Select Your Language

Notifications

webdunia
webdunia
webdunia
webdunia

ಸೋಫಿಯಾ ಹಯಾತ್ ಆಯ್ತು, ರೋಹಿತ್ ಈಗ ಮತ್ತೊಬ್ಬಳ ಜೊತೆ

ಸೋಫಿಯಾ ಹಯಾತ್ ಆಯ್ತು, ರೋಹಿತ್  ಈಗ ಮತ್ತೊಬ್ಬಳ ಜೊತೆ
ಪರ್ತ್ , ಗುರುವಾರ, 5 ಮಾರ್ಚ್ 2015 (16:34 IST)
ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಸಂದರ್ಭದಲ್ಲಿ ಬಾರತದ ಕ್ರಿಕೆಟ್ ಆಟಗಾರರು ಪತ್ನಿಯರು ಮತ್ತು ಗೆಳತಿಯರೊಂದಿಗೆ ಜತೆಗೂಡುವುದಕ್ಕೆ ಅವಕಾಶ ನೀಡಿಲ್ಲ. ಆದರೆ ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಪರ್ತ್‌ನಲ್ಲಿ ಹುಡುಗಿಯೊಬ್ಬಳ ಜೊತೆ ಇದ್ದಿದ್ದು ಪತ್ತೆಯಾಗಿದೆ.
 
 ವರದಿಗಳ ಪ್ರಕಾರ, ಟೀಂ ಇಂಡಿಯಾ ವಾಸ್ತವ್ಯ ಹೂಡಿರುವ ಹಯಾತ್ ರೀಜೆನ್ಸಿ ಹೊಟೆಲ್‌ಗೆ 100 ಮೀಟರ್ ದೂರದಲ್ಲಿರುವ  ಫ್ರೇಸರ್ಸ್ ಸೂಟ್ಸ್ ಹೊಟೆಲ್‌ನಲ್ಲಿ ರೋಹಿತ್ ಗೆಳತಿ ತಂಗಿದ್ದಾಳೆ. ರೋಹಿತ್ ಆಗಾಗ್ಗೆ ಅಲ್ಲಿಗೆ ಭೇಟಿ ಕೊಡುತ್ತಿದ್ದೆರೆಂದು ಹೇಳಲಾಗಿದೆ.
 
ರೋಹಿತ್ ಈ ಯುವತಿಯ ಜೊತೆ ಭೋಜನ ಮಾಡಿದ್ದು, ಅವಳ ಗುರುತು ಮಾತ್ರ ಪತ್ತೆಯಾಗಿಲ್ಲ. ರೋಹಿತ್‌ಗೆ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಕೂಡ ಜೊತೆಗೂಡಿದ್ದರು. ಧವನ್, ಕೊಹ್ಲಿ ಆ ಸ್ಥಳದಿಂದ ನಿರ್ಗಮಿಸಿದ ಮೇಲೂ ರೋಹಿತ್ ಯುವತಿಯೊಂದಿಗೆ ಹೊಟೆಲ್‌ನಲ್ಲಿ ಸ್ವಲ್ಪ ಕಾಲ ತಂಗಿ ನಂತರ ಟ್ಯಾಕ್ಸಿಯಲ್ಲಿ ಹೋದರು. ಯುಎಇ ವಿರುದ್ಧ ಪಂದ್ಯಕ್ಕೆ ಒಂದು ದಿನ ಮುಂಚೆ ಕೂಡ ರೋಹಿತ್ ಅದೇ ಯುವತಿಯೊಂದಿಗೆ ಇದ್ದಿದ್ದನ್ನು ಪತ್ತೆಹಚ್ಚಲಾಗಿತ್ತು.
 
 ಕ್ವಾರ್ಟರ್ ಫೈನಲ್ ಆಗುವವರೆಗೆ ಪತ್ನಿ ಅಥವಾ ಗೆಳತಿಯರೊಂದಿಗೆ ಇರಬಾರದೆಂದು ಬಿಸಿಸಿಐ ಕಟ್ಟಪ್ಪಣೆ ಮಾಡಿದ್ದರೂ ರೋಹಿತ್ ಆ ಯುವತಿಯೊಂದಿಗೆ ಇರುವುದರಿಂದ ಅನೇಕ ಮಂದಿಯ ಹುಬ್ಬೇರಿಸಿದೆ.

Share this Story:

Follow Webdunia kannada