Select Your Language

Notifications

webdunia
webdunia
webdunia
webdunia

ಅಂಪೈರ್ ತಪ್ಪು ತೀರ್ಪಿನಿಂದಾಗಿ ಔಟಾಗದೇ ಉಳಿದ ರೋಹಿತ್‌ರಿಂದ ಶತಕ

ಅಂಪೈರ್ ತಪ್ಪು ತೀರ್ಪಿನಿಂದಾಗಿ ಔಟಾಗದೇ ಉಳಿದ ರೋಹಿತ್‌ರಿಂದ ಶತಕ
ಅಡಿಲೇಡ್ , ಮಂಗಳವಾರ, 31 ಮಾರ್ಚ್ 2015 (17:39 IST)
ಅಡಿಲೇಡ್ : ಬಾಂಗ್ಲಾ ದೇಶ  ಇಂಗ್ಲೆಂಡ್ ತಂಡವನ್ನು ಸೋಲಿಸಿ  ಪ್ರಥಮ ಬಾರಿಗೆ ವಿಶ್ವಕಪ್ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿತು. ಆದರೆ ಭಾರತ ವಿರುದ್ಧ  ಬಾಂಗ್ಲಾ ಸೆಮಿಫೈನಲ್ ಪಂದ್ಯದಲ್ಲಿ ಅಂಪೈರ್‌ನ ತಪ್ಪು ತೀರ್ಪು ಕೋಲಾಹಲವೆಬ್ಬಿಸಿತು. ಐಸಿಸಿ ಅಧ್ಯಕ್ಷ ಮುಸ್ತಾಫಾ ಕಮಲ್ ಕೂಡ ಈ ತೀರ್ಪಿನ ವಿರುದ್ಧ ದನಿ ಎತ್ತಿದ್ದರು. ವೇಗದ ಬೌಲರ್ ರುಬೆಲ್ ಹುಸೇನ್ ಅವರ ಫುಲ್ ಟಾಸ್ ಎಸೆತವನ್ನು ಹೊಡೆದ ರೋಹಿತ್ ಶರ್ಮಾ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಕ್ಯಾಚಿತ್ತರು. ಆದರೆ ಈ ಎಸೆತ ಭುಜದ ಮೇಲೆ ಹೋಗಿದ್ದು ನೋ ಬಾಲ್ ಎಂದು ಅಂಪೈರ್ ಅಲೀಮ್ ದರ್ ಘೋಷಿಸಿದರು. 
 
ರೀಪ್ಲೇಗಳಲ್ಲಿ ಚೆಂಡು ಭುಜಕ್ಕಿಂತ ಕೆಳಮಟ್ಟದಲ್ಲಿ ಹೋಗಿದ್ದು ಸ್ಪಷ್ಟವಾಗಿ ತೋರಿಸಿದ್ದು ಬ್ಯಾಟ್ಸ್‌ಮನ್‌ಗೆ ಔಟ್ ಕೊಡಬೇಕಿತ್ತು. ಆಗ 90ರ ಗಡಿಯಲ್ಲಿದ್ದ ರೋಹಿತ್ ನಂತರ 137ವರೆಗೆ ಸ್ಕೋರ್ ಮಾಡಿ ಬಾಂಗ್ಲಾದೇಶವನ್ನು ವಿಶ್ವಕಪ್‌ನಿಂದ ನಿರ್ಗಮಿಸಲು ನೆರವಾದರು.  ಆದರೆ ಅಲೀಮ್ ದರ್ ತೀರ್ಪು ಬಾಂಗ್ಲಾದೇಶದಲ್ಲಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು.ಐಸಿಸಿ ಅಧ್ಯಕ್ಷ ಮುಸ್ತಾಫಾ ಕಮಲ್ ಅಂಪೈರಿಂಗ್ ಕಳಪೆ ಗುಣಮಟ್ಟದ ಬಗ್ಗೆ ಐಸಿಸಿ ತನಿಖೆ ಮಾಡಬೇಕು ಎಂದು ತಿಳಿಸಿದರು.

 
ಅಂಪೈರ್ ಸರಿಯಾದ ತೀರ್ಪು ನೀಡಿದ್ದರೆ ನಮ್ಮ ದೇಶ ಭಾರತದ ವಿರುದ್ಧ ಸೋಲುತ್ತಿರಲಿಲ್ಲ ಎಂದು  ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಕೂಡ ಹೇಳಿದರು. ಆದರೆ ಐಸಿಸಿ ಕ್ರೀಡಾ ಮನೋಭಾವದ ಪ್ರಕಾರ, ಅಂಪೈರ್ ನಿರ್ಧಾರ ಅಂತಿಮವಾಗಿದ್ದು ಅದನ್ನು ಗೌರವಿಸಬೇಕು ಎಂದು ಹೇಳಿತು. ನಂತರ ಅಲೀಮ್ ಧರ್ ಯಾವುದೇ ಸೆಮಿ ಫೈನಲ್ ಅಥವಾ ಫೈನಲ್ ಪಂದ್ಯದಲ್ಲಿ ಅಂಪೈರಿಂಗ್ ಮಾಡಲಿಲ್ಲ. 

Share this Story:

Follow Webdunia kannada