Daily Horoscope
✕

ಹೋಗಲೋ ಎಂದ ರೋಹಿತ್ ಶರ್ಮಾ, ಮುಖ ಮುಚ್ಚಿಕೊಂಡ ರಿಷಬ್ ಪಂತ್!

Webdunia
ಸೋಮವಾರ, 4 ನವೆಂಬರ್ 2019 (09:29 IST)
ನವದೆಹಲಿ: ಡಿಆರ್ ಎಸ್ ವಿಚಾರದಲ್ಲಿ ಎಲ್ಲರೂ ಧೋನಿ ಆಗಲು ಸಾಧ‍್ಯವಿಲ್ಲ ಎನ್ನುವುದು ನಿನ್ನೆ ಬಾಂಗ್ಲಾದೇಶ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಅರಿವಾಗಿರಬೇಕು.


ಇದು ನಡೆದಿದ್ದ ಬಾಂಗ್ಲಾ ಬ್ಯಾಟಿಂಗ್ ವೇಳೆ. ಆಗ ಕ್ರೀಸ್ ನಲ್ಲಿ ಸೌಮ್ಯ ಸರ್ಕಾರ್ ಇದ್ದರು. 10 ನೇ ಓವರ್ ನಲ್ಲಿ ಸೌಮ್ಯ ಸರ್ಕಾರ್ ವಿರುದ್ಧ ರಿಷಬ್ ಔಟ್ ಗೆ ಮನವಿ ಮಾಡಿದರು. ಆದರೆ ಅಂಪಾಯರ್ ಪುರಸ್ಕರಿಸಲಿಲ್ಲ. ಹೀಗಾಗಿ ರೋಹಿತ್ ಶರ್ಮಾಗೆ ಡಿಆರ್ ಎಸ್ ತೆಗೆದುಕೊಳ್ಳಲು ಬಲವಂತ ಮಾಡಿದರು.

ಅದರಂತೆ ರೋಹಿತ್ ರಿಷಬ್ ಒತ್ತಡಕ್ಕೆ ಮಣಿದು ಡಿಆರ್ ಎಸ್ ತೆಗೆದುಕೊಂಡರು. ಆದರೆ ರಿವ್ಯೂನಲ್ಲಿ ಬಾಲ್ ಬ್ಯಾಟ್ ಗೆ ತಾಗಿರಲೇ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಇಂತಹದ್ದೊಂದು ಸಿಲ್ಲಿ ಡಿಆರ್ ಎಸ್ ತೆಗೆದುಕೊಂಡಿದ್ದಕ್ಕೆ ರೋಹಿತ್ ಕೈ ಸನ್ನೆ ಮೂಲಕ ನಗುತ್ತಲೇ ಹೋಗಲೋ ಎನ್ನುವಂತೆ ಲೇವಡಿ ಮಾಡಿದರು. ಅತ್ತ ಅವಮಾನಗೊಂಡ ರಿಷಬ್ ಮುಖ ಮುಚ್ಚಿಕೊಂಡು ತಮ್ಮ ಕೆಲಸಕ್ಕೆ ನಡೆದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರೂ ಧೋನಿ ಆಗಲು ಸಾಧ್ಯವಿಲ್ಲ ಎಂದು ರಿಷಬ್ ರ ಕಾಲೆಳೆಯುತ್ತಿದ್ದಾರೆ. ಈ ಪಂದ್ಯದ ಸೋಲಿಗೆ ಇದೂ ಒಂದು ಕಾರಣವಾಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI : ಇಂದಿನ ಪಂದ್ಯದ ಪಿಚ್ ವರದಿ, ಲೈವ್ ಸ್ಟ್ರೀಮಿಂಗ್ ಮತ್ತು ಟೀಂ ಇಂಡಿಯಾ ಸಂಭಾವ್ಯ ಬದಲಾವಣೆಗಳು

ಬೌಲರ್‌ಗಳ ವೃತ್ತಿಜೀವನ ಅಪಾಯದಲ್ಲಿದೆ: ಸೀಮಿತ ಓವರ್‌ಗಳ ಪಿಚ್‌ಗಳ ವಿರುದ್ಧ ಗೌತಮ್ ಗಂಭೀರ್ ಆಕ್ರೋಶ

ಮನೆಯಲ್ಲಿ ಟಿವಿ ನೋಡುತ್ತಲೇ ಲಾಸ್ಟ್ ಐದು ಓವರ್ ಬೌಲಿಂಗ್ ಪ್ಲ್ಯಾನ್ ಮಾಡಿದ ಸೂರ್ಯಕುಮಾರ್ ಯಾದವ್ Video

IND vs WI: ಅಯ್ಯೋ ಚೇಟಾ ಸೆಂಚುರಿ ಮಿಸ್ ಆಯ್ತಲ್ಲಾ.. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್

IND vs WI 2nd T20I: ರಾಂಚಿಯಲ್ಲಿ ರೋಚಕ ಸಮರ, ಪಂದ್ಯದ ಸಮಯ, ಟಿವಿ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments