು

IND vs ENG: ವೇಗದ ಪಿಚ್ ಗೆ ವೇಗದ ಠಕ್ಕರ್ ಕೊಡಲು ರೆಡಿಯಾದ ಟೀಂ ಇಂಡಿಯಾ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೆಂಚುರಿ ಮೇಲೆ ಸೆಂಚುರಿ ಹೊಡೆದ ಶುಭಮನ್ ಗಿಲ್‌ಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಬಡ್ತಿ

ಮುಂದಿನ ಸುದ್ದಿ
Show comments