Webdunia - Bharat's app for daily news and videos

Install App

ಕುಲದೀಪ್ ಯಾದವ್ ಗೆ ಔಟಾಗೋ ಎಂದು ರಿಷಬ್ ಪಂತ್ ಆವಾಜ್ (video)

Krishnaveni K
ಸೋಮವಾರ, 9 ಸೆಪ್ಟಂಬರ್ 2024 (09:00 IST)
Photo Credit: X
ಬೆಂಗಳೂರು: ಸ್ಟಂಪ್ ಹಿಂದುಗಡೆ ಎದುರಾಳಿ ಆಟಗಾರರನ್ನು ಕೆಣುಕುವುದರಲ್ಲಿ ರಿಷಬ್ ಪಂತ್ ನಂ.1. ಅವರು ಆಸ್ಟ್ರೇಲಿಯಾ ಆಟಗಾರರನ್ನೂ ಬಿಟ್ಟಿಲ್ಲ. ಇದೀಗ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಕುಲದೀಪ್ ಯಾದವ್ ರನ್ನು ಔಟಾಗು ಬೇಗ ಎಂದು ಕಿಚಾಯಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಭಾರತ ಎ ಮತ್ತು ಭಾರತ ಬಿ ತಂಡಗಳ ನಡುವಿನ ದುಲೀಪ್ ಟ್ರೋಫಿ ಪಂದ್ಯದಲ್ಲಿ ನಾಲ್ಕನೇ ದಿನದಾಟದಲ್ಲಿ ರಿಷಬ್ ಪಂತ್ ಮತ್ತು ಕುಲದೀಪ್ ನಡುವಿನ ತಮಾಷೆಯ ಮಾತುಕತೆ ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದೆ. ಕುಲದೀಪ್ ಭಾರತ ಎ ತಂಡದ ಪರ ಆಡಿದರೆ ರಿಷಬ್ ಭಾರತ ಬಿ ತಂಡದ ಪರ ಆಡುತ್ತಿದ್ದರು.

ಭಾರತ ಎ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ ಜಿಗುಟಿನ ಆಟವಾಡುತ್ತಿದ್ದ ಕುಲದೀಪ್ ಯಾದವ್ ರನ್ನು ರಿಷಬ್ ಕೆಣಕಿದ್ದಾರೆ. ವಿಕೆಟ್ ಕೀಪರ್ ಆಗಿ ವಿಕೆಟ್ ಹಿಂದುಗಡೆ ನಿಂತು ಕುಲದೀಪ್ ಗೆ ಕೇಳುವಂತೆ ತಮ್ಮ ಸಹ ಆಟಗಾರನಿಗೆ ‘ಇವನಿಗೆ ಸಿಂಗಲ್ಸ್ ತೆಗೆಯಲು ಬಿಡು. ಇವನಿಗಾಗಿ ನಾನು ಜಬರ್ದಸ್ತ್ ಪ್ಲ್ಯಾನ್ ಮಾಡಿದ್ದೇನೆ’ ಎಂದು ಕಿಚಾಯಿಸಿದ್ದಾರೆ.

ರಿಷಬ್ ಮಾತು ಕೇಳಿ ಕುಲದೀಪ್ ಕೂಡಾ ಸುಮ್ಮನೆ ಕೂರಲಿಲ್ಲ. ‘ಆಯ್ತು ಮಾರಾಯ. ನೀನು ಸ್ವಲ್ಪ ಹೊತ್ತು ಸುಮ್ಮನಿರು’ ಎಂದಿದ್ದಾರೆ. ಇದಕ್ಕೆ ರಿಷಬ್ ‘ಹಾಗಿದ್ದರೆ ಬೇಗ ಔಟಾಗು’ ಎಂದಿದ್ದಾರೆ. ಇನ್ನೊಮ್ಮೆ ‘ಎಲ್ಲರೂ ಹತ್ತಿರ ಬನ್ನಿ, ಇವನು ಸಿಂಗಲ್ಸ್ ತೆಗೆದುಕೊಳ್ಳುತ್ತಾನೆ’ ಎಂದು ರಿಷಬ್ ಹೇಳಿದ್ದಕ್ಕೆ ‘ನಾನು ತೆಗೆದುಕೊಳ್ಳಲ್ಲ’ ಎಂದಿದ್ದಾರೆ ಕುಲದೀಪ್. ಆಗ ‘ಹಾಗಿದ್ದರೆ ಅಮ್ಮನ ಮೇಲೆ ಆಣೆ ಮಾಡು’ ಎಂದಿದ್ದಾರೆ. ಇದೇ ರೀತಿ ಕುಲದೀಪ್ ಕ್ರೀಸ್ ನಲ್ಲಿದ್ದಷ್ಟು ಹೊತ್ತು ಇಬ್ಬರ ನಡುವೆ ತಮಾಷೆ ನಡೆಯುತ್ತಲೇ ಇತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರು

ಮಹಿಳಾ ಚೆಸ್ ವಿಶ್ವ ಕಪ್ ಗೆದ್ದು ಚಾರಿತ್ರಿಕ ಸಾಧನೆ ಮೆರೆದ ಭಾರತದ ದಿವ್ಯಾ ದೇಶ್‌ಮುಖ್‌

ರಿಷಭ್ ಪಂತ್ ಎದೆಗಾರಿಕೆ, ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಸ್ಫೂರ್ತಿ: ಗೌತಮ್ ಗಂಭೀರ್ ಬಿಚ್ಚುಮಾತು

ನಿಮ್ಗೆ ಸ್ವಿಂಗ್ ಆಡುವ ಯೋಗ್ಯತೆ ಇಲ್ಲ ಎಂದ ಹ್ಯಾರಿ ಬ್ರೂಕ್ ಗೆ ಕೆಎಲ್ ರಾಹುಲ್ ಉತ್ತರ ಏನಿತ್ತು ಗೊತ್ತಾ

Video: ಡ್ರಾ ಮಾಡಿಕೊಳ್ಳೋಣ್ವಾ ಎಂದರೆ ತಡಿ ಸೆಂಚುರಿ ಮಾಡ್ತೀನಿ ಎಂದ ರವೀಂದ್ರ ಜಡೇಜಾ

ಮುಂದಿನ ಸುದ್ದಿ
Show comments