Webdunia - Bharat's app for daily news and videos

Install App

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

Krishnaveni K
ಸೋಮವಾರ, 30 ಜೂನ್ 2025 (11:40 IST)
ಲಂಡನ್: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಭ್ ಪಂತ್ ಶತಕ ಗಳಿಸಿದ ಬಳಿಕ ಸೋಮರ್ ಸಾಲ್ಟ್ ಜಿಗಿತ ಮಾಡಿ ಸೆಲೆಬ್ರೇಷನ್ ಮಾಡುವುದನ್ನು ಶುರು ಮಾಡಿದ್ದಾರೆ. ಆದರೆ ಈ ಜಿಗಿತದಿಂದ ಅವರಿಗೆ ಅಪಾಯವಿದೆಯೇ? ಈ ಬಗ್ಗೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಶಾಕಿಂಗ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಕಳೆದ ಐಪಿಎಲ್ ನಿಂದ ರಿಷಭ್ ಶತಕ ಹೊಡೆದಾಗ ಸೋಮರ್ ಸಾಲ್ಟ್ ಜಿಗಿತ ಮಾಡುವ ಮೂಲಕ ಸೆಲೆಬ್ರೇಷನ್ ಮಾಡುವುದನ್ನು ಶುರು ಮಾಡಿದ್ದಾರೆ. ಇದರಿಂದ ಅವರು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನೇನೋ ಒದಗಿಸುತ್ತಿದ್ದಾರೆ. ಆದರೆ ಇದು ಅವರಿಗೆ ಎಷ್ಟು ಅಪಾಯಕಾರಿ ಗೊತ್ತಾ?

ಎಲ್ಲರಿಗೂ ಗೊತ್ತಿರುವ ಹಾಗೆ ಎರಡು ವರ್ಷದ ಮೊದಲಷ್ಟೇ ರಿಷಭ್ ಅಪಘಾತಕ್ಕೀಡಾಗಿ ಬದುಕಿ ಬಂದಿದ್ದೇ ಪವಾಡ. ಎದ್ದು ಓಡಾಡಲೂ ಆಗದ ಸ್ಥಿತಿಯಲ್ಲಿದ್ದ ಅವರು ಬಳಿಕ ಆರೇ ತಿಂಗಳಲ್ಲಿ ರಿಕವರಿಯಾಗಿ ಎಲ್ಲರನ್ನೂ ಅಚ್ಚರಿಗೊಳಪಡಿಸಿದ್ದರು.

ಈ ಬಗ್ಗೆ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯ ಡಾ ದಿನ್ಶಾ ಪರ್ದಿವಾಲಾ ಪ್ರತಿಕ್ರಿಯಿಸಿದ್ದಾರೆ. ‘ರಿಷಭ್ ನೋಡಲು ಕೊಂಚ ದಪ್ಪಗಿದ್ದರೂ ಅವರದ್ದು ಜಿಮ್ನಾಸ್ಟಿಕ್ ಬಾಡಿ. ಅವರು ಜಿಮ್ನಾಸ್ಟಿಕ್ ಅಭ್ಯಾಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಸೋಮರ್ ಸಾಲ್ಟ್ ಜಿಗಿತದಲ್ಲಿ ಪರಿಣತಿಯಿದೆ. ಆದರೆ ಈ ರೀತಿಯ ಸೆಲೆಬ್ರೇಷನ್ ರಿಸ್ಕಿ ಮತ್ತು ಅನಗತ್ಯ’ ಎಂದು ಅವರು ಹೇಳಿದ್ದಾರೆ.

ಈ ಹಿಂದೊಮ್ಮೆ ಕನ್ನಡದ ನಟ ದೂದ್ ಪೇಡ ದಿಗಂತ್ ಸೋಮರ್ ಸಾಲ್ಟ್ ಜಿಗಿತ ಮಾಡಲು ಹೋಗಿ ಗಂಭೀರ ಗಾಯ ಮಾಡಿಕೊಂಡಿದ್ದು ನೆನಪಿರಬಹುದು. ಇಂತಹ ಜಿಗಿತದಲ್ಲಿ ಕೊಂಚವೇ ಆಯತಪ್ಪಿದರೂ ಗಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ರಿಷಭ್ ಗೆ ಇಂತಹ ರಿಸ್ಕ್ ಬೇಕಾ ಎಂಬ ಪ್ರಶ್ನೆ ಕೇಳಿಬಂದಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮೂರು ಮಾದರಿಗಳಲ್ಲಿ ಸ್ಮೃತಿ ಮಂದಾನಾ ಶತಕ: ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

ಆರ್ ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಮಹಿಳೆಗೆ ವಂಚನೆ ಮಾಡಿದ ಆರೋಪ

ಮುಂದಿನ ಸುದ್ದಿ
Show comments