ಮುಂಬೈ: ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಗಾಯಗೊಂಡ ಟೀಂ ಇಂಡಿಯಾ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಮುಂದಿನ ವಾರ ಲಂಡನ್ ಗೆ ತೆರಳಲಿದ್ದಾರೆ.
ಅವರು ತೊಡೆ ಗಾಯಕ್ಕೊಳಗಾಗಿದ್ದು, ಇಂಗ್ಲೆಂಡ್ ಸರಣಿಯಲ್ಲಿ ಆಡುತ್ತಿಲ್ಲ. ಈಗಾಗಲೇ ಬಿಸಿಸಿಐ ವೈದ್ಯಕೀಯ ತಂಡ ಗಾಯದ ಸ್ಕ್ಯಾನಿಂಗ್ ವರದಿಯನ್ನು ಲಂಡನ್ ನ ತಜ್ಞ ವೈದ್ಯರಿಗೆ ಕಳುಹಿಸಿದ್ದಾರೆ. ಬಹುತೇಕ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದಂತೆ ಕಾಣುತ್ತಿದೆ. ಒಂದು ವೇಳೆ ಶಸ್ತ್ರ ಚಿಕಿತ್ಸೆಗೊಳಗಾದರೆ ಅವರಿಗೆ ಮುಂದಿನ 12 ವಾರ ವಿಶ್ರಾಂತಿಯ ಅಗತ್ಯವಿರುತ್ತದೆ. ಆಗ ಆಸ್ಟ್ರೇಲಿಯಾ ಸರಣಿಯನ್ನೂ ಅವರು ತಪ್ಪಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರೋಹಿತ್ ಶರ್ಮಾ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ತನ್ನ ಗಾಯದ ತೀವ್ರತೆ ಎಷ್ಟು ಎಂದು ಇನ್ನೂ ಸ್ಪಷ್ಟವಾಗಿಲ್ಲ. ತಜ್ಞ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ