ನೀನು ಮಾಡಿದ್ದು ಕ್ಯಾಪ್ಟನ್ ಆಗಿ ನಾನೇ ನೋಡಿಲ್ಲ: ಕುಲದೀಪ್ ಯಾದವ್ ಕಾಲೆಳೆದ ರೋಹಿತ್ ಶರ್ಮಾ

Krishnaveni K
ಗುರುವಾರ, 30 ಮೇ 2024 (13:29 IST)
Photo Credit: X
ನ್ಯೂಯಾರ್ಕ್:  ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ತಮ್ಮ ಸಹ ಆಟಗಾರರ ಕಾಲೆಳೆಯುವುದರಲ್ಲಿ ನಿಸ್ಸೀಮ. ಇದೀಗ ರೋಹಿತ್ ಶರ್ಮಾ ಕೈಯಲ್ಲಿ ಲೇಟೆಸ್ಟ್ ಆಗಿ ಕುಲದೀಪ್ ಯಾದವ್ ರೋಸ್ಟ್ ಆಗಿದ್ದಾರೆ.

ಟಿ20 ವಿಶ್ವಕಪ್ ಆಡಲು ನ್ಯೂಯಾರ್ಕ್ ಗೆ ತೆರಳಿರುವ ಟೀಂ ಇಂಡಿಯಾ ಆಟಗಾರರು ಐಸಿಸಿ ವರ್ಷದ ಏಕದಿನ ತಂಡ ಕ್ಯಾಪ್ ಪಡೆಯಲು ಜೊತೆ ಸೇರಿದ್ದಾರೆ. ಟೀಂ ಇಂಡಿಯಾ ಹೊಸ ಜೆರ್ಸಿಯಲ್ಲಿ ಎಲ್ಲಾ ಆಟಗಾರರೂ ಮಿಂಚಿದ್ದಾರೆ.

ಪರಸ್ಪರ ಆಟಗಾರರು ಐಸಿಸಿ ಗೌರವದ ಕ್ಯಾಪ್ ಪಡೆದುಕೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಕುಲದೀಪ್ ಯಾದವ್ ತಮ್ಮ ಸರದಿ ಬಂದಾಗ ಕಳೆದ ವರ್ಷ ಬೌಲರ್ ಆಗಿ ಮಾತ್ರವಲ್ಲ, ಬ್ಯಾಟಿಗನಾಗಿಯೂ ತಂಡಕ್ಕೆ ಕೊಡುಗೆ ನೀಡಿದ್ದರಲ್ಲಿ ಸಂತೋಷವಿದೆ ಎಂದಿದ್ದಾರೆ.

ಇದನ್ನು ಕೇಳಿಸಿಕೊಂಡ ರೋಹಿತ್ ನೀನು ಯಾವಾಗ ಬ್ಯಾಟಿಂಗ್ ಮಾಡಿದ್ದು ನಾನು ತಂಡದ ಕ್ಯಾಪ್ಟನ್ ಆಗಿದ್ದರೂ ನೋಡಿಯೇ ಇಲ್ಲ ಎಂದು ಕಾಲೆಳೆದಿದ್ದಾರೆ. ಕುಲದೀಪ್ ಗೆ ಮುಂದೆ ಮಾತನಾಡಲು ಅವಕಾಶವೂ ನೀಡದೇ ರೋಹತ್ ಚುಡಾಯಿಸಿದ್ದಾರೆ. ಬಳಿಕ ಕುಲದೀಪ್ ನಗುತ್ತಾ ಸುಮ್ಮನಾಗಬೇಕಾಯಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಕೆಟ್ ಪಡೆದ ಕುಲ್‌ದೀಪ್‌ ಜತೆ ಕಪಲ್ ಡ್ಯಾನ್ಸ್ ಮಾಡಿದ ಕಿಂಗ್ ಕೊಹ್ಲಿ, ವೈರಲ್ ವಿಡಿಯೋ

IND VS SA: ಜೈಸ್ವಾಲ್ ಶತಕ, ರೋ–ಕೋ ಅಬ್ಬರಕ್ಕೆ ದಕ್ಷಿಣ ಆಫ್ರಿಕಾ ತತ್ತರ

ಹೋಗು ಬೌಲಿಂಗ್ ಮಾಡು, ಕಣ್‌ ಸನ್ನೆಯಲ್ಲೇ ಕುಲ್‌ದೀಪ್‌ಗೆ ಗದರಿದ ರೋಹಿತ್, ಎಲ್ಲರಿಗೂ ನಗುವೋ ನಗು

IND VS SA: ಟಾಸ್ ಸೋತರು ಭಾರತಕ್ಕೆ ಸವಾಲಿನ ಗುರಿ ನೀಡಿದ ದಕ್ಷಿಣ ಆಫ್ರಿಕಾ

IND vs SA: ಕೆಎಲ್ ರಾಹುಲ್ ಇಂದು ಟಾಸ್ ಗೆದ್ದಿದ್ದು ಹೇಗೆ, ಇಲ್ಲಿದೆ ರೋಚಕ ಕಹಾನಿ video

ಮುಂದಿನ ಸುದ್ದಿ
Show comments